ಬೇಸಿಗೆಅವಧಿಯಲ್ಲಿ ಸಹಜವಾಗಿ ವಿದ್ಯುತ್​ಗೆ ಬೇಡಿಕೆ ಜಾಸ್ತಿ ಇರುತ್ತದೆ. ಮನೆ, ಕಚೇರಿಗಳಲ್ಲಿ ಫ್ಯಾನ್, ಎಸಿ, ರೆಫ್ರಿಜರೇಟರ್ ಮುಂತಾದ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಳದೊಂದಿಗೆ ಅದಕ್ಕೆ ವಿದ್ಯುತ್ ಪೂರೈಕೆಯೂ ಅಧಿಕವಾಗಿ ಬೇಕಾಗುತ್ತದೆ. ಇದಲ್ಲದೆ, ಹಲವಾರು ಕಾರಣಗಳಿಂದಾಗಿ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಬಳಕೆ ಸಾಕಷ್ಟು ಹೆಚ್ಚಳ ಕಾಣುತ್ತಿದೆ. ದೇಶದ ಆರ್ಥಿಕ ಪ್ರಗತಿಯನ್ನು ಸೂಚಿಸುವ ಒಟ್ಟು ದೇಶಿಯ ಉತ್ಪನ್ನವು (ಜಿಡಿಪಿ) ಅಂದಾಜು ಶೇಕಡಾ 7ರಷ್ಟು ಪ್ರಮಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆ ಕಾಣುತ್ತಿದೆ.
ಇದೇ ವೇಳೆ, ದೇಶದಲ್ಲಿ ವಿದ್ಯುತ್ ಬೇಡಿಕೆಯು ವಾರ್ಷಿಕವಾಗಿ ಅಂದಾಜು ಶೇಕಡಾ 10ರಷ್ಟು ಹೆಚ್ಚಳವಾಗುತ್ತ ಸಾಗಿದೆ. ಹೀಗಾಗಿ, ನಿರಂತರವಾಗಿ ಹೆಚ್ಚಳ ಕಾಣುತ್ತಿರುವ ವಿದ್ಯುತ್ ಬೇಡಿಕೆ ಹಾಗೂ ಬೇಸಿಗೆಯ ಕಾರಣದಿಂದ ಅಧಿಕ ಬಳಕೆ – ಈ ಎರಡೂ ಕಾರಣಗಳಿಂದಾಗಿ ಪ್ರಸ್ತುತ ಎರಡ್ಮೂರು ತಿಂಗಳಲ್ಲಿ ವಿದ್ಯುತ್ ಬೇಡಿಕೆಯು ದಾಖಲೆ ಮಟ್ಟ ತಲುಪಲಿದೆ. ಈ ವೇಳೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳುವುದು ಬೃಹತ್ ಸವಾಲಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಇಂಧನ ಖಾತೆ ಸಚಿವಾಲಯವು ವಿದ್ಯುತ್, ಕಲ್ಲಿದ್ದಲು, ರೈಲ್ವೆ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿ, ಬೇಸಿಗೆ ಕಾಲದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಮಾಡದಂತೆ ಪೂರೈಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಮಾರ್ಗದರ್ಶನ ಹಾಗೂ ಸೂಚನೆ ನೀಡಿರುವುದು ಸೂಕ್ತ ಮುನ್ನೆಚ್ಚರಿಕೆಯ ಕ್ರಮವಾಗಿದೆ.
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಅಂದಾಜಿನ ಪ್ರಕಾರ ಈ ವರ್ಷದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು ಏಪ್ರಿಲ್ ತಿಂಗಳಲ್ಲಿ ಬರಲಿದ್ದು, 229 ಗಿಗಾ ವಾಟ್ ಪೂರೈಕೆಯ ಅಗತ್ಯತೆ ಉಂಟಾಗಲಿದೆ. ನಂತರ ದೇಶದ ದಕ್ಷಿಣ ಭಾಗದಿಂದ ಮುಂಗಾರು ಹಂಗಾಮು ಆರಂಭವಾಗಿ, 3-4 ತಿಂಗಳುಗಳಲ್ಲಿ ಇಡೀ ದೇಶವನ್ನು ವ್ಯಾಪಿಸುವುದರಿಂದ ಬೇಡಿಕೆ ಕಡಿಮೆಯಾಗಲಿದೆ.
ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಸೂಕ್ತವಾಗಿ ನಿಭಾಯಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿದ್ಯುತ್ ಕಂಪನಿಗಳಿಗೆ ಸೂಚಿಸಲಾಗಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಲ್ಲಿದ್ದಲು ಹಂಚಿಕೆಗಾಗಿ ನ್ಯಾಯಯುತ ಮತ್ತು ಪಾರದರ್ಶಕ ಕಾರ್ಯವಿಧಾನವನ್ನು ರೂಪಿಸುವತ್ತ ಗಮನ ನೀಡಬೇಕೆಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಸಂಪೂರ್ಣ ಸಾಮರ್ಥ್ಯದ ಅನುಸಾರ ಕಾರ್ಯನಿರ್ವಹಿಸಲು ಎಲ್ಲಾ ಕಲ್ಲಿದ್ದಲು ಆಧಾರಿತ ಸ್ಥಾವರಗಳಿಗೆ ಸೂಚಿಸಿದೆ. ಬೇಡಿಕೆಗೆ ತಕ್ಕಂತೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಕ್ರಮ ಕೈಗೊಳ್ಳುವ ಮೂಲಕ ಕೊರತೆಯಾಗದಂತೆ ಕಟ್ಟುನಿಟ್ಟಿನ ಸಿದ್ಧತೆ, ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ದೇಶದಲ್ಲಿ ಈಗಲೂ ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ಕಲ್ಲಿದ್ದಲು ಸ್ಥಾವರಗಳಿಂದ ಉತ್ಪಾದಿಸಲಾಗುತ್ತಿದ್ದು, ಶೇ. 70ರಷ್ಟು ವಿದ್ಯುತ್ ಇಲ್ಲಿಂದಲೇ ಪೂರೈಕೆಯಾಗುತ್ತದೆ. ಜಲ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಘಟಕಗಳಿಂದ ಶೇ. 21ರಷ್ಟು ದೊರೆಯುತ್ತದೆ.
ಇನ್ನುಳಿದುದು ಪರಮಾಣು, ಪವನ ಮುಂತಾದವುಗಳಿಂದ ಲಭ್ಯವಾಗುತ್ತದೆ. ಪರಿಸರ ಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವುದನ್ನು ಕೈಬಿಡಬೇಕಾಗಿದೆ. ಅಲ್ಲದೆ, ಮಾಲಿನ್ಯ ಕಡಿಮೆ ಮಾಡುವುದಕ್ಕಾಗಿ ವಿದ್ಯುತ್ ವಾಹನಗಳ ಬಳಕೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ವಿದ್ಯುತ್ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡುತ್ತಿದೆ. ಈ ಸವಾಲನ್ನು ನಿಭಾಯಿಸಲು ಸರ್ಕಾರವು ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೆಚ್ಚಳ ಮಾಡುವತ್ತ ತೀವ್ರಗತಿಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಇದೆ.
ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…

ಈ ಒಂದು ಮಾತಿಗೆ ನಡೆದೇ ಹೋಯ್ತು ಘೋರ ದುರಂತ: ಯುವಕನ ಪರಿಚಯವೇ 48ರ ಮಹಿಳೆ ಪ್ರಾಣಕ್ಕೆ ಕುತ್ತಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
