ಬಾಗಲಕೋಟೆ:ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಪ್ರತಿಯೊಬ್ಬರಿಗೂ ಬೆಳಕಿನ ಸಂಭ್ರಮ ಕಣ್ಮುಂದೆ ಬರುತ್ತದೆ. ಬೆಳಕು ಎಂದ ಕೂಡಲೇ ನಮ್ಮ ಪೂರ್ವಜರ ಕಾಲದಲ್ಲಿ ಬಳಸುತ್ತಿದ್ದ ಪೆಟ್ರೋಮ್ಯಾಕ್ಸ್ ತಕ್ಷಣಕ್ಕೆ ನೆನಪಾಗುತ್ತದೆ. ಅಂದಿನ ಕಾಲಘಟ್ಟದಲ್ಲಿ ಇಂದಿನಂತೆ ವಿದ್ಯುತ್​ ಬಳಕೆಯ ಲೈಟ್​, ಬಲ್ಬ್​ ಮೂಲಕ ಬೆಳಕಿರಲಿಲ್ಲ. ಕೇವಲ ಸೀಮೆಎಣ್ಣೆ ಅಥವಾ ಪೆಟ್ರೋಮ್ಯಾಕ್ಸ್ ಅನ್ನು ಅತೀ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ಈ ಪೆಟ್ರೋಮ್ಯಾಕ್ಸ್ ವಿಷಯ​ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬ್ರಿಟಿಷರ ಆಳ್ವಿಕೆಯಲ್ಲಿ ಪೆಟ್ರೋಮ್ಯಾಕ್ಸ್​ ಅನ್ನು ಬಾಡಿಗೆಗೆ ಕೊಡುತ್ತಿದ್ದ ಬಾಗಲಕೋಟೆಯ ಕುಟುಂಬವೊಂದರ ಕಥೆ ಇಲ್ಲಿದೆ ನೋಡಿ.
ಇದನ್ನೂ ಓದಿ:ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು: ಕಾರ್ಮಿಕ ಸಚಿವ ಸಂತೋಷ್‌ ಎಸ್. ಲಾಡ್‌ ಸಂಕಲ್ಪ
ಪೆಟ್ರೋಮ್ಯಾಕ್ಸ್ ವೈಭವ ಇಂದು ಮರೆಯಾಗಿ ವಸ್ತುಸಂಗ್ರಹದ ಸರಕಾಗಿದ್ದರೂ ಕೂಡ ಇದು ಬಾಗಲಕೋಟೆಯಲ್ಲಿ ರಾಜಪ್ಪ ಕಲಾಲ ಎಂಬುವವರ ಕುಟುಂಬದಲ್ಲಿ ಇಂದಿಗೂ ನೆನಪಿಗಾಗಿ ಗ್ಯಾಸ್ ಕುರುಹುಗಳು ಇವೆ. ಈ ಕುಟುಂಬಕ್ಕೂ ಪೆಟ್ರೋಮ್ಯಾಕ್ಸ್​ಗೂ 150 ವರ್ಷದ ನಂಟಿದೆ. ರಾಜಪ್ಪ ಕಲಾಲ ಎನ್ನುವವರು ಬ್ರಿಟಿಷರ ಆಳ್ವಿಕೆಯಲ್ಲಿ ಈ ಪೆಟ್ರೋಮ್ಯಾಕ್ಸ್​ಗಳನ್ನು ಬಾಡಿಗೆ ಕೊಡುತ್ತಿದ್ದರು.
