ಬೆಂಗಳೂರು:ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಮಳೆ ಆರ್ಭಟಿಸಿದ್ದು, ಕೆಲವೆಡೆ ಅಪಾರ ಪ್ರಮಾಣದ ಬೆಳೆಹಾನಿ ಮತ್ತಿತರ ನಷ್ಟಗಳು ಸಂಭವಿಸಿವೆ. ಮತ್ತೊಂದೆಡೆ ಸಿಡಿಲಿಗೆ ಒಬ್ಬರು ಬಲಿಯಾಗಿದ್ದಾರೆ.
ಕೊಡಗು ಜಿಲ್ಲೆಯ ವಿವಿಧೆಡೆ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೋಮವಾರವೂ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಸಿದ್ದಾಪುರ, ಸುಂಟಿಕೊಪ್ಪ, ನಾಪೋಕ್ಲು ಸೇರಿ ಹಲವೆಡೆ ಮಳೆ ಮುಂದುವರಿದಿದೆ. ಜಿಲ್ಲೆಯಲ್ಲಿ ಸೋಮವಾರದಿಂದ ಎಲ್ಲೋ ಅಲರ್ಟ್ ಘೊಷಣೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಪಾಪಣ್ಣ (60) ಮೃತಪಟ್ಟಿದ್ದಾರೆ. ಇವರ ಮೊಮ್ಮಗಳು, ಅಳಿಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಪಾಂಡವಪುರ ತಾಲೂಕಿನ ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮೈಸೂರು, ರಾಮನಗರ, ಹಾಸನ, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಿರುಸಿನ ಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಅಳಪೆ ಪಡೀಲಿನಲ್ಲಿ ಮನೆಯೊಂದು ಭಾರಿ ಮಳೆಗೆ ಕುಸಿದುಬಿದ್ದಿದೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಾಳಿಮಳೆಗೆ ಪರ್ವತಮುಖಿ ಸಮೀಪ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಮಂಗಳೂರು ನಗರದ ಕೆಪಿಟಿಯ ಆವರಣದಲ್ಲಿರುವ ಅಕ್ಕಿ ಶೇಖರಣಾ ಗೋದಾಮಿಗೆ ಮಳೆ ನೀರು ನುಗ್ಗಿ, ಒಂದಷ್ಟು ಪ್ರಮಾಣದ ಅಕ್ಕಿ ಹಾಳಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಮಳೆಯಿಂದ ಹಾನಿಯಾಗಿದೆ. ಉತ್ತರ ಕನ್ನಡ, ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದು ಅನಾಹುತ ಉಂಟು ಮಾಡಿದೆ. ಹಾವೇರಿಯ ಗುತ್ತಲದಲ್ಲಿ ಗುಡುಗು, ಸಿಡಿಲು, ಬಿರುಗಾಳಿ, ಮಳೆ ರಭಸಕ್ಕೆ ಹತ್ತಾರು ಮರ ಬಿದ್ದಿವೆ. ಬೆಳೆಗಳು ಹಾನಿಯಾಗಿವೆೆ. ಶಿರಸಿ ತಾಲೂಕಿನ ವಿವಿಧೆಡೆ ಗಾಳಿ, ಮಳೆಗೆ 54 ಮನೆಗಳಿಗೆ ಧಕ್ಕೆಯಾಗಿದೆ.
ಇದನ್ನೂ ಓದಿ:ಗಂಡ ಹೆಂಡತಿಯಾಗಲು ಅಡ್ಡಿಯಾದ ಕರ್ನಾಟಕ-ಕೇರಳ ಬಾರ್ಡರ್!
ಮಲೆನಾಡಲ್ಲಿ ಆರ್ಭಟ:ಶಿವಮೊಗ್ಗ ನಗರ ಸೇರಿ ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸಾಗರದಲ್ಲಿ ಉತ್ತಮ ಮಳೆಯಾಗಿದೆ. ಬೆಳಗಿನ ಜಾವ ಭಾರಿ ಗಾಳಿ-ಮಳೆಯಿಂದ ಮರಗಿಡಗಳು ಬಿದ್ದು ವಿದ್ಯುತ್ ಕಂಬಗಳು ಧರೆಗೆ ಉರುಳಿದವು. ಮನೆ-ಶೆಡ್​ಗಳಿಗೆ ಹಾಕಿದ್ದ ತಗಡುಗಳು ಹಾರಿಹೋಗಿವೆ. ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಕಡೆ ವರುಣ ಅಬ್ಬರಿಸಿದ್ದಾನೆ.
52.26 ಲಕ್ಷ ರೂ. ಅಂದಾಜು ನಷ್ಟ
ದಾವಣಗೆರೆ ಜಿಲ್ಲಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೂ ಗುಡುಗು ಸಹಿತ ಮಳೆಯಾಗಿದ್ದು, ಒಟ್ಟು 52.26 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ 870.50 ಎಕರೆ ಪ್ರದೇಶದ ಬೆಳೆಹಾನಿಯಾಗಿದೆ. ಜಗಳೂರು ತಾಲೂಕು ಬಸವನಕೋಟೆ ಗ್ರಾಮದ ಹಗರಿ ಹಳ್ಳ ತುಂಬಿ ಹರಿಯುತ್ತಿದೆ. ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿಯಲ್ಲಿ ಭತ್ತಕ್ಕೆ ಹಾನಿಯಾಗಿದೆ. ಹರಪನಹಳ್ಳಿ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಮಳೆ ನೀರು ತುಂಬಿ ಸಿಲುಕಿಕೊಂಡ ಇಂಜಿನಿಯರಿಂಗ್ ಸಿಬ್ಬಂದಿಯೊಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ರಕ್ಷಿಸಿದರು.
ರೈತರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಿರುಗಾಳಿ; ನೆಲಕಚ್ಚಿದ ತೆಂಗು, ಬಾಳೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
