ಬೆಂಗಳೂರು:ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕರ್ನಾಟಕ ಬಿಜೆಪಿ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರ ಮಾಡುತ್ತಿದ್ದಂತೆ ಸೋಶಿಯಲ್​​ ಮೀಡಿಯಾದಲ್ಲಿ ಈ ಹಿಂದೆ ಬಿಜೆಪಿ ಅಧ್ಯಕ್ಷರು ಯಾರಾಗಿದ್ದರು ಎನ್ನುವ ಹುಡುಕಾಟ ಶುರುವಾಗಿದೆ.  ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿಯಲ್ಲೀಗ ಇದೀಗ ಮುಂದಿನ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿದೆ. ಇನ್ನು ಇಲ್ಲಿಯವರೆ ಕರ್ನಾಟಕ ಬಿಜೆಪಿಯ ಹೊಣೆಯನ್ನು ಯಾರೆಲ್ಲಾ ಹೊತ್ತೊಂಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.
1) ಎ.ಕೆ. ಸುಬ್ಬಯ್ಯ: 1980 ರಿಂದ 1983 (3 ವರ್ಷ)2) ಬಿ.ಬಿ. ಶಿವಪ್ಪ: 1983-1988 (5 ವರ್ಷ)3) ಬಿ.ಎಸ್.‌ ಯಡಿಯೂರಪ್ಪ: 1988-1991 (3 ವರ್ಷ)4) ಕೆ.ಎಸ್.‌ ಈಶ್ವರಪ್ಪ: 1993-1998 (5 ವರ್ಷ)5) ಬಿ.ಎಸ್.‌ ಯಡಿಯೂರಪ್ಪ: 1998-1999 (1 ವರ್ಷ)6) ಬಸವರಾಜ ಪಾಟೀಲ್‌ ಸೇಡಂಳ 2000- 2003 (3 ವರ್ಷ)7) ಅನಂತ್‌ ಕುಮಾರ್: 2003- 2004 (1 ವರ್ಷ)8) ಜಗದೀಶ್‌ ಶೆಟ್ಟರ್: 2004-2006(2 ವರ್ಷ)9) ಡಿ.ವಿ. ಸದಾನಂದ ಗೌಡ: 2006-2010 (4 ವರ್ಷ)10) ಕೆ.ಎಸ್.‌ ಈಶ್ವರಪ್ಪ: 2010-2013 (3 ವರ್ಷ )11) ಪ್ರಲ್ಹಾದ್‌ ಜೋಶಿ-2013-2016 (3 ವರ್ಷ)12) ಬಿ.ಎಸ್.‌ ಯಡಿಯೂರಪ್ಪ: 2016-2019 (3 ವರ್ಷ)13) ನಳಿನ್‌ ಕುಮಾರ್‌ ಕಟೀಲ್: 2019- (4 ವರ್ಷ)14) ಬಿ.ವೈ. ವಿಜಯೇಂದ್ರ: 2023 (ನ. 15) ಹಾಲಿ
ವಿಧಾನಸಭಾ ಚುನಾವಣೆಯ ಸೋಲಿನಿಂದ ಪುಟಿದೆದ್ದು ಲೋಕಸಭಾ ಚುನಾವಣೆಯ ತಯಾರಿಗೆ ರಾಜ್ಯ ಬಿಜೆಪಿ ಸನ್ನದ್ಧವಾಗಬೇಕಿದೆ. ರಾಜ್ಯ ವಿಧಾನಸಭೆಯಲ್ಲಿ ಇರುವ 66 ಬಿಜೆಪಿ ಶಾಸಕರ ಪೈಕಿ ಹಲವು ಹಿರಿಯರಿದ್ದಾರೆ. ಅನುಭವಿಗಳೂ ಇದ್ದಾರೆ. ಈ ನಡುವೆ ಎನ್‌ಡಿಎ ಮೈತ್ರಿ ಕೂಟಕ್ಕೆ ಜೆಡಿಎಸ್ ಪಕ್ಷ ಸೇರ್ಪಡೆ ಆಗಿರುವ ಕಾರಣ ಕುಮಾರಸ್ವಾಮಿ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಬಹುದಾ ಅನ್ನೋ ಲೆಕ್ಕಾಚಾರವೂ ಇದೆ.
ಎಲ್ಲರೂ ಒಗ್ಗಟ್ಟಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 12 =
Remember me
