ಬೆಂಗಳೂರು :ಬಿಜೆಪಿಗೆ ಬೆಂಬಲ ನೀಡುವ ತೀರ್ಮಾನವನ್ನು ಜೆಡಿಎಸ್ ಈ ಮೊದಲೇ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದರೆ, ಇಷ್ಟೆಲ್ಲ ರಾಮಾಯಣ ರಂಪ ಆಗುತ್ತಲೇ ಇರಲಿಲ್ಲ ಎನ್ನುವುದು ಕಾಂಗ್ರೆಸ್ ಸದಸ್ಯರುಗಳ ಅಭಿಮತ.
ಜನವರಿಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸಭಾಪತಿ ಮೇಲಿನ ಅವಿಶ್ವಾಸ ಗೊತ್ತುವಳಿ ಬಗ್ಗೆ ತೀರ್ಮಾನ ಆಗುತ್ತಿತ್ತು. ಆದರೆ, ಬಿಜೆಪಿ ಕೇವಲ ಇನ್ನು 15 ದಿನ ಕಾಯಲು ಸಾಧ್ಯವಿಲ್ಲ ಎಂದು ಅಧಿಕಾರಕ್ಕಾಗಿ ದುಂಡಾವರ್ತನೆ ಮಾಡಿದ್ದು ಖಂಡನೀಯ.-ಕೆ.ಸಿ.ಕೊಂಡಯ್ಯ, ಮೇಲ್ಮನೆ ಕಾಂಗ್ರೆಸ್ ಸದಸ್ಯ.
ಉದಾತ್ತ ಗೌರವ ಹೊಂದಿದ್ದ ವಿಧಾನ ಪರಿಷತ್​ಗೆ ನಾವೆಲ್ಲರೂ ಕಳಂಕ ತಂದಿದ್ದೇವೆ. ಜನರ ಕ್ಷಮೆ ಕೇಳುವುದಷ್ಟೆ ಉಳಿದಿದೆ. ಇಂಥಹ ಘಟನೆ ಮೇಲ್ಮನೆಯಲ್ಲಿ ನಡೆಯಬಾರದಿತ್ತು. ಸರ್ಕಾರವೇ ಇಂಥ ಘಟನೆಗೆ ಕುಮ್ಮಕ್ಕು ಕೊಡುವ ರೀತಿಯಲ್ಲಿ ನಡೆದುಕೊಳ್ಳಬಾರದಿತ್ತು.-ಸಿ.ಎಂ.ಇಬ್ರಾಹಿಂ, ಮೇಲ್ಮನೆ ಕಾಂಗ್ರೆಸ್ ಸದಸ್ಯ.
ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದಾಗ ಜೆಡಿಎಸ್ ತನ್ನ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸದೆ, ಮುಗುಮ್ಮಾಗಿ ಉಳಿದಿತ್ತು. ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಹೆಜ್ಜೆ ಇಡಲು ತೀರ್ಮಾನಿಸಿದ್ದು, ಇನ್ನಷ್ಟು ಗೊಂದಲ ಮತ್ತು ಇಂದಿನ ಪರಿಷತ್ ನಡವಳಿಕೆಗೆ ಕಾರಣ ಎನ್ನುವುದು ಅವರ ಅಭಿಪ್ರಾಯ.
ಇದನ್ನೂ ಓದಿ:ಇದೇನು ಬನಾನ ರಿಪಬ್ಲಿಕಾ? – ಬಿಜೆಪಿ ಶಾಸಕರು ಗೂಂಡಾಗಳು | ಸಿದ್ದರಾಮಯ್ಯ ಟೀಕಾಪ್ರಹಾರ
ಕಾಂಗ್ರೆಸ್ ನಡೆ:ಬಿಜೆಪಿ ಯೋಜನೆಗಳೆಲ್ಲವೂ ತಿಳಿದಿದ್ದ ಕಾಂಗ್ರೆಸ್ ಅದನ್ನು ಎದುರಿಸಲು ಸಿದ್ಧವಾಗಿತ್ತು. ಬೆಳಗ್ಗೆ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಸೇರಿ ರ್ಚಚಿಸಿತ್ತು. ಬಿಜೆಪಿ ಸೋಮವಾರವೇ ಉಪ ಸಭಾಪತಿಗೆ ಪತ್ರ ಬರೆದಿದ್ದರಿಂದ ಇದೇ ರೀತಿ ಸದನ ನಡೆಯಬಹುದೆಂದು ಲೆಕ್ಕ ಹಾಕಿದ್ದರು. ಅದನ್ನು ಎದುರಿಸಲು ಸಿದ್ಧರಾಗಿದ್ದರು. ಎಲ್ಲ ತಮ್ಮ ಎಣಿಕೆಯಂತೆ ನಡೆಯುವಂತೆ ನೋಡಿಕೊಂಡರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ವಿಧಾನ ಪರಿಷತ್ ಹೈಡ್ರಾಮಾ: ಕಾಂಗ್ರೆಸ್ ವರ್ಸಸ್ ಬಿಜೆಪಿ- ಯಾರ ವಾದ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 5 =
Remember me
