– ಶಮಿತಾ ಮುತ್ಲಾಜೆ
ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ ರಕ್ಷಾಬಂಧನ… ಸಹೋದರಿ ಸಹೋದರನಿಗೆ ರಾಖಿ ಎಂಬ ಪವಿತ್ರ ದಾರವನ್ನು ಕಟ್ಟುವ ಮೂಲಕ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ವರ್ಷದ ರಾಖಿ ಹಬ್ಬ ಇನ್ನೇನು ಸಮೀಪದಲ್ಲಿದೆ.
ಅಂದು ತಂಗಿ ಅಣ್ಣನಿಗೆ ಒಪ್ಪುವ ರಾಖಿ ಖರೀದಿಯಲ್ಲಿ ಬ್ಯುಸಿಯಾಗಿದ್ದರೆ, ಅಣ್ಣ ಆಕೆಗೆ ಇಷ್ಟವಾಗುವ ಉಡುಗೊರೆ ನೀಡಲು ತಲೆಕೆಡಿಸಿಕೊಂಡಿರುತ್ತಾನೆ. ನೀವು ನಿಮ್ಮ ಪ್ರೀತಿಯ ತಂಗಿಗೆ ಇಷ್ಟವಾದ ಉಡುಗೊರೆ ಕೊಡಬೇಕು ಅಂತ ಯೋಚಿಸ್ತಾ ಇದೀರಾ? ಹಾಗಾದ್ರೆ ಈ ಕೆಳಗಿನ ಉಪಾಯಗಳನ್ನು ಫಾಲೋ ಮಾಡಿ….
1.ಕಿವಿಯೋಲೆಗಳನ್ನು ನೀಡಿ:ಇಯರಿಂಗ್ಸ್ ಅಂದ್ರೆ ಯಾವ ಹೆಣ್ಮಕ್ಳಿಗೆ ಇಷ್ಟ ಆಗಲ್ಲ ಹೇಳಿ? ಡ್ರೆಸ್​ಗೆ  ಮ್ಯಾಚಿಂಗ್ ಕಿವಿಯೋಲೆ ಹಾಕೋದ್ರಲ್ಲಿ ಇರುವ ಖುಷಿನೇ ಬೇರೆ. ಜುಮ್ಕಿ, ಜ್ಯಾಕೆಟ್ ಇಯರಿಂಗ್, ಸ್ಟಡ್ ಮುಂತಾದ ಅನೇಕ ವೆರೈಟಿ ಇಯರಿಂಗ್ ಗಳಿವೆ. ಅವರಿಗೆ ಇಷ್ಟವಾಗುವ ಡಿಸೈನ್ ನ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿ.
2.ಸೌಂದರ್ಯವರ್ಧಕಗಳನ್ನು ಉಡುಗೊರೆಯಾಗಿ ನೀಡಿ:ಹೆಣ್ಣು ಮಕ್ಕಳು ಹೆಚ್ಚು ಇಷ್ಟವಾಗುವ ವಿಚಾರ ಅಂದರೆ ಅದು ಸೌಂದರ್ಯವರ್ಧಕಗಳು. ಲಿಪ್​ಸ್ಟಿಕ್​, ಕ್ರೀಮ್​​, ಪೌಡರ್​​ ಹೀಗೆ ಬ್ರ್ಯಾಂಡೆಡ್ ಸೌಂದರ್ಯವರ್ಧಕಗಳನ್ನು ನೀಡಿ ನಿಮ್ಮ ತಂಗಿಯಂದಿರನ್ನು ಖುಷಿಪಡಿಸಿ.
