ಬೆಂಗಳೂರು:ಇಂದಿನ ಗ್ಯಾಜೆಟ್​ಗಳಿಂದಾಗಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಜೀವನ ಶೈಲಿಯು ಕಾರಣವಾಗಿದ್ದು, ಇದನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಉತ್ತಮ ನಿದ್ದೆ ಮಾಡಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕಾಗಿದ್ದು, ನಿದ್ರಾಹೀನತೆಯನ್ನು ಹೋಗಲಾಡಿಸಲು ಕೆಲವು ಸಲಹೆಗಳು ಇಲ್ಲಿವೆ.
1.ಪ್ರತಿದಿನ ಒಂದೇ ಸಮಯಕ್ಕೆ ಏಳುವುದು:ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ನಿಮ್ಮ ದೇಹಕ್ಕೆ ತರಬೇತಿಯನ್ನು ನೀಡಿ, ಒಂದೇ ಸಮಯದಲ್ಲಿ ಎಚ್ಚರಗೊಳಿಸುವಂತೆ ತರಬೇತಿ ನೀಡಿ. ಇದು ರಾತ್ರಿ ಉತ್ತಮ ನಿದ್ರೆ ಬರಲು ಸಹಾಯಕವಾಗಿದೆ.
2.ಆಲ್ಕೋಹಾಲ್ ಮತ್ತು ನಿಕೋಟಿನ್​ನಿಂದ ದೂರವಿರಿ:ಇವುಗಳ ಪರಿಣಾಮ ಹಲವಾರು ಗಂಟೆಗಳವರೆಗೆ ಇರುವುದರಿಂದ ಇವು ನಿದ್ರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಜಾಸ್ತಿ. ಅಲ್ಕೊಹಾಲಿನಿಂದ ಮಂಪರು ಬಂದರೂ ಸಹ ಇದು ಆ ಕ್ಷಣಕ್ಕೆ ಮಾತ್ರ ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ:ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಬರೋಬ್ಬರಿ 324 ರನ್​ ಗಳಿಸಿದ ತಂಡ..!
3.ಹಗಲಿನಲ್ಲಿ ನಿದ್ರೆ ಮಾಡಬೇಡಿ:ಹಗಲಿನ ನಿದ್ರೆಯು ರಾತ್ರಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಹಗಲಿನಲ್ಲಿ ನಿದ್ರೆ ಕಡಿಮೆ ಮಾಡಿ.
4.ನಿಯಮಿತ ವ್ಯಾಯಾಮ:ನಿಯಮಿತ ವ್ಯಾಯಾಮವು ನಿದ್ರೆಯ ಗುಣಮಟ್ಟ ಮತ್ತು ಅವಧಿಯನ್ನು ಸುಧಾರಿಸುತ್ತದೆ. ನೀವು ರಾತ್ರಿಯಲ್ಲಿ ಮಲಗುವ ಮುಂಚೆ ಕನಿಷ್ಠ ಮೂರು ಗಂಟೆಗಳ ಮೊದಲು ವ್ಯಾಯಾಮ ಮಾಡಿ ಮುಗಿಸಿದ್ದರೆ ಉತ್ತಮ ನಿದ್ರೆ ಬರುತ್ತದೆ.
5.ಹಾಸಿಗೆಯಲ್ಲಿನ ಇತರ ಚಟುವಟಿಕೆ ನಿಯಂತ್ರಣ ಮಾಡಿ: ಹಾಸಿಗೆ ಅಥವಾ ಮಲಗುವ ಕೋಣೆಯಲ್ಲಿ ದೂರದರ್ಶನವನ್ನು ನೋಡುವುದನ್ನು ಅಥವಾ ರೇಡಿಯೊವನ್ನು ಕೇಳುವುದು, ಮೊಬೈಲ್​ ಬಳಕೆಯನ್ನು ತಪ್ಪಿಸಿ. ಈ ಎಲ್ಲಾ ಚಟುವಟಿಕೆಗಳು ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸಬಹುದು ಮತ್ತು ನಿದ್ರಿಸಲು ಕಷ್ಟವಾಗಬಹುದು.
6.ಮಲಗುವ ಮುನ್ನ ತಿನ್ನಬೇಡಿ ಅಥವಾ ಕುಡಿಯಬೇಡಿ:ರಾತ್ರಿ ತಡವಾಗಿ ಊಟ ಮಾಡುವುದರಿಂದ ಅಥವಾ ಮಲಗುವ ಮುನ್ನ ತಿಂಡಿ ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುರ ಜತೆಗೆ ಇದು ನಿಮ್ಮನ್ನು ಎಚ್ಚರವಾಗಿರಿಸುವಂತೆ ಮಾಡುತ್ತದೆ.
ಇದನ್ನೂ ಓದಿ: ಆದಾಯ, ಸರಕು ನಿರ್ವಹಣೆಯಲ್ಲಿ ನೈಋತ್ಯ ರೈಲ್ವೆ ದಾಖಲೆ
7.ಮಲಗುವ ವಾತಾವರಣವನ್ನು ಶುಚಿಯಾಗಿರಿಸಿ:ಮಲಗುವ ಕೋಣೆಯಲ್ಲಿ ನಿದ್ರಿಸಲು ಅನುಕೂಲಕರವಾದ ಗಾಳಿ, ಬೆಳಕು ಬರುವುದರ ಜತೆಗೆ ಕೋಣೆ ನಿಶ್ಯಬ್ದವಾಗಿರಬೇಕು. ಮನಸ್ಸಿನ ಹಾಗೂ ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಉಸಿರಾಟದ ತಂತ್ರ, ಧ್ಯಾನ ಮತ್ತು ಮಧುರವಾದ ಸಂಗೀತ ಆಲಿಸಿ.
8.ಅರಿವಿನ ಚಿಕಿತ್ಸೆ:ನಿಮ್ಮನ್ನು ನೀವು ಅರಿತುಕೊಳ್ಳಲು ಪ್ರಯತ್ನಿಸಿ. ನಿದ್ರಾಹೀನತೆಗೆ ಕಾರಣವಾಗುವ ಆಲೋಚನೆಗಳನ್ನು ಬದಿಗೊತ್ತಿ ಶಾಂತವಾಗಿರಲು ಯತ್ನಿಸಿ.(ಏಜನ್ಸೀಸ್​​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
