ಶಿವಮೊಗ್ಗ:ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಭಾನುವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಿಎಂ ಬಿ.ಎಸ್​. ಯಡಿಯೂರಪ್ಪ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದೇ ಹೆಲಿಕಾಪ್ಟರ್​ನಲ್ಲಿ ಬಂದಿಳಿದರು.
ಅರೆ! ಇದೇನಿದು? ರಾಜಕೀಯ ಬದ್ಧ ವೈರಿಗಳು ಒಂದೇ ಹೆಲಿಕಾಪ್ಟರ್​ನಲ್ಲಿ ಬಂದಿಳಿದರಾ? ಎಂದು ಅಚ್ಚರಿಪಡಬೇಕಿಲ್ಲ. ಹೆಲಿಕಾಪ್ಟರ್​ ಒಂದೇ ಆದರೂ ಬಂದಿಳಿದ ಸಮಯ ಮಾತ್ರ ಬೇರೆ ಬೇರೆ.
ಹೌದು, ತರೀಕೆರೆ ಮಾಜಿ ಶಾಸಕ ಜಿ.ಎಚ್​.ಶ್ರೀನಿವಾಸ್​ ಪುತ್ರಿಯ ಮದುವೆ ಸಮಾರಂಭ ಶಿವಮೊಗ್ಗದಲ್ಲಿ ಭಾನುವಾರ ನಿಗದಿಯಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ವಿಟಿ-ಎಚ್​ಕೆಬಿ ಹೆಸರಿನ ಹೆಲಿಕಾಪ್ಟರ್​ಗೆ ಮೊದಲೇ ಬುಕ್​ ಆಗಿತ್ತು. ಭಾನುವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ಹೊರಡಬೇಕಿತ್ತು.
ಆದರೆ ಭಾನುವಾರ ಬೆಳಗ್ಗೆ ಸಿಎಂ ಯಡಿಯೂರಪ್ಪಗೆ ಶಿವಮೊಗ್ಗಕ್ಕೆ ಬರಲು ಅದೇ ಹೆಲಿಕಾಪ್ಟರನ್ನು ದಿಢೀರ್​ ಬುಕ್​ ಮಾಡಿದ್ದರಿಂದ ಸಿಎಂ ಅವರನ್ನು ಬೆಳಗ್ಗೆ 8.40ಕ್ಕೆ ಕರೆತಂದ ಹೆಲಿಕಾಪ್ಟರ್​ ಮತ್ತೆ ಬೆಂಗಳೂರಿಗೆ ಮರಳಿ ಸಿದ್ದರಾಮಯ್ಯ ಅವರನ್ನು ಮಧ್ಯಾಹ್ನ 12.05ಕ್ಕೆ ಕರೆತಂದಿತು.
ಬಿಎಸ್​ವೈ ಭಾನುವಾರ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದು, ಹೆಲಿಕಾಪ್ಟರ್​ ಮಧ್ಯಾಹ್ನ 3.30ಕ್ಕೆ ಸಿದ್ದರಾಮಯ್ಯ ಅವರನ್ನು ಬದಾಮಿಗೆ ಕರೆದೊಯ್ಯಲಿದೆ. ಸೋಮವಾರ ಬೆಳಗ್ಗೆ 9ಕ್ಕೆ ಶಿವಮೊಗ್ಗಕ್ಕೆ ಅದೇ ಹೆಲಿಕಾಪ್ಟರ್​ ಬಂದು ಸಿಎಂ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಿದೆ.
ಅಪಘಾತಕ್ಕೀಡಾದ ಕಾರುಗಳು, ಬಿಜೆಪಿ ಮುಖಂಡನ ಎದೆಗೆ ಪೆಟ್ಟು

ಸಾವಿನ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ರಾಜಕೀಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