ಆ ಕಾಲದಲ್ಲಿ ಬಾಗಲಕೋಟೆಯಲ್ಲಿ ಇನ್ನೂ ಬೀದಿ ದೀಪಗಳೇ ಇರಲಿಲ್ಲ. ಗಲ್ಲಿಗಳಲ್ಲಿ ಕಂಬ ಹಾಕಿ ಅದಕ್ಕೆ ಪೆಟ್ರೋಮ್ಯಾಕ್ಸ್ ಸೀಮೆ ಎಣ್ಣೆ ದೀಪ ಹಾಕುತ್ತಿದ್ದರು. ಇದನ್ನು ಗುತ್ತಿಗೆಗೆ ನೀಡಲಾಗುತ್ತಿತ್ತು. ಹೀಗೆ ಪೆಟ್ರೋಮ್ಯಾಕ್ಸ್ ಬೀದಿ ದೀಪದ ಗುತ್ತಿಗೆ ಪಡೆದವರಲ್ಲಿ ಒಬ್ಬರು ಈ ಕಲಾಲ ರಾಜಪ್ಪ. ಮೇಡ್ ಇನ್ ಜರ್ಮನಿಯ 100ಕ್ಕೂ ಅಧಿಕ ಪೆಟ್ರೋಮ್ಯಾಕ್ಸ್ ಗ್ಯಾಸ್ ಅನ್ನು ರಾಜಪ್ಪ ಹೊಂದಿದ್ದರು. ರಾಜಪ್ಪ ನಂತರ ಹೂವಪ್ಪ ಅದನ್ನು ಮುಂದುವರೆಸಿದರು.
ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಟೂಲ್ ಇಟ್ಟು ಕುಳಿತು ಬಸ್​ಗೆ ತಡೆ; ಸಿನಿಮೀಯ ರೀತಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ ನೆರವಾದ ಉದ್ಯಮಿ
ವಿದ್ಯುತ್ ಬೀದಿ ದೀಪ, ಮನೆಗಳಿಗೆ ಕರೆಂಟ್ ಬಂದ ಬಳಿಕ ಮೆಟ್ರೋಮ್ಯಾಕ್ಸ್ ಮರೆಯಾಯಿತು. ಹೂವಪ್ಪ ಅವರ ಬಳಿಕ ಅವರ ಪುತ್ರ ಮಲ್ಲಿಕಾರ್ಜುನ ವಯಸ್ಸಿಗೆ ಬಂದಾಗ ಪೆಟ್ರೋಮ್ಯಾಕ್ಸ್ ಜಾಗದಲ್ಲಿ ಕೈ ಗ್ಯಾಸ್​ಗಳು ಬಂದಿತ್ತು. ಕೆಲ ವರ್ಷಗಳವರೆಗೂ ಹಬ್ಬ, ಹರಿದಿನ, ಮದುವೆ, ನಾಟಕಗಳಿಗೆ ಇದೇ ಗ್ಯಾಸ್​ಗಳನ್ನು ಬಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು.
ಇದೀಗ ಸೀಮೆ ಎಣ್ಣೆ ಬಂದ್ ಆಗಿದ್ದು, ಜನರೇಟರ್​ಗಳು ರಾರಾಜಿಸುತ್ತಿವೆ. ಶತಮಾನಗಳನ್ನು ಆಳಿದ ಪೆಟ್ರೋಮ್ಯಾಕ್ಸ್​ಗಳು ಇಂದು ಮೂಲೆ ಸೇರಿವೆ. ದಿನಗಳ ಬಗ್ಗೆ ತಂದೆಯಿಂದ ಕೇಳಿ ತಿಳಿದಿದ್ದ ಮಲ್ಲಿಕಾರ್ಜುನ ಆ ದಿನಗಳನ್ನು ಈಗ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ:VIDEO | ಸಿಲಿಂಡರ್ ತುಂಬಾ ಇತ್ತು ಝಣ..ಝಣ ಕಾಂಚಾಣ; ಇದೇನಪ್ಪಾ ವಿಚಿತ್ರ ಎಂದ ನೆಟ್ಟಿಗರು
ಈಗ ಎಲ್ಲೆಡೆ ವಿದ್ಯುತ್ ದೀಪಗಳು, ಅಲಂಕಾರಿಕ ದೀಪಗಳು, ಜನರೇಟರ್ ಅಬ್ಬರಿಸುತ್ತಿದೆ. ದೀಪಾವಳಿ ಹಬ್ಬದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಬೆಳಕು ನೀಡುತ್ತಿದ್ದ ಪೆಟ್ರೋಮ್ಯಾಕ್ಸ್ ಗ್ಯಾಸ್​​ಗಳು ಈಗ ಅನಾಥವಾಗಿದೆ ಎಂದು ಮಲ್ಲಿಕಾರ್ಜುನ ಬೇಸರದಿಂದ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
