ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಆರ್ಭಟ ತೀವ್ರಗೊಂಡಿದ್ದು, ಇನ್ನೂ ಐದು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಜು.17, 18ರಂದು ಯೆಲ್ಲೋ, 19, 20ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ ಹಾಗೂ ವಿಜಯಪುರದಲ್ಲಿ ಜು.17ರಂದು ಯೆಲ್ಲೋ ಅಲರ್ಟ್, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಇರಲಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರದಲ್ಲಿ ಜು.20, 21ರಂದು ಯೆಲ್ಲೋ ಅಲರ್ಟ್ ಇರಲಿದ್ದು, ಈ ಅವಧಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದ್ದಾರೆ.
ಕೊಡಗಲ್ಲಿ ಧಾರಾಕಾರ
ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 39.33 ಮಿ.ಮೀ. ಮಳೆ ಬಿದ್ದಿದೆ. ಮೈಸೂರು ನಗರದಲ್ಲಿ ಜೋರು ಮಳೆಯಾದರೆ, ಮಂಡ್ಯ ಜಿಲ್ಲೆಯಲ್ಲಿ ಇಡೀದಿನ ಜಡಿ ಮಳೆ ಸುರಿಯಿತು.
ದೇಗುಲದಲ್ಲಿ ಸಿಲುಕಿದವರ ರಕ್ಷಣೆ
ನಾಗರಾಳ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಚಿಮ್ಮನಚೋಡದ ಶ್ರೀ ಸಂಗಮೇಶ್ವರ ದೇಗುಲಕ್ಕೆ ಬುಧವಾರ ರಾತ್ರಿ ನೀರು ನುಗ್ಗಿದ್ದು, ಅಲ್ಲಿಯೇ ಮಲಗಿದ್ದ ಮಾರುತಿ ಹಡಪದ ಮತ್ತು ಚಂದ್ರಪ್ಪ ಭಕ್ತಂಪಳ್ಳಿ ಎಂಬುವರು ಸಿಲುಕಿ ಕೊಂಡಿದ್ದರು. ರಾತ್ರಿಯಿಡಿ ನೀರಿನಲ್ಲಿಯೇ ನಿಂತಿದ್ದ ಅವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಲಾಯಿತು.
ತುಂಗಾ ನದಿಗೆ ಗಂಗಾ ಪೂಜೆ
ಶೃಂಗೇರಿ: ಪ್ರಕೃತಿ ಆರಾಧನೆಯಂತೆ ಶ್ರೀ ಶಾರದಾ ಮಠದಲ್ಲಿ ಪಾರಂಪರಿಕವಾಗಿ ಬಂದ ಪದ್ಧತಿ ಪ್ರಕಾರ ಕರ್ಕಾಟಕ ಸಂಕ್ರಮಣದ ಗುರುವಾರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತುಂಗಾ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿದರು. ಕರ್ಕಾಟಕ ಮಾಸದ ಸಮಾಪ್ತಿ ಆಗುವ ತನಕ ಪ್ರತಿ ಶುಕ್ರವಾರ ಹಾಗೂ ಸೋಮವಾರ ರಾತ್ರಿ ಶ್ರೀಮಠದ ಪುರೋಹಿತರಿಂದ ತುಂಗಾ ನದಿಗೆ ಗಂಗಾ ಪೂಜೆ, ದೀಪಾರಾಧನೆ ನೆರವೇರುತ್ತವೆ. ಸಿಂಹ ಸಂಕ್ರಮಣ ಕಾಲದಲ್ಲಿ ಗಂಗಾಪ್ರೀತಿಗಾಗಿ ಶ್ರೀ ಚಂದ್ರಮೌಳೀಶ್ವರ ಪೂಜಾ ವಿಧಿಗಳು ಮುಗಿದ ಬಳಿಕ ಪುರೋಹಿತರು ತುಂಗಾ ನದಿಯಲ್ಲಿ ಗಂಗಾ ಪೂಜೆ ನೆರವೇರಿಸುತ್ತಾರೆ.
