ಹೊಸದುರ್ಗ:ನೀವು ಎಟಿಎಂ ಕಾರ್ಡ್​ ಯೂಸ್​ ಮಾಡ್ತೀರಾ? ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ. ರಾಷ್ಟ್ರೀಕೃತ ಬ್ಯಾಂಕ್​ ಎಟಿಎಂ ಕೇಂದ್ರದಲ್ಲಿ ಸ್ಕಿಮ್ಮರ್​ ಹಾಗೂ ಹಿಡನ್​ ಕ್ಯಾಮರಾ ಅಳವಡಿಸಿ ಖಾತೆದಾರರ ಎಟಿಎಂ ಕಾರ್ಡ್​ನ ದತ್ತಾಂಶ, ಸಿಕ್ರೇಟ್​ ಪಿನ್​ ಕಳವು ಮಾಡುತ್ತಿದ್ದ ಕೃತ್ಯ ಬಯಲಾಗಿದ್ದು, ಇದನ್ನು ಗ್ರಾಹಕರೊಬ್ಬು ಪತ್ತೆ ಹಚ್ಚಿದ್ದಾರೆ. ದುಷ್ಕರ್ಮಿಗಳ ಕೃತ್ಯವನ್ನು ಆ ಗ್ರಾಹಕ ವಿಡಿಯೋ ಸಮೇತ ತೋರಿಸಿದ್ದು, ಇದನ್ನು ನೋಡಿದ್ರೆ ಬೆಚ್ಚಿಬೀಳ್ತೀರಿ!
ಪಟ್ಟಣದ ಮುಖ್ಯರಸ್ತೆಯ ಎಸ್​ಬಿಐ ಬ್ಯಾಂಕ್​ ಸಮೀಪದ ಕೆನರಾ ಬ್ಯಾಂಕ್​ ಎಟಿಎಂ ಕೇಂದ್ರದಲ್ಲಿ ಈ ಕೃತ್ಯ ನಡೆದಿದೆ. ಅ.4ರ ಬೆಳಗ್ಗೆ ಮಾರುಕಟ್ಟೆಗೆ ಹೊರಟಿದ್ದ ಬೆಸ್ಕಾಂ ನೌಕರ ಶ್ರೀಹರಿ ಎಂಬುವವರು ಹಣ ತೆಗೆಯಲು ಕೆನರಾ ಬ್ಯಾಂಕ್​ನ ಎಟಿಎಂಗೆ ಹೋಗಿದ್ದರು. ಎಟಿಎಂ ಯಂತ್ರದ ಕೀಪ್ಯಾಡ್​ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಕಾಣಿಸಿದ್ದು, ಅನುಮಾನಗೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಅವರು ಅಂತರ್ಜಾಲದಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆಗಲೇ ಗೊತ್ತಾಗಿದ್ದು ಈ ಎಟಿಎಂ ಯಂತ್ರಕ್ಕೆ ಯಾರೋ ದುಷ್ಕರ್ಮಿಗಳು ಪಿನ್​ ಹೋಲ್​ ಹಿಡನ್​ ಕ್ಯಾಮರಾ ಹಾಗೂ ಸ್ಕಿಮರ್​ ಯಂತ್ರ ಅಳವಡಿಸಿ ಗ್ರಾಹಕರ ಡೆಬಿಟ್​, ಕ್ರೆಡಿಟ್​ ಕಾರ್ಡ್​ಗಳ ರಹಸ್ಯ ದತ್ತಾಂಶ ಕಳ್ಳತನ ಮಾಡುತ್ತಿದ್ದಾರೆಂದು!
‘ಎಟಿಎಂ ಕೇಂದ್ರದಲ್ಲಿ ಕಳ್ಳರ ಕೈಚಳಕ ಇರುವ ಅರಿವಾಗುತ್ತಿದ್ದಂತೆ ನಾನು ಕೂಡಲೇ ಬ್ಯಾಂಕ್​ ಸಿಬ್ಬಂದಿ ಹಾಗೂ ಎಟಿಎಂ ನಿರ್ವಾಹಕರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಸೂಕ್ತ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಹಿಡನ್​ ಕ್ಯಾಮರಾ ಹಾಗೂ ಸ್ಕಿಮ್ಮರ್​ ಯಂತ್ರಗಳನ್ನು ವಶಕ್ಕೆ ತೆಗೆದುಕೊಂಡು ಹೋದರು’ ಎಂದು ಶ್ರೀಹರಿ ವಿವರಿಸಿದ್ದಾರೆ.
ಗ್ರಾಹಕರೊಬ್ಬರ ಮುನ್ನೆಚ್ಚರಿಕೆ ಫಲವಾಗಿ ಬಹುತೇಕ ಬ್ಯಾಂಕ್​ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಹೆಚ್ಚಿನ ಅಪಾಯ ತಪ್ಪಿಸಿದ ಬೆಸ್ಕಾಂ ನೌಕರನ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
https://www.facebook.com/VVani4U/videos/377211270319752
VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗ

ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 8 =
Remember me
