ಬೆಂಗಳೂರು:ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮಂಗಳವಾರ ಪ್ರತ್ಯೇಕ ಕಡೆ ಸಿಡಿಲು ಬಡಿದು ಎಂಟು ಮಂದಿ ಸಾವಿಗೀಡಾಗಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕು ಬೈರಾಲುರ ಗ್ರಾಮದಲ್ಲಿ ಮೆಣಸಿನಕಾಯಿ ಹೊಲದಲ್ಲಿ ಕಳೆ ಕೀಳಲು ಹೋಗಿದ್ದ ಕವಿತಾ(32) ಮತ್ತು ಗಂಗಮ್ಮ(45), ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗೆದಗೇರಿ ತಾಂಡಾದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ರೂಪಾ ಚೌವಾಣ್ (14), ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ವಿಜಯಪುರ ಜಿಲ್ಲೆ ಚಡಚಣದ ಹತ್ತಳ್ಳಿ ಗ್ರಾಮದಲ್ಲಿ ಧರೆಪ್ಪ ಧರ್ಮಪ್ಪ ಬಿರಾದಾರ (45), ಜಮೀನಿನಲ್ಲಿ ಹಿಂಗಾರಿ ಜೋಳ ಬಿತ್ತನೆ ಮಾಡಲು ತೆರಳುತ್ತಿದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕಂಚಗಾರಗಲ್ಲಿ ರೈತರಾದ ದಯಾನಂದಗೌಡ ಶಂಕರಗೌಡ ಪಾಟೀಲ (48) ಹಾಗೂ ಪರಮೇಶಪ್ಪ ಕೊಟ್ರಪ್ಪ ಕಾಳಮ್ಮನವರ (55), ಬೆಳಗಾವಿ ಜಿಲೆ ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದ ರೈತ ಮಹಿಳೆಯರಾದ ಯಲ್ಲವ್ವ ವಿಠ್ಠಲ ಇಂಚಲ (30), ಭಾಗವ್ವ ಮಹಾದೇವಪ್ಪ ಕಡಕೋಳ (50) ಸಿಡಿಲಿಗೆ ಬಲಿಯಾದವರು. ರೇಣವ್ವ ರುದ್ರಪ್ಪ ಮಾಳಗಿ (20) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಸಿಡಿಲು ಬಡಿದು ಸವದತ್ತಿ ತಾಲೂಕಿನ ನವಿಲುತೀರ್ಥದ ಗುಡ್ಡದ ಬಳಿ 47 ಕುರಿಗಳು ಅಸುನೀಗಿವೆ.
ಅತಿವೃಷ್ಟಿಗೆ 317 ಕೆರೆ ಹಾನಿ:ಅತಿವೃಷ್ಟಿಯಿಂದಾಗಿ ಕೆರೆ ಕಟ್ಟೆಗಳು ಹಾನಿಗೊಳಗಾಗಿದ್ದು, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲ ಕೆರೆಗಳು ಏರಿ ಒಡೆದಿದ್ದರೆ, ಇನ್ನು ಕೆಲ ಕೆರೆಗಳ ಕೋಡಿ ಹಾನಿಗೊಳಗಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 259 ಕೆರೆ ಸೇರಿ ರಾಜ್ಯದಲ್ಲಿ 317 ಕೆರೆ ಹಾನಿಗೊಳಗಾಗಿವೆ. ಯಾದಗಿರಿ ಜಿಲ್ಲೆಯಲ್ಲಿ 25, ಬೀದರ್ ಜಿಲ್ಲೆ-13, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 3, ಚಿಕ್ಕಮಗಳೂರು-4, ಬೆಂಗಳೂರು ನಗರ 5 ಮತ್ತು ತುಮಕೂರು ಜಿಲ್ಲೆಯಲ್ಲಿ 2 ಕೆರೆಗಳು ಹಾನಿಗೊಳಗಾಗಿವೆ. ಬಜೆಟ್​ನಲ್ಲಿ ಒದಗಿಸಿರುವ ಹಣದಲ್ಲಿ ನಿಗಧಿತ ಕಾಮಗಾರಿಗಳನ್ನು ಮಾತ್ರ ಮಾಡಲಾಗಿದೆ. ಶೀಘ್ರವೇ ಹೆಚ್ಚುವರಿ ನೆರವು ಒದಗಿಸುವಂತೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇಲಾಖೆ ಮುಖ್ಯ ಇಂಜಿನಿಯರ್ ಮೃತ್ಯುಂಜಯ ಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅ.21ರಂದು ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿ ಬಾಧಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬುಧವಾರ ಬೆಳಗ್ಗೆ 9.15ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು ಬಳ್ಳಾರಿಯ ಜಿಂದಾಲ್ ತಲುಪುವರು. ಅಲ್ಲಿಂದ 10.15ಕ್ಕೆ ವಾಯುಪಡೆ ಹೆಲಿಕಾಪ್ಟರ್ ಮೂಲಕ 11.45ಕ್ಕೆ ಕಲಬುರಗಿ ತಲುಪಿ, ಹಿರಿಯ ಅಧಿಕಾರಿಗಳ ಸಭೆ ಮಾಡಲಿದ್ದಾರೆ. ಮಧ್ಯಾಹ್ನ 12.45ಕ್ಕೆ ಅತಿವೃಷ್ಟಿ ಹಾಗೂ ನೆರೆಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು. 2.50ಕ್ಕೆ ವಿಜಯಪುರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸುವರು.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧೆಡೆ ಅ.23ರವರೆಗೆ ಸಾಧಾರಣದಿಂದ ಭಾರಿ ಮಳೆ ಬೀಳುವ ನಿರೀಕ್ಷೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಅ.21ಕ್ಕೆ ಹಾಗೂ ಅ.22ರಂದು ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ತುಮಕೂರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಅ.24ರ ಬಳಿಕ ಮುಂಗಾರು ಕ್ಷಿಣಿಸುವ ಸಾಧ್ಯತೆ ಹೆಚ್ಚಾಗಿದ್ದು, ಕರಾವಳಿ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆ ಬೀಳಲಿರುವ ಕಾರಣಕ್ಕೆ ಅ.23ರವರೆಗೂ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಹು-ಧಾ.ದಲ್ಲಿ ಭಾರಿ ಮಳೆ:ಧಾರವಾಡ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ 1 ತಾಸಿಗೂ ಹೆಚ್ಚು ಕಾಲ ಭಾರಿ ಮಳೆ ಸುರಿ ಯಿತು. ಹಾವೇರಿ ಜಿಲ್ಲೆಯಲ್ಲೂ ಗುಡುಗು, ಸಿಡಿಲಿನ ಧಾರಾಕಾರ ಮಳೆ ಬಿತ್ತು. ಮಳೆಗೆ ಈಗಾಗಲೆ ಕಟಾವು ಮಾಡಿದ್ದ ಗೆಜ್ಜೆಶೇಂಗಾ, ಮೆಕ್ಕೆಜೋಳ, ಬಿಟಿಹತ್ತಿಯೆಲ್ಲಾ ಮಣ್ಣು ಪಾಲಾಯಿತು.
ನನ್ನ ಗಂಡ ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದ್ದಾನೆ. ಅವನ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಇನ್ನು ನಾನು ಕಾಳಜಿ ಕೇಂದ್ರದಲ್ಲಿದ್ದೇನೆ. ಇರುವ ನನ್ನ ಒಬ್ಬನೇ ಒಬ್ಬ ಮಗ ಅವನ ತಂದೆಯನ್ನು ನೋಡಬೇಕೆ? ನನ್ನನ್ನು ನೋಡಿಕೊಳ್ಳಬೇಕೆ? ಹಾಳಾಗಿ ಹೋಗಿರುವ ಮನೆಯನ್ನು ನೋಡಿಕೊಳ್ಳಬೇಕೆ? ಅರ್ಥವಾಗುತ್ತಿಲ್ಲ. ನಮ್ಮ ಬದುಕೇ ಮೂರಾಬಟ್ಟೆಯಾಗಿದೆ. ಭೀಮಾ ನದಿ ಪ್ರವಾಹದಲ್ಲಿ ತನ್ನ ಮನೆ ಮಠ ಕಳೆದುಕೊಂಡ ಕಲಬುರಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದ ಮಲ್ಲವ್ವ ತನ್ನ ಸ್ಥಿತಿಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಲೇ ವಿಜಯವಾಣಿಗೆ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
