ಬೆಂಗಳೂರು:ಕರ್ನಾಟಕ ಹೈಕೋರ್ಟ್ ಜಡ್ಜ್​ಗಳನ್ನು ಹತ್ಯೆ ಮಾಡಿಸುವುದಾಗಿ ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಹೈಕೋರ್ಟ್​ ಪಿಆರ್​​ಒ ಅವರು ಸೈಬರ್​ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹೈಕೋರ್ಟ್​ ಪಿಆರ್​​ಒ ಕೆ. ಮುರಳೀಧರ್ ಅವರಿಗೆ ಹೈಕೋರ್ಟ್​ನಿಂದ ನೀಡಲಾಗಿರುವ ಮೊಬೈಲ್​ಫೋನ್​ ನಂಬರ್​ಗೆ ಜುಲೈ 12ರ ರಾತ್ರಿ ಅನಾಮಧೇಯ ನಂಬರ್​ನಿಂದ ವಾಟ್ಸ್​ಆ್ಯಪ್ ಸಂದೇಶ ಬಂದಿದ್ದು, ಅದರಲ್ಲಿ ಎಬಿಎಲ್​ (ಅಲೈಡ್​ ಬ್ಯಾಂಕ್ ಲಿಮಿಟೆಡ್​ ಪಾಕಿಸ್ತಾನ್​) ಖಾತೆ ಸಂಖ್ಯೆ ನಮೂದಿಸಿ, ಆ ಖಾತೆಗೆ 50 ಲಕ್ಷ ರೂ. ಹಣ ಹಾಕುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:ನಾಯಿ ಕಾಣೆಯಾಗಿದೆ, ಸೆಕ್ಯುರಿಟಿಯವರನ್ನು ಅಮಾನತುಗೊಳಿಸಿ: ಪೊಲೀಸ್​ ಅಧಿಕಾರಿಗೆ ಹೈಕೋರ್ಟ್​ ಜಡ್ಜ್ ಪತ್ರ
ಅಲ್ಲದೆ ಹೈಕೋರ್ಟ್​ನ ಕೆಲವು ಜಡ್ಜ್​ಗಳ ಹೆಸರನ್ನು ನಮೂದಿಸಲಾಗಿದ್ದು, ಹಣ ಹಾಕದಿದ್ದರೆ ದುಬೈ ಸುಪಾರಿ ಹಂತಕರ ಮೂಲಕ ಅವರನ್ನು ಹತ್ಯೆ ಮಾಡಿಸುವುದಾಗಿ ಹಿಂದಿ, ಉರ್ದು, ಇಂಗ್ಲಿಷ್​ ಭಾಷೆಗಳಲ್ಲಿ ಸಂದೇಶ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪಿಆರ್​ಒ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

30 ಕೋಟಿ ರೂಪಾಯಿಯ ವಾಚ್​ಗಳಿದ್ದರೂ ಈತನ ಟೈಮ್​ ಸರಿ ಇರಲಿಲ್ಲ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 + 6 =
Remember me
