ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಚುನಾಯಿತ ಸದಸ್ಯರು ಇಲ್ಲದ ಕಾರಣ ಸತತ ಮೂರನೇ ವರ್ಷವೂ ಅಧಿಕಾರಿಗಳಿಂದಲೇ ಬಜೆಟ್ ಮಂಡನೆಯಾಗಿದೆ. 2023-24ನೇ ಸಾಲಿನ ಆಯವ್ಯಯವನ್ನು ಪುರಭವನದಲ್ಲಿ ಗುರುವಾರ (ಮಾ. 2) ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರ ಸಮ್ಮುಖದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಮಂಡಿಸಿದರು.
ಒಟ್ಟು ಅಂದಾಜು 11,157 ಕೋಟಿ ರೂಪಾಯಿ ಗಾತ್ರದ ಬಜೆಟ್​ ಮಂಡನೆಯಾಗಿದೆ. ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ವಿವರ ಸೇರಿದಂತೆ ಸಂಪೂರ್ಣ ಬಿಬಿಎಂಪಿ ಬಜೆಟ್​ನ ಪ್ರಮುಖಾಂಶಗಳು ಈ ಕೆಳಕಂಡತಿವೆ.
* ಕಟ್ಟಡ ನಕ್ಷೆಗಳ ಡಿಜಟಲೀಕರಣ ರೂ.2 ಕೋಟಿಗಳು* ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ಒಟ್ಟು ರೂ.8 ಕೋಟಿಗಳು* ಅನಧಿಕೃತ ಕಟ್ಟಡ ತೆರವುಗೊಳಿಸಲು ಒಟ್ಟು ರೂ.10 ಕೋಟಿಗಳು* ಕಸಾಯಿಖಾನೆಗಳ ನಿರ್ವಹಣೆಗಾಗಿ ರೂ.1 ಕೋಟಿಗಳು* ಚಿತಾಗಾರಗಳ/ರುದ್ರಭೂಮಿ ನಿರ್ವಹಣೆಗಾಗಿ ರೂ.7.74 ಕೋಟಿಗಳು* ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗಾಗಿ ರೂ.60.10 ಕೋಟಿಗಳು* ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗಾಗಿ ರೂ.23.11 ಕೋಟಿಗಳು* ವಾಡ್ ನ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ ರೂ.75 ಲಕ್ಷದಂತೆ ಒಟ್ಟಾರೆ ರೂ.182.25 ಕೋಟಿಗಳು:1. ಪ್ರತಿ ವಾರ್ಡ್​ಗೆ ಹೂಳೆತ್ತುವ ಕಾಮಗಾರಿಗಳಿಗೆ ರೂ.30 ಲಕ್ಷಗಳು2. ಪ್ರತಿ ವಾರ್ಡ್​ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ರೂ.15 ಲಕ್ಷಗಳು3. ಪ್ರತಿ ವಾರ್ಡ್​ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ ರೂ.25 ಲಕ್ಷಗಳು4. ಮಾನ್ಸುನ್ ನಿರ್ವಹಣೆಗಾಗಿ ರೂ.5 ಲಕ್ಷಗಳು.* ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗಾಗಿ 70.20 ಕೋಟಿಗಳು* ತುರ್ತು ಮಾನ್ಸುನ್ ಕಾಮಗಾರಿಗಳಿಗಾಗಿ ರೂ.15 ಕೋಟಿಗಳು:1. ಹೊಸ ವಲಯಗಳಿಗೆ ರೂ.2 ಕೋಟಿ2. ಹಳೆ ವಲಯಗಳಿಗೆ ರೂ.1 ಕೋಟಿ* ಬೀದಿ ದೀಪಗಳ ನಿರ್ವಹಣೆಗಾಗಿ ರೂ.38 ಕೋಟಿಗಳು* ಕೆರೆಗಳ ನಿರ್ವಹಣೆಗಾಗಿ ರೂ.35 ಕೋಟಿಗಳು* ಭೂಸ್ವಾಧೀನ ಪ್ರಕ್ರಿಯೆಗಾಗಿ ರೂ.100 ಕೋಟಿಗಳು* ಕೆರೆ ಮತ್ತು ಇತರೆ ಖಾಲಿ ಜಾಗಗಳ ಸಂರಕ್ಷಣೆಗಾಗಿ ರೂ.40 ಕೋಟಿಗಳು* ಹೊಸದಾಗಿ ರಚನೆಯಾದ ವಾರ್ಡ್​ಗಳ ಕಛೇರಿ ನಿಮಾಣಕ್ಕಾಗಿ ರೂ.12 ಕೋಟಿಗಳು* ವಲಯ ಕಟ್ಟಡಗಳಿಗಾಗಿ ರೂ.10 ಕೋಟಿಗಳು* ವಿವಿದ್ದುದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ರೂ.25 ಕೋಟಿ* ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸ್ಥಾಪನೆಗಾಗಿ ರೂ.5 ಕೋಟಿಗಳು* ಅಂಗನವಾಡಿಗಳ ನಿರ್ಮಾಣಕ್ಕಾಗಿ ರೂ.4.50 ಕೋಟಿಗಳು* ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕಾಗಿ ರೂ.10 ಕೋಟಿಗಳು* ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆಂಟಿ ರೇಬಿಸ್ ಕೇಂದ್ರ ಸ್ಥಾಪನೆಗಾಗಿ ರೂ.5 ಕೋಟಿಗಳು* ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.2.5 ಕೋಟಿಗಳು* ಹೊಸ ಉದ್ಯಾನವನಗಳ ಅಭಿವೃದ್ಧಿಗಾಗಿ ರೂ. 15 ಕೋಟಿಗಳು* ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.30 ಕೋಟಿಗಳು* ಪ್ರಾಣಿಗಳ ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.5 ಕೋಟಿಗಳು ಕೆರೆಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು* ಅಂಡರ್ ಗೌಂಡ್ ಪಾರ್ಕಿಂಗ್ ನಿರ್ಮಾಣಕ್ಕಾಗಿ ರೂ. 5 ಕೋಟಿಗಳು* 75 ಜಂಕ್ಷನ್‌ಗಳ ಅಭಿವೃದ್ಧಿಗಾಗಿ ರೂ.150 ಕೋಟಿಗಳು* ಪ್ರತಿ ವಾರ್ಡಗೆ ರೂ.1.50 ಕೋಟಿಗಳಂತೆ ವಾರ್ಡ್ ಕಾಮಗಾರಿಗಳಿಗಾಗಿ ಒಟ್ಟು ರೂ.303.75 ಕೋಟಿಗಳು* ದಾಸರಹಳ್ಳಿ ವಲಯದಲ್ಲಿ ಬೃಹತ್ ಮಳೆ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕಾಗಿ ರೂ.5 ಕೋಟಿಗಳು* ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್ ಗಳಿಗಾಗಿ ಒಟ್ಟು ರೂ.17.25 ಕೋಟಿಗಳು 1.ಹೊಸ 1. ವಲಯದ ಪ್ರತಿ ವಾರ್ಡಗೆ ರೂ.10 ಲಕ್ಷ2.ಹಳೆ ವಲಯದ ಪ್ರತಿ ವಾರ್ಡಗೆ ರೂ.5 ಲಕ್ಷ* ವಿವೇಚನೆಗೆ ಒಳಪಟ್ಟ ಅನುದಾನಗಳಿಗಾಗಿ ಒಟ್ಟು ರೂ.400 ಕೋಟಿಗಳು1. ಪೂಜ್ಯ ಮಹಾಪೌರರು ರೂ. 100 ಕೋಟಿ2. ಮುಖ್ಯ ಆಯುಕ್ತರು ರೂ.50 ಕೋಟಿ3. ಬೆಂಗಳೂರು ನಗರ ಉಸ್ತುವಾರಿ ಮಂತ್ರಿಗಳು ರೂ.250 ಕೋಟಿ* ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.5 ಕೋಟಿ* 110 ಹಳ್ಳಿಗಳಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.6 ಕೋಟಿ* ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗಾಗಿ ರೂ.24 ಕೋಟಿ* ಒಂಟಿ ಮನೆ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಸಹಾಯಧನ ನೀಡಲು ಒಟ್ಟು ರೂ.100 