ಬೆಂಗಳೂರು:ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸಾಗಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರವೂ ವರುಣಾರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಅ.16ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ, ತುಮಕೂರು, ಚಿಕ್ಕಮಗಳೂರು, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ಮುಂದಿನ 24 ಗಂಟೆ ಹೆಚ್ಚು ಮಳೆ ಬೀಳುವುದರಿಂದ ಯೆಲ್ಲೋ ಅಲರ್ಟ್ ಇರಲಿದೆ. ಉಳಿದೆಡೆ ಹಗುರದಿಂದ ಕೂಡಿದ ಮಳೆಯಾಗಲಿದೆ.
ಉತ್ತಮ ವರ್ಷಧಾರೆ:ಅ.1ರಿಂದ ಅ.15ರವರೆಗೆ ರಾಜ್ಯಾದ್ಯಂತ 80 ಮಿಮೀ ಮಳೆ ಬದಲಾಗಿ 118 ಮಿ.ಮೀ. ಮಳೆಯಾಗಿದ್ದು, ಶೇ.47 ವಾಡಿಕೆಗಿಂತ ಹೆಚ್ಚು ಬಿದ್ದಿದೆ. ದಕ್ಷಿಣಒಳನಾಡಿನಲ್ಲಿ ಶೇ.76, ಉತ್ತರ ಒಳನಾಡಿನಲ್ಲಿ ಶೇ.64 ವಾಡಿಕೆಗಿಂತ ಹೆಚ್ಚು ಮಳೆಯಾದರೆ, ಮಲೆನಾಡಿನಲ್ಲಿ ವಾಡಿಕೆಯಷ್ಟೇ ಹಾಗೂ ಕರಾವಳಿಯಲ್ಲಿ ವಾಡಿಕೆಗಿಂತ ಶೇ.14 ಕಡಿಮೆ ಮಳೆ ಸುರಿದಿದೆ.
ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!
Sign in to your account
Please enter an answer in digits:seven + 3 =
Remember me
