ಬೆಂಗಳೂರು:ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಗುರುಮಠಕಲ್ ಸಮೀಪದ ಚಂಡರಕಿ ಗ್ರಾಮದಲ್ಲಿ ಮೊಗಲಪ್ಪ ಗದ್ವಾಲ್ (65) ಎಂಬಾತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ.
ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಳೆ ಬಿರುಸುಗೊಂಡಿದ್ದು, ನಿರಂತರ ಸುರಿಯುತ್ತಿದೆ. ಹಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಮಲೆನಾಡಿನಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ವರುಣನ ಆರ್ಭಟ ಮತ್ತೆ ಶುರುವಾಗಿದ್ದು, ಜಲಾಶಯಗಳ ಒಳಹರಿವು ಏರಿಕೆ ಕಂಡಿದೆ. ಚಿಂಚೋಳಿ ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನ ಜಾವ ಧಾರಾಕಾರ ಮಳೆ ಸುರಿದಿದೆ. ಕೆಲ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ, ಬಹುತೇಕ ಹಳ್ಳ ತುಂಬಿ ಹರಿಯುತ್ತಿವೆ.
ಮೈದುಂಬಿದ ಎತ್ತಪೋತ:ಕಲಬುರಗಿ ಜಿಲ್ಲೆಯ ಪ್ರಮುಖ ಜಲಪಾತ ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ಎತ್ತಪೋತ ಮೈದುಂಬಿ ಹರಿಯುತ್ತಿದೆ. ಇದಲ್ಲದೆ ಮಾಣಿಕಪುರ ಜಲಪಾತ ಸೇರಿ ಸಣ್ಣ-ಪುಟ್ಟ ಝುರಿಗಳು ನೀರಿನಿಂದ ನಳನಳಿಸುತ್ತಿವೆ.
ನದಿಯಲ್ಲಿ ಸಿಲುಕಿದವರ ರಕ್ಷಣೆ: ಸೇಡಂ ತಾಲೂಕಿನ ಬಿಬ್ಬಳ್ಳಿ-ಕಾಚೂರ ಮಧ್ಯೆ ಕಾಗಿಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ 8 ಯುವ ಕೃಷಿಕರನ್ನು ಪ್ರಾಣದ ಹಂಗು ತೊರೆದು ಮೀನುಗಾರರು ರಕ್ಷಿಸಿದ್ದಾರೆ. ಈ ಕೃಷಿಕರು ಜಮೀನುಗಳಿಗೆ ತೆರಳಲು ನದಿಗೆ ಇಳಿದಿದ್ದಾರೆ. ಆದರೆ ತೆಲಂಗಾಣದಲ್ಲಿ ಭಾರಿ ಮಳೆಯಾಗಿದ್ದರಿಂದ ದಿಢೀರ್ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಅಪಾಯಕ್ಕೆ ಸಿಲುಕಿದ್ದರು.
ಸಮಾಧಿಯಿಂದ ಶವ ತೆಗೆದು ವಿಕೃತಿ:ಹರಪನಹಳ್ಳಿ ತಾಲೂಕಿನ ಅರೇ ಮಜ್ಜಿಗೆರೆ ಗ್ರಾಮದ ರುದ್ರಭೂಮಿಯಲ್ಲಿ ಸಮಾಧಿಯಿಂದ ಮೃತದೇಹ ಹೊರ ತೆಗೆದು ವಿಕೃತಿ ಮೆರೆಯಲಾಗಿದೆ. ಮೇ.25ರಂದು ಮೃತಪಟ್ಟಿದ್ದ ಭೋವಿ ರಾಮಪ್ಪ (45) ಇವರನ್ನು ಗ್ರಾಮದ ಸ್ಮಶಾನದಲ್ಲಿ ಹೂಳಲಾಗಿತ್ತು. ಜು.1ರ ರಾತ್ರಿ ಕಿಡಿಗೇಡಿಗಳು ಸಮಾಧಿಯಿಂದ ಶವ ಹೊರ ತೆಗೆದು ಕೈ, ಕಾಲುಗಳಿಗೆ ಗಾಯ ಮಾಡಿ ವಿಕೃತಿ ಮೆರೆದಿದ್ದಾರೆ. ಇದರಿಂದ ಬೇಸರಗೊಂಡ ಮೃತನ ಸಂಬಂಧಿಕರು, ಕಟ್ಟಿಗೆಗಳಿಂದ ಶವವನ್ನು ಸುಟ್ಟು ಮತ್ತೊಮ್ಮೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಮಳೆ ಬರುತ್ತಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೂವರು ನೀರುಪಾಲು
ಪ್ರತ್ಯೇಕ ಘಟನೆಗಳಲ್ಲಿ ಮೀನು ಹಿಡಿಯಲು ನದಿಗಿಳಿದ ಮೂವರು ಯುವಕರು ನೀರುಪಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಬಾರ್ಕರು ಎಂಬಲ್ಲಿ ಹೊಸಾಳ ಗ್ರಾಮದ ಹರ್ಷ(25) ಮತ್ತು ಬಿಕಾಂ ವಿದ್ಯಾರ್ಥಿ ಕಾರ್ತಿಕ್ (21) ಎಂಬ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಎಡಮಂಗಲ ಎಂಬಲ್ಲಿ ಪ್ರಕಾಶ್(25) ಎಂಬಾತ ಕುಮಾರಧಾರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರದಲ್ಲಿ ಅಡಗಿ ಕುಳಿತಿರೋ ಬೆಕ್ಕನ್ನು ಗುರುತಿಸಿದ್ರೆ ನೀವೇ ಗ್ರೇಟ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eight =
Remember me