ಕೋಟಿಗಳು* ಲ್ಯಾಪ್ ಟಾಪ್‌ಗಳ ವಿತರಣೆಗಾಗಿ ರೂ.25 ಕೋಟಿಗಳು* ಹೊಲಿಗೆ ಯತ್ರಗಳ ವಿತರಣೆಗಾಗಿ ರೂ.9 ಕೋಟಿಗಳು* ವೃದ್ಧಾಶ್ರಮಗಳಿಗಾಗಿ ರೂ.16 ಕೋಟಿಗಳು* ವಿದ್ಯಾರ್ಥಿ ವೇತನ ನೀಡಲು ರೂ.5 ಕೋಟಿಗಳು* 15ನೇ ಹಣಕಾಸು ಯೋಜನೆ ಅಡಿಯ ಕಾಮಗಾರಿಗಳಿಗಾಗಿ ರೂ.461 ಕೋಟಿಗಳು* ಉದ್ಯಾನವನಗಳ ನಿರ್ವಹಣೆಗಾಗಿ ಒಟ್ಟಾರೆ ರೂ.80 ಕೋಟಿಗಳು* ಹೊಸ ವಲಯಗಳ ಉದ್ಯಾನವನಗಳಿಗೆ ರೂ.35 ಕೋಟಿ* ಹಳೆ ವಲಯಗಳ ಉದ್ಯಾನವನಗಳಿಗೆ ರೂ.45 ಕೋಟಿ* ಶಿಕ್ಷಣ ಉನ್ನತೀಕರಣ ಕಾರ್ಯಕ್ರಮಗಳಿಗಾಗಿ ರೂ.11.56 ಕೋಟಿಗಳು* ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ರೂ.700 ಕೋಟಿಗಳ ಸಹಾಯನುದಾ* ಬೀದಿ ನಾಯಿಗಳ ನಿರ್ವಹಣೆಗಾಗಿ ರೂ.20 ಕೋಟಿಗಳು* ಇಂದಿರಾ ಕ್ಯಾಂಟೀನ್​ಗಾಗಿ ರೂ.50 ಕೋಟಿಗಳು* ಬೆಂಗಳೂರು ಆರೋಗ್ಯ ವ್ಯವಸ್ಥೆಗಾಗಿ ರೂ.2 ಕೋಟಿಗಳು* ಅವಿನು ಪ್ಲಾಂಟೇಷನ್‌ಗಾಗಿ ರೂ.11 ಕೋಟಿಗಳು* ಮರಗಳ ಗಣತಿಗಾಗಿ ರೂ.4 ಕೋಟಿಗಳು* ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ ರೂ.7.5 ಕೋಟಿಗಳು* Tree canopy ನಿರ್ವಹಣೆಗಾಗಿ ರೂ.14 ಕೋಟಿಗಳು* ಹೈ-ಟೆಕ್ ನರ್ಸರಿಗಳಿಗಾಗಿ ರೂ.8 ಕೋಟಿಗಳು* ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತಂತ, ಶೂ ನೀಡಲು ರೂ.25 ಕೋಟೆಗಳು* ಬೀದಿ ವ್ಯಾಪಾರಿಗಳ ವಲಯಗಳಿಗಾಗಿ ರೂ.25 ಕೋಟಿಗಳು* ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ ರೂ.210 ಕೋಟಿಗಳು* 10 ಹೊಸ ಪ್ಲಾಜಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು* ಕೊಳಗೇರಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.80 ಕೋಟಿಗಳು* ಬೃಹತ್ ಮಳೆ ನೀರುಗಾಲುವೆಗಳ ಅಭಿವೃದ್ಧಿಗಾಗಿ ರೂ.45 ಕೋಟಿಗಳು* ಪ್ರಗತಿಯಲ್ಲಿರುವ 9 ಮೇಲು ಸೇತುವೆ ಕಾಮಗಾರಿಗಳಿಗೆ ರೂ.195 ಕೋಟಿಗಳು
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲೊಂದು‌ ಹೃದಯ ವಿದ್ರಾವಕ ಘಟನೆ: ತಾಯಿ‌ ಶವದೊಂದಿಗೆ 2 ದಿನ ಕಳೆದ 14 ವರ್ಷದ ಬಾಲಕ

3 ರಾಜ್ಯಗಳ ಚುನಾವಣಾ ಫಲಿತಾಂಶ: ನಾಗಾಲ್ಯಾಂಡ್​, ತ್ರಿಪುರಾದಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ

ನಿತ್ಯಾನಂದನ ಕೈಲಾಸ ರಾಯಭಾರಿ ವಿಜಯಪ್ರಿಯಾ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರದ ಆಸಕ್ತಿಕರ ಸಂಗತಿ ಇಲ್ಲಿದೆ….

ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
