ಜಗನ್ ರಮೇಶ್ಬೆಂಗಳೂರು:ಸರ್ಕಾರಿ ಅಧಿಕಾರಿಗಳನ್ನು ಎರವಲು ಸೇವೆಗೆ (ಡೆಪ್ಯೂಟೇಷನ್) ನಿಯೋಜಿಸುವ ಸಂದರ್ಭದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಇಲಾಖೆಗಳ ಧೋರಣೆಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಮಾದರಿ ಉದ್ಯೋಗದಾತನಾಗಿರುವ ಸರ್ಕಾರವೇ ‘ಈಸ್ಟ್ ಇಂಡಿಯಾ ಕಂಪನಿ’ಯಂತೆ ವರ್ತಿಸಬಾರದು ಎಂದು ಕಿವಿ ಹಿಂಡಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಬಿ.ಚಿಕ್ಕಲಗಿ ಅವರನ್ನು 2017ರ ಮೇ 9ರಂದು ಎರವಲುಸೇವೆ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು. ಮೊದಲಿಗೆ ವಿಜಯಪುರ ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ನಿಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ, ನಂತರ ಬಾಗಲಕೋಟೆ ಯೋಜನಾ ವಿಭಾಗದ ತಾಂತ್ರಿಕ ಸಹಾಯಕರಾಗಿ ನಿಯೋಜಿಸಿ 2017ರ ಜು.15ರಂದು ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಚಿಕ್ಕಲಗಿ ಕೆಎಟಿ ಮೆಟ್ಟಿಲೇರಿದ್ದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಕೆಎಟಿ, 2 ವರ್ಷಗಳ ನಂತರ ಅರ್ಜಿ ಇತ್ಯರ್ಥಪಡಿಸಿತ್ತು. ಈ ಮಧ್ಯೆ, ಚಿಕ್ಕಲಗಿ ಅವರನ್ನು ಎರವಲು ಸೇವೆ ಮೇಲೆ ಪಡೆದ ಆದೇಶವನ್ನು 2020ರ ಫೆ.27ರಂದು ಏಕಾಏಕಿ ರದ್ದುಪಡಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ, ಮಾತೃ ಇಲಾಖೆಗೆ ವಾಪಸ್ ಕಳುಹಿಸಿತ್ತು. ಇದನ್ನು ಮತ್ತೆ ಕೆಎಟಿಯಲ್ಲಿ ಪ್ರಶ್ನಿಸಲಾಗಿತ್ತಾದರೂ, ಆ.8ರಂದು ಅರ್ಜಿದಾರರ ಮನವಿ ಪುರಸ್ಕರಿಸಲು ಕೆಎಟಿ ನಿರಾಕರಿಸಿತ್ತು. ಇದರಿಂದ ಚಿಕ್ಕಲಗಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಿ ಅಧಿಕಾರಿಗಳನ್ನು ಎರವಲು ಸೇವೆ ಮೇಲೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ನಿಯೋಜಿಸುವಾಗ ಹಾಗೂ ಎರವಲು ಸೇವೆ ರದ್ದುಪಡಿಸುವಾಗ ಮಾತೃ ಇಲಾಖೆ, ಎರವಲು ಸೇವೆಗೆ ಪಡೆದ ಇಲಾಖೆ ಹಾಗೂ ಸೇವೆಗೆ ನಿಯೋಜಿಸಲ್ಪಡುವ ಅಧಿಕಾರಿಯ ನಡುವೆ ಸಮಾಲೋಚನೆಗೆ ಅವಕಾಶ ಕೊಡದೆ ಏಕಪಕ್ಷೀಯ ಆದೇಶ ಹೊರಡಿಸಲಾಗುತ್ತಿದೆ. ಸೇವಾ ನಿಯಮಗಳಿರುವ ಈಗಿನ ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪನಿಯಂತೆ ಸರ್ಕಾರಗಳು ವರ್ತಿಸುವುದು ಸರಿಯಲ್ಲ. ಎಂದು ತೀಕ್ಷ್ಣವಾಗಿ ನುಡಿದಿದೆ.
ಎರವಲು ಸೇವೆಯ ಅರ್ಥ, ವ್ಯಾಪ್ತಿ, ಅದಕ್ಕಿರುವ ಕಾನೂನಿನ ಮಾನ್ಯತೆ ಮತ್ತು ಎರವಲು ಸೇವೆ ಮೇಲೆ ಸರ್ಕಾರಿ ಉದ್ಯೋಗಿಯನ್ನು ನಿಯೋಜಿಸುವಾಗ ಅನುಸರಿಬೇಕಾದ ಮಾನದಂಡಗಳ ಬಗ್ಗೆ ಸವಿವರವಾದ ಆದೇಶ ನೀಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ, ಎರವಲು ಸೇವೆ ವ್ಯವಸ್ಥೆಯಲ್ಲಿ ಮಾತೃ ಇಲಾಖೆ, ಎರವಲು ಸೇವೆಗೆ ಪಡೆವ ಇಲಾಖೆ ಮತ್ತು ಸೇವೆಗೆ ನಿಯೋಜನೆಗೊಳ್ಳುವ ಸರ್ಕಾರಿ ನೌಕರ ಮೂವರ ಪಾತ್ರವೂ ಇರುತ್ತದೆ. ಮೂವರೂ ಸಮಾಲೊಚನೆ ನಡೆಸಿ ಒಮ್ಮತದ ನಿರ್ಧಾರ ಕೈಗೊಂಡಾಗ ಮಾತ್ರ ಎರವಲು ಸೇವೆ ಕಾನೂನುಬದ್ಧವಾಗುತ್ತದೆ ಎಂದು ತಿಳಿಸಿದೆ.
ಒತ್ತಡ ಹೇರುವಂತಿಲ್ಲ :ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಎರವಲು ಸೇವೆ ಮೇಲೆ ಹೋಗುವುದಕ್ಕೆ ನೌಕರನಿಗೆ ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ. ಎರವಲು ಸೇವೆ ಪಡೆದ ಇಲಾಖೆಯು ಏಕಪಕ್ಷೀಯವಾಗಿ ನೌಕರನ ಸೇವಾವಧಿ ಹಾಗೂ ಸೌಲಭ್ಯಗಳನ್ನು ಕಡಿತಗೊಳಿಸುವಂತೆಯೂ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, 2020ರ ಫೆ.27ಕ್ಕೂ ಮುನ್ನ ಚಿಕ್ಕಲಗಿ ಅವರಿದ್ದ ಹುದ್ದೆಗೆ ಮರುನಿಯೋಜಿಸುವಂತೆ ನಿರ್ದೇಶಿಸಿದೆ.
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಛೋಟಾ ತೆಲಗಿ! ಹೇಗಿತ್ತು ನೋಡಿ ಈತನ ನಕಲಿ ಛಾಪಾ ಕಾಗದ ದಂಧೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
