ಬೆಂಗಳೂರು :ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ(ಕೆಪಿಟಿಸಿಎಲ್)ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ವೇತನ ಹಾಗೂ ಪಿಂಚಣಿ ಮರುನಿಗದಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ನಿವೃತ್ತ ಉದ್ಯೋಗಿಗಳ ನೆರವಿಗೆ ಹೈಕೋರ್ಟ್ ಧಾವಿಸಿದೆ.
ಕೆಪಿಟಿಸಿಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನಿವೃತ್ತ ಉದ್ಯೋಗಿಗಳ ವೇತನ ಹಾಗೂ ಪಿಂಚಣಿ ಮರುನಿಗದಿ ಸಂಬಂಧ ಏಕಸದಸ್ಯಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೆ, ತಮ್ಮ ವೃತ್ತಿ ಜೀವನದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ಇದೀಗ ನಿವೃತ್ತರಾಗಿ ಜೀವನದ ಸಂಧ್ಯಾಕಾಲದಲ್ಲಿರುವ ಪಿಂಚಣಿದಾರರನ್ನು ಮೃದುವಾಗಿ ನೋಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ಜತೆಗೆ ಕೆಪಿಟಿಸಿಎಲ್ ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾಗಿರುವುದರಿಂದ ಅದು ಕಲಂ 12ರ ಪ್ರಕಾರ ರಾಜ್ಯದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಕಲ್ಯಾಣ ರಾಜ್ಯದಲ್ಲಿ ಪಿಂಚಣಿದಾರರನ್ನು ಕಾಳಜಿಯಿಂದ ನೋಡಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
ನಿಗಮದ ಪರ ವಕೀಲರು, ಸುಪ್ರೀಂಕೋರ್ಟ್ ಕೆಪಿಟಿಸಿಎಲ್ ವರ್ಸಸ್ ಸಿ.ಪಿ. ಮುಂದಿನ ಮನಿ ಪ್ರಕರಣದಲ್ಲಿ ಉದ್ಯೋಗಿಗಳಿಗೆ ಇದೇ ರೀತಿಯಲ್ಲಿ ಪರಿಹಾರವನ್ನು ಒದಗಿಸಲಾಗಿದೆ. ಹಾಗಾಗಿ ಈ ಮೊದಲು ನಿವೃತ್ತರಾದ ಉದ್ಯೋಗಿಗಳಿಗೆ ಆದೇ ಪ್ರಕಾರವಾಗಿ ಪರಿಹಾರ ನೀಡಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಕೆಪಿಟಿಸಿಎಲ್ ಮುಂದಿಟ್ಟಿದ್ದ ಎಲ್ಲ ವಾದಗಳನ್ನು ತಳ್ಳಿಹಾಕಿದ ನ್ಯಾಯಾಲಯ, ‘‘ಏಕಸದಸ್ಯಪೀಠದ ಆದೇಶದಿಂದಾಗಿ ಉದ್ಯೋಗಿಗಳಿಗೆ ಸಣ್ಣ ಪ್ರಮಾಣದ ಇಂಕ್ರಿಮೆಂಟ್ ನೀಡಬೇಕಾಗುತ್ತದೆ. ಇದರಿಂದರಿಂದ ನಿಗಮದ ಬಜೆಟ್ ಮೇಲೆ ಅಂತಹ ಹೊರೆಯೇನು ಆಗುವುದಿಲ್ಲ. ಹಲವು ವರ್ಷಗಳ ಕಾಲ ನಿಗಮಕ್ಕಾಗಿ ದುಡಿದಿರುವವರಿಗೆ ಸಣ್ಣ ಮೊತ್ತವನ್ನು ನೀಡುವುದರಿಂದ ಆಕಾಶವೇನೂ ಕಳಚಿ ಬೀಳವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಉದ್ಯೋಗಿಗಳು ಬೇಗೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರೂ ಸಹ ಸಹ ಅವರಿಗೆ ವರ್ಷಾವಾರು ಸೇವೆ ಪರಿಗಣಿಸಿ ಇಂಕ್ರಿಮೆಂಟ್ ನೀಡಬೇಕಾಗುತ್ತದೆ. ಅದರ ಪಾವತಿಯಿಂದ ನಿಗಮ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಆದೇಶಿಸಿದೆ.
ಮೇಲ್ಮನವಿ ಸಲ್ಲಿಸಿದ್ದ ಕೆಪಿಟಿಸಿಎಲ್ತುಮಕೂರಿನ ಎಲ್. ಮಲ್ಲಿಕಾರ್ಜುನಪ್ಪ ಸೇರಿ ಮೂವತ್ತಕ್ಕೂ ಅಧಿಕ ನಿವೃತ್ತ ಉದ್ಯೋಗಿಗಳು ಕೆಪಿಟಿಸಿಎಲ್ ತಮಗೆ ಸರಿಯಾಗಿ ವೇತನ ಹಾಗೂ ಪಿಂಚಣಿ ನಿಗದಿ ಮಾಡಿಲ್ಲ ಎಂದು ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ಏಕ ಸದಸ್ಯಪೀಠ 2023ರ ಡಿ.15ರಂದು ವಾರ್ಷಿಕ ಹೆಚ್ಚುವರಿ ಇಂಕ್ರಿಮೆಂಟ್ ನೀಡುವ ಜತೆಗೆ ಅವರ ವೇತನ ಮರುನಿಗದಿಪಡಿಸಬೇಕು ಮತ್ತು ನಂತರ ಪಿಂಚಣಿಯನ್ನು ಮರುನಿಗದಿ ಮಾಡಿ ಬಾಕಿ ಸಹಿತ ಪಾವತಿಸಬೇಕು ಎಂದು ಆದೇಶ ನೀಡಿತು. ಆದೇಶ ಪ್ರಶ್ನಿಸಿ ಕೆಪಿಟಿಸಿಎಲ್ ಮೇಲ್ಮನವಿ ಸಲ್ಲಿಸಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
