ಬೆಂಗಳೂರು:ಕಬ್ಬನ್​ ಪಾರ್ಕ್​ನಲ್ಲಿ ಸಮಯ ಕಳೆಯುತ್ತಿದ್ದ ಪ್ರೇಮಿಗಳಿಗೆ ಕಬ್ಬನ್​ ಪಾರ್ಕ್​ ಆಡಳಿತ ಮಂಡಳಿ ಶಾಕ್​ ನೀಡಿದೆ. ಇನ್ನು ಮುಂದೆ ಪ್ರೇಮಿಗಳಿಗೆ ಪಾರ್ಕ್​ನಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ. ಪ್ರೇಮಿಗಳ ಅಸಭ್ಯ ವರ್ತನೆಯ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ಮುಂದೆ ಕಬ್ಬನ್ ಪಾರ್ಕ್​ನಲ್ಲಿ ಲವರ್ಸ್​ ಮನಸ್ಸಿಗೆ ಬಂದಂತೆ ವರ್ತಿಸುವಂತಿಲ್ಲ. ಪ್ರೇಮಿಗಳ ವಿಹಾರ ತಾಣವಾಗಿದ್ದ ಕಬ್ಬನ್ ಪಾರ್ಕ್​ನಲ್ಲಿ ಇನ್ಮುಂದೆ ಪ್ರೇಮಿಗಳಿಗೆ ಕಡಿವಾಣ ಬೀಳಲಿದೆ. ಇಷ್ಟು ದಿನ ಮರದ ಕೆಳಗೆ ಮನದ ಮಾತುಗಳಾಡುತ್ತಿದ್ದ ಪ್ರೇಮಿಗಳಿಗೆ ಆಡಳಿತ ಮಂಡಳಿಯ ನಿರ್ಧಾರ ಶಾಕ್​ ನೀಡಿದೆ.
ಇದನ್ನೂ ಓದಿ:ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು
ಮೈಕ್​​ನಲ್ಲಿ ಘೋಷಣೆಸದ್ಯ ಕಬ್ಬನ್ ಪಾರ್ಕ್​ನಲ್ಲಿ ಅಸಭ್ಯವಾಗಿ ವರ್ತಿಸುವ ಜೋಡಿಗಳ ಮೇಲೆ ಆಡಳಿತ ಮಂಡಳಿ ಕಣ್ಣಿಟ್ಟಿದೆ. ಪಾರ್ಕ್​ನಲ್ಲಿ ಅಸಭ್ಯವಾಗಿ ವರ್ತಿಸದಂತೆ ಮೈಕ್​​ನಲ್ಲಿ ಘೋಷಿಸಲಾಗುತ್ತಿದೆ. ಪಾರ್ಕಿಗೆ ಪ್ರೇಮಿಗಳು ಪ್ರವೇಶಿಸಿದರು ದೂರ ದೂರ ಕುಳಿತು ಮಾತನಾಡಬೇಕಿದೆ.
ಸರಸ ಸಲ್ಲಾಪಕ್ಕೆ ಬ್ರೇಕ್ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಅಂತ ಕಬ್ಬನ್ ಪಾರ್ಕ್​ಗೆ ಬರುವ ಕುಟುಂಬದವರಿಂದ ಸಾಕಷ್ಟು ದೂರುಗಳು ಬಂದಿವೆ ಮತ್ತು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಪಾರ್ಕಿನಲ್ಲಿ ಪ್ರೇಮಿಗಳ ಸರಸ ಸಲ್ಲಾಪಕ್ಕೆ ಬ್ರೇಕ್ ಹಾಕಲಾಗಿದೆ. ಯಾರು ಕೂಡ ಅಶ್ಲೀಲವಾಗಿ ವರ್ತಿಸಬಾರದು ಎಂದು ಪಾರ್ಕಿನ ಸೆಕ್ಯುರಿಟಿ ಮಂಜುನಾಥ್ ಮೈಕ್​ನಲ್ಲಿ ನಿತ್ಯವು ಘೋಷಣೆ ಕೂಗುತ್ತಿದ್ದಾರೆ.
ಎಚ್ಚರಿಕೆಯ ನಡುವೆಯೂ ಅಸಭ್ಯ ವರ್ತನೆಯಲ್ಲಿ ತೊಡಗಿದರೆ, ಅಂಥವರನ್ನು ಕಬ್ಬನ್ ಪಾರ್ಕ್​ನಿಂದ ಸೆಕ್ಯುರಿಟಿಗಳು ಹೊರಗಡೆ ಕಳಿಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ನೂತನ ಕೆಪಿಸಿಸಿ‌ ಕಾರ್ಯಾಧ್ಯಕ್ಷರಾಗಿ ಬಿ.ಎನ್. ಚಂದ್ರಪ್ಪ ನೇಮಕ

ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ

ಸುದೀಪ್​ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ: ನಟ ಪ್ರಕಾಶ್​ ರಾಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eight =
Remember me
