ತುಮಕೂರು:ಶಿರಾ ಮದಲೂರು ಕೆರೆಗೆ ಹೇಮಾವತಿ ನೀರು ಹರಿದಿದ್ದು ಸಿಎಂ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಶಿರಾ ಜನರ ಬಹುವರ್ಷಗಳ ಬೇಡಿಕೆ ಈಡೇರಿದ್ದು ಇಂದು ಕಳ್ಳಂಬೆಳ್ಳ ಕೆರೆ ಭಾಗದಿಂದ ನಾಲೆ ಮೂಲಕ ಹೇಮೆ ಹರಿದಿದ್ದಾಳೆ.
ಈ ಸಂದರ್ಭದಲ್ಲಿ ಶಿರಾ ಶಾಸಕ ರಾಜೇಶ್ ಗೌಡ ಗಂಗಾಪೂಜೆ ನೆರವೇರಿಸಿದರು. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಕಳೆದ 40 ವರ್ಷಗಳಿಂದಲೂ ಶಿರಾ ತಾಲೂಕು ಜನರ ಬೇಡಿಕೆಯಾಗಿತ್ತು. ಶಿರಾ ಉಪಸಮರ ಸಮಯದಲ್ಲಿ ಭಾರೀ ಸದ್ದು ಮಾಡಿದ್ದ ಕೆರೆಗೆ ಹೇಮೆ ನೀರು ಹರಿಸುವ ವಿಚಾರದಲ್ಲಿ ಖುದ್ದು ಸಿಎಂ ಯಡಿಯೂರಪ್ಪ ಮದಲೂರಿಗೆ ಆಗಮಿಸಿ ಚುನಾವಣೆ ಮುಗಿದ 6 ತಿಂಗಳಲ್ಲಿ ನೀರು ಹರಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು.
ಇದನ್ನೂ ಓದಿ:ರೈತ ಹೋರಾಟದಲ್ಲಿ ಪೊಲೀಸರಿಗೆ ಪ್ರಸಾದ ಕೊಟ್ಟು, ಒಳಿತು ಹರಸಿದ ರೈತರು
ಬಿಜೆಪಿ ಗೆಲುವು ಸಾಧಿಸಿದ್ದು ಭರವಸೆಯಂತೆಯೇ ಮದಲೂರು ಕೆರೆಗೆ ನೀರು ಹರಿಸಲಾಗಿದೆ. ನಂಜಾವದೂತ ಶ್ರೀ ಸಮ್ಮುಖದಲ್ಲಿ ಗಂಗಾ ಪೂಜೆಯನ್ನು ಶಾಸಕ ರಾಜೇಶ್ ಗೌಡ ನೇರವೇರಿಸಿದ್ದಾರೆ. ಚಿತ್ರದುರ್ಗ ಸಂಸದ ನಾರಾಯಣ್ ಸ್ವಾಮಿ ಸಾಥ್ ನೀಡಿದರು. ಸಹಜವಾಗಿ ಶಿರಾ ಜನರಲ್ಲಿ ಸಂಭ್ರಮ ಹೆಚ್ಚಿದೆ.
ಜಿಹಾದಿಗಳ ದಾಳಿಯ ನಡುವೆ ಮಾಲಿಯ ಮೂರು ನಗರಗಳಲ್ಲಿ ಭೀಕರ ಸರಣಿ ಸ್ಪೋಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