3.ವೆರೈಟಿ ಸ್ಲಿಪರ್: ಡ್ರೆಸ್​​ಗಳ ಜತೆಗೆ ಹೆಣ್ಣುಮಕ್ಕಳು ಇಷ್ಟ ಪಡೋದು ಮ್ಯಾಚಿಂಗ್ ಸ್ಲಿಪರ್. ಸೀರೆ, ಕುರ್ತಾ, ಜೀನ್ಸ್ ಬಟ್ಟೆಗಳಿಗೆ ಒಪ್ಪುವ ಚಪ್ಪಲಿಗಳು ಬೇಕು ಅಂತ ಅಂದುಕೊಳ್ಳುತ್ತಾರೆ. ಹುಡುಗಿಯರಿಗೆ ಇಷ್ಟ ಆಗುವ ಹೈ-ಹೀಲ್ಸ್, ಶೂಸ್, ಸ್ಯಾಂಡಲ್ಸ್ ಗಳನ್ನು ರಕ್ಷಾಬಂಧನದ ಉಡುಗೊರೆಯಾಗಿ ನೀಡಿ.
4. ಕಲರ್ ಫುಲ್ ಬ್ಯಾಗ್ಸ್: ಹುಡುಗಿಯರು ಹೆಚ್ಚು ತಲೆಕೆಡಿಸಿಕೊಳ್ಳುವ ವಿಷಯ ಅಂದ್ರೆ ಬ್ಯಾಗ್. ಯಾವ ಕಲರ್ ಬ್ಯಾಗ್ ಮ್ಯಾಚ್ ಆಗುತ್ತೆ? ಕಲರ್ ಡ್ರೆಸ್ ಗೆ ಯಾವ ಬ್ಯಾಗ್ ಬೇಕು ಅಂತ ಯೋಚನೆ ಮಾಡುತ್ತಾರೆ.
5. ಸ್ಮಾರ್ಟ್ ಗ್ಯಾಜೆಟ್ಸ್ : ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಳು ಕೂಡ ಟ್ರೆಂಡ್ಸ್ ನ ಫಾಲೋ ಮಾಡೋದ್ರಲ್ಲಿ ಮುಂಚುಣಿಯಲ್ಲಿ ಇದ್ದಾರೆ. ಹಾಗಿರೋವಾಗ ಸ್ಮಾರ್ಟ್​ವಾಚ್, ಇಯರ್ ಬಡ್ಸ್, ಸ್ಮಾರ್ಟ್​ಫೋನ್ ನಂತಹ ವಸ್ತುಗಳ ಮೇಲೆ ಮೋಹನೂ ಜಾಸ್ತಿನೇ ಇರುತ್ತದೆ. ಇಂತಹ ವಸ್ತುಗಳನ್ನು ಕೊಟ್ಟು ಸಹೋದರಿಯರಿಗೆ ಸಪ್ರೈಸ್ ನೀಡಿ.
6.ಡ್ರೆಸ್ ಗಿಫ್ಟ್ ಮಾಡಿ : ಹುಡುಗಿಯರ ಬಾಯಲ್ಲಿ ಜಾಸ್ತಿ ಬರುವ ಮಾತು ಅಂದ್ರೆ ,’ ಡ್ರೆಸ್ ಇಲ್ಲ’. ಟ್ರೆಡಿಷನಲ್ ವೇರಿಂಗ್ಸ್ ಗಳಾದ ಸ್ಯಾರಿ, ಕುರ್ತಾ ಅಥವಾ ಮೋಡರ್ನ್​ ಡ್ರೆಸ್ ಜೀನ್ಸ್ ಬಟ್ಟೆಗಳನ್ನು ಈ ವರ್ಷದ ರಕ್ಷಾ ಬಂಧನಕ್ಕೆ ಗಿಫ್ಟ್ ಮಾಡಿ.
ಈ ತರಹದ ಸಪ್ರೈಸ್ ಗಿಫ್ಟ್ ಗಳನ್ನು ಸಹೋದರಿಯರಿಗೆ ನೀಡಿ ಈ ಬಾರಿ ರಕ್ಷಾ ಬಂಧನ ಹಬ್ಬವನ್ನು ಸ್ಪೆಷಲ್ ಆಗಿ ಆಚರಣೆ ಮಾಡಿ.
Raksha Bandhan; ರಾಖಿಯ ಮಹತ್ವ, ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಲು ಇಲ್ಲಿ ನೋಡಿ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 4 =
Remember me
