ಬೆಂಗಳೂರು: ಕರೊನಾ ವೈರಸ್ ಹರಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸಾಫ್ಟ್​ವೇರ್ ಇಂಜಿನಿಯರ್​ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಟೆಕ್ಕಿ ಮೊಹಮ್ಮದ್ ಮುಜೀಬ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಪೀಠ, ಜಾಮೀನು ಮಂಜೂರು ಮಾಡಲು ನಿರಾಕರಿಸಿತು.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಅರ್ಜಿದಾರನಿಗೆ ತನ್ನ ನಡೆ ಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅರಿವಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಾಕ್ಯಗಳು ದೇಶದ ಸಾಮರಸ್ಯ, ಸಾರ್ವಭೌಮತ್ವ, ಭ್ರಾತೃತ್ವ ಮತ್ತು ಐಕ್ಯತೆಗೆ ಧಕ್ಕೆ ಉಂಟು ಮಾಡುವಂತಿದೆ. ಇಡೀ ಪ್ರಪಂಚ ಕೋವಿಡ್-19ನಂಥ ಆಘಾತಕಾರಿ ಸನ್ನಿವೇಶ ಎದುರಿಸುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ಇದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ
ಅರ್ಜಿದಾರ ಬಹರೇನ್ ಮತ್ತು ಕುವೈತ್​ಗಳಲ್ಲಿ ಕೆಲ ವರ್ಷ ನೆಲೆಸಿದ್ದು, ಧಾರ್ವಿುಕ ಮೂಲಭೂತವಾದ ಹಾಗೂ ದೇಶ ವಿರೋಧಿ ಚಿಂತನೆ ಹೊಂದಿದ್ದ. ಇಸ್ಲಾಮಿಕ್ ಮಾಹಿತಿಗಾಗಿ ಪಾಕಿಸ್ತಾನದ ವಾಟ್ಸ್​ಆಪ್ ನಂಬರ್ ಹಂಚಿಕೊಂಡಿದ್ದಾನೆಂದು ತಿಳಿದುಬಂದಿದೆ. ಅರ್ಜಿದಾರನ ಸಂಪರ್ಕಗಳ ಬಗ್ಗೆ ಎನ್​ಐಎ ಸಹ ತನಿಖೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ಜಾಮೀನು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಇದನ್ನೂ ಓದಿ:ಅಪಾರ್ಟ್ ಮೆಂಟ್​ನಲ್ಲಿ ಸೋಂಕಿತನಿದ್ದರೆ 3 ಅಂತಸ್ತು ಮಾತ್ರ ಕ್ವಾರಂಟೈನ್
ಸೀನುವ ಮೂಲಕ ಸೋಂಕು ಹರಡಿ ಎಂದಿದ್ದ..:‘ಹೊರಗೆ ತೆರಳಿ ಸಾರ್ವಜನಿಕ ಪ್ರದೇಶದಲ್ಲಿ ಬಾಯಿ ಮುಚ್ಚಿಕೊಳ್ಳದೆ ಸೀನುವ ಮೂಲಕ ವೈರಸ್ ಹರಡಲು ನಾವೆಲ್ಲರೂ ಕೈಜೋಡಿಸೋಣ. ಈ ವಿಷಯವನ್ನು ಎಲ್ಲರಿಗೂ ಮುಟ್ಟಿಸಿ ಪ್ರಪಂಚ ಕೊನೆಗಾಣಿಸಿ. ನಾಯಿಗಳನ್ನು ಕೊಲ್ಲಲು ನನ್ನ ಸ್ಟನ್​ಗನ್ ಸಿದ್ಧವಿದೆ’ ಎಂದು ಮುಜೀಬ್ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಮಹೇಶ್ ಮಲ್ಲಯ್ಯನವರ್ ಎಂಬುವರು ಎಲೆಕ್ಟ್ರಾನಿಕ್ಸ್​ಸಿಟಿ ಪೊಲೀಸರಿಗೆ ದೂರು ನೀಡಿದ್ದರು. ಮಾ.9ರಂದು ಮುಜೀಬ್​ನನ್ನು ಬಂಧಿಸಲಾಗಿತ್ತು.
ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
