ಹಾವೇರಿ:ಒಂದೇ ಮನೆಯಲ್ಲಿ ಎರಡು ಹಾವುಗಳು ಪರಸ್ಪರ ಕಾಳಗ ನಡೆಸಿ ಅದರಲ್ಲೊಂದು ಹಾವನ್ನು ಮತ್ತೊಂದು ಹಾವು ನುಂಗಿ ಸಾಯಿಸಿದ ಘಟನೆ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.
ಮಣ್ಣಿನ ಮಾಳಿಗೆ ಮನೆಯ ಮೇಲ್ಛಾವಣಿಯಲ್ಲಿ ಹಾವು ಕಾಣಿಸಿಕೊಂಡಾಗ ತಕ್ಷಣ ಮನೆಯವರು ಉರಗತಜ್ಞನಾಗಿರುವ ಪೊಲೀಸ್ ಕಾನ್​ಸ್ಟೇಬಲ್ ರಮೇಶ್​ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗತಜ್ಞ ರಮೇಶ್​, ಒಂದು ಹಾವನ್ನು ಹೊರಗೆ ತೆಗೆಯುತ್ತಿದ್ದಂತೆ ಆ ಹಾವು ಮತ್ತೊಂದು ಹಾವನ್ನು ನುಂಗಿರುವುದು ಗೊತ್ತಾಗಿದೆ.
ಒಂದು ಹಾವನ್ನು ಕೆಳಗೆ ಕೆಡವಿದಾಗ ಅದರ ಬಾಯಲ್ಲಿ ಮತ್ತೊಂದು ದೊಡ್ಡದಾದ ಹಾವು ಮೃತಪಟ್ಟಿರುವುದು ಗೊತ್ತಾಗಿದೆ. ಆದರೆ ಒಂದು ನಾಗರಹಾವು ಮಾತ್ರ ಬದುಕಿದ್ದು, ಮತ್ತೊಂದು ಹಾವು ನಾಗರಹಾವಿನ ಬಾಯಿಗೆ ಸಿಕ್ಕಿ ಮೃತಪಟ್ಟಿದೆ.
Sign in to your account
Please enter an answer in digits:ten − five =
Remember me