ಹುಬ್ಬಳ್ಳಿಯಲ್ಲಿ ವರ್ಷಧಾರೆ
ಕರೊನಾ ಆತಂಕದ ಮಧ್ಯೆ ಸತತ ಸುರಿಯುತ್ತಿರುವ ಪುನರ್ವಸು ಮಳೆ ಹುಬ್ಬಳ್ಳಿಯಲ್ಲಿ ತಾಪತ್ರಯ ಹೆಚ್ಚಿಸಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತು ಖರೀದಿಗೆ ಸಡಿಲಿಕೆ ಇರುವುದರಿಂದ ಜನರ ಓಡಾಟ ಹೆಚ್ಚಾಗಿತ್ತು. ಆದರೆ, ಮಳೆಯೂ ಜೋರಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಗದಗ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ.
ಮಲಪ್ರಭಾ ಒಳ ಹರಿವು ಹೆಚ್ಚಳ
ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಮಳೆ ಮುಂದುವರಿದಿದ್ದು, ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಎರಡು ಮನೆಗಳು ಕುಸಿದಿದ್ದು, ಒಂದು ತಿಂಗಳ ಮಗುವಿಗೆ ಗಾಯವಾಗಿದೆ. ಮಲಪ್ರಭಾ ನದಿ ಒಳಹರಿವು 1,795 ಕ್ಯೂಸೆಕ್​ಗೆ ಏರಿಕೆಯಾಗಿದೆ. ಘಟಪ್ರಭಾ ನದಿಯಲ್ಲಿ 4,204 ಕ್ಯೂಸೆಕ್ ಒಳಹರಿವು ಇದೆ. ಬೆಳಗಾವಿ ನಗರದಲ್ಲಿ ನಸುಕಿನ ಜಾವವೇ ಆರಂಭವಾದ ಮಳೆ, ದಿನವಿಡೀ ಸುರಿಯಿತು. ಇದರಿಂದಾಗಿ ವಾಹನ ಸವಾರು ಪರದಾಡಿದರು. ಮಾರುಕಟ್ಟೆ ಪ್ರದೇಶದಲ್ಲೂ ವ್ಯಾಪಾರ-ವಹಿವಾಟಿಗೂ ತೊಡಕಾಯಿತು. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಖಾನಾಪುರ ತಾಲೂಕು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ.
ಕರಾವಳಿಯಲ್ಲಿ ಉತ್ತಮ
ದ.ಕ., ಉಡುಪಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆ ಸುರಿಯುತ್ತಿದೆ. ಘಟ್ಟ ಹಾಗೂ ತಪ್ಪಲು ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಇನೂ ್ನೆಲ ದಿನ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೆಲವೆಡೆ ಸಂಚಾರಕ್ಕೆ ತೊಂದರೆಯಾದರೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕೂಡ ಇಲ್ಲವಾಗಿದೆ.
ಅಂತಿಮ ತೀರ್ಪಲ್ಲಿ ಹೆಚ್ಚುವರಿ ನೀರು
ನವದೆಹಲಿ: ಮಹದಾಯಿ ಜಲ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಲಿರುವ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ಹೆಚ್ಚುವರಿ ನೀರು ಸಿಗುವ ನಿರೀಕ್ಷೆ ಇದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಆಗಸ್ಟ್ ಅಂತ್ಯಕ್ಕೆ ಪ್ರಕರಣದ ವಿಚಾರಣೆ ಆರಂಭಗೊಳ್ಳಲಿದೆ. ನಮ್ಮ ಹಿತಾಸಕ್ತಿಯನ್ನು ಗೋವಾ ಕ್ಕೋಸ್ಕರ ಬಲಿ ಕೊಡುವುದಿಲ್ಲ. ಮಹದಾಯಿ ಅಧಿಸೂಚನೆ ಹೊರಡಿಸಿದರೂ ಗೋವಾ ತಕರಾರು ತೆಗೆಯುತ್ತಿದೆ. ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ ಎಂದರು.
8 ವರ್ಷದಲ್ಲಿ ಕಟ್ಟಿದ ಸೇತುವೆ ಒಂದು ತಿಂಗಳೂ ಉಳಿಯಲಿಲ್ಲ; ಕುಸಿದುಬಿದ್ದ ಬೆನ್ನಲ್ಲೇ ಸಿಎಂ ವಿರುದ್ಧ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
