ಬೆಂಗಳೂರು:ಕರೊನಾ ವೈರಸ್ ತಂದಿರುವ ಲಾಕ್​ಡೌನ್ ರಾಜ್ಯದ ಸಾರ್ವಜನಿಕರ ಕಷ್ಟಕ್ಕೆ ದನಿಯಾಗಿದ್ದ ಸಹಾಯವಾಣಿಗಳ ಸದ್ದನ್ನೇ ಅಡಗಿಸಿದೆ! ಸಾರ್ವಜನಿಕರ ಬದುಕಿಗೆ ಅಗತ್ಯವಿರುವ ಸೇವೆ ಒದಗಿಸುವ ಉದ್ದೇಶದಿಂದ ಸಕ್ರಿಯವಾಗಿದ್ದ ಬಹುತೇಕ ಹೆಲ್ಪ್​ಲೈನ್​ಗಳಲ್ಲೀಗ ಕರೆ ಮಾಡಿದರೂ ಸ್ವೀಕರಿಸುವವರೇ ಇಲ್ಲ. ಕೆಲವು ಸ್ವೀಕರಿಸಿದರೂ ‘ಮತ್ತೊಂದು ನಂಬರ್ ಕೊಡ್ತೀವಿ, ಅದಕ್ಕೆ ಕರೆ ಮಾಡಿ’ ಎಂದು ಕರೆಯೇ ಕಡಿತವಾಗುತ್ತಿದೆ.
ಲಾಕ್​ಡೌನ್​ನಂಥ ಸಂಕಷ್ಟದ ಸಂದರ್ಭದಲ್ಲಿ ಸಹಾಯವಾಣಿ ಕೇಂದ್ರಗಳು ಸಂತ್ರಸ್ತರಿಗೆ ಹೇಗೆ ಸ್ಪಂದಿಸುತ್ತಿವೆ ಎಂಬುದನ್ನು ತಿಳಿಯಲು ವಿಜಯವಾಣಿ ರಿಯಾಲಿಟಿ ಚೆಕ್​ಗೆ ನಡೆಸಿದಾಗ ನಾಮ್ ಕೇ ವಾಸ್ತೆ ಹೆಲ್ಪ್​ಲೈನ್​ಗಳ ಅಸಲಿಯತ್ತು ಬಯಲಾಗಿವೆ.
ಎಲ್ಲ ಕಡೆ ಒಂದೇ ಉತ್ತರ: ಕೃಷಿ, ಆಹಾರ ಮತ್ತು ನಾಗರಿಕರ ಸರಬರಾಜು, ಸಾರ್ವಜನಿಕರ ಕುಂದುಕೊರತೆಗಳ ಇಲಾಖೆ, ಬೆಸ್ಕಾಂ, ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ರೇಷನ್ ವಿತರಣೆಯಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಡ್​ದಾರರು ಆಹಾರ ಇಲಾಖೆಯ ಸಹಾಯವಾಣಿ 1967ಕ್ಕೆ ಕರೆ ಮಾಡಿದರೂ ಯಾರೂ ಸ್ವೀಕರಿಸುತ್ತಿಲ್ಲ. ಇದೇ ಇಲಾಖೆಯ ಮತ್ತೊಂದು ಸಹಾಯವಾಣಿ ಸಂಖ್ಯೆ 180004259339ಕ್ಕೆ ಕರೆ ಮಾಡಿದರೆ ‘ದಿಸ್ ನಂಬರ್ ಈಸ್ ನಾಟ್ ವ್ಯಾಲಿಡ್’ ಎಂಬ ಉತ್ತರ ಸಿಗುತ್ತದೆ. ಇನ್ನು ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮಂಡಳಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ರಿಸೀವ್ ಆಗುತ್ತದೆಯಾದರೂ ಯಾವ ಸಿಬ್ಬಂದಿಯೂ ಮಾತನಾಡುವುದಿಲ್ಲ. ಕೃಷಿ ತೋಟಗಾರಿಕೆ ಉತ್ಪನ್ನ ಸಾಗಿಸಲು, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಕೃಷಿ ಇಲಾಖೆ ಸಹಾಯವಾಣಿ ಸಂಖ್ಯೆಗೆ ತುರ್ತು ಸಂದರ್ಭದಲ್ಲಿ ಕರೆ ಮಾಡುವ ರೈತರಿಗೆ ತಕ್ಷಣಕ್ಕೆ ಪರಿಹಾರವೇ ಸಿಗೋದಿಲ್ಲ.
ಬೇರೆ ನಂಬರ್ ತೆಗೆದುಕೊಳ್ಳಿ:ಕಾರ್ವಿುಕ ಇಲಾಖೆ ಆರಂಭಿಸಿರುವ ಸಹಾಯ ವಾಣಿ ಸಿಬ್ಬಂದಿ ಇದು ನಮ್ಮ ವ್ಯಾಪಿಗೆ ಬರುವುದಿಲ್ಲ. ಬೇರೆ ಸಂಖ್ಯೆ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆ ಸಂಖ್ಯೆಗೆ ಕರೆ ಮಾಡಿದರೂ ಸ್ವೀಕರಿಸೋರಿಲ್ಲ.
ಭಾಷೆ ಆಯ್ಕೆ ತಲೆಬೇನೆ:ಆರೋಗ್ಯ ಇಲಾಖೆ ಸಹಾಯವಾಣಿಗೆ ಕರೆ ಮಾಡಿದರೆ ಪ್ರಾರಂಭದಲ್ಲಿ ಭಾಷೆ ಆಯ್ಕೆ ಮಾಡಬೇಕು ಎಂದು ಹೇಳುತ್ತದೆ. ಕನ್ನಡ, ಹಿಂದಿ, ಇಂಗ್ಲಿಷ್ ಆಯ್ಕೆಗೆ ನಿಗದಿತ ಸಂಖ್ಯೆ ಒತ್ತಿ ಎಂದು ಹೇಳುತ್ತದೆ. ಈ ಪ್ರಕ್ರಿಯೆ ಮುಗಿಯೋಕೆ ಕನಿಷ್ಠ ಒಂದೂವರೆ ನಿಮಿಷವಾಗುತ್ತದೆ. ಆದರೆ, ತಕ್ಷಣ ಕರೆ ಸಿಗೋದಿಲ್ಲ.
ಇಲ್ಲಷ್ಟೇ ಶೀಘ್ರ ಪ್ರತಿಕ್ರಿಯೆ:ಆಂಬುಲೆನ್ಸ್, ಮಹಿಳಾ, ಮಕ್ಕಳ, ಪೊಲೀಸ್ ಸಹಾಯವಾಣಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸಿಬ್ಬಂದಿ ಸ್ವೀಕರಿಸಿ ಮಾಹಿತಿ ನೀಡುತ್ತಾರೆ.
| ಬೇಲೂರು ಹರೀಶ
ಸರ್ಕಾರದ ಪರಿಹಾರ ಸಾಮಗ್ರಿಗೆ ಫೋಟೋ ಅಂಟಿಸಿಕೊಂಡಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 5 =
Remember me
