ಬೆಂಗಳೂರು:ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನಮ್ಮ ರಾಜ್ಯ ತಲೆತಗ್ಗಿಸುವಂಥ ಘಟನೆಗೆ ನಿನ್ನೆ ವಿಧಾನಪರಿಷತ್ ವೇದಿಕೆಯಾಗಿದ್ದು, ಈ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತಮ್ಮದೇ ಆದ ವಾದಗಳನ್ನು ಮುಂದಿರಿಸಿದ್ದಾರೆ.
ಬಿಜೆಪಿ ವಾದವೇನು?
1ಅವಿಶ್ವಾಸ ಮಂಡನೆ ಅರ್ಜಿ ಹದಿನಾಲ್ಕು ದಿನ ಮುಗಿದು, ನಿಯಮದ ಪ್ರಕಾರ ಐದು ದಿನಗಳೊಳಗೆ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದ ಒಳಗೇ ಚರ್ಚೆಗೆ ನೀಡಬೇಕಿತ್ತು.
2ಐದನೇ ದಿನ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯದ ವಿಚಾರ ಇರಲಿಲ್ಲ. ನಾವು ಈ ಬಗ್ಗೆ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಸ್ಪಷ್ಟ ಮಾಹಿತಿ ನೀಡಿದರೂ ಸ್ಪಷ್ಟತೆ ಕೊಡಲಿಲ್ಲ.
3ಅವಿಶ್ವಾಸ ನಿರ್ಣಯ ಸದನದ ವಿಚಾರ, ಮತ್ತೆ ಅವಿಶ್ವಾಸ ನೋಟಿಸ್ ಕೊಟ್ಟು, ಅವರು ನನಗೆ ಅಧಿಕಾರವಿದೆ ಎಂದು ಮತ್ತೆ ತಿರಸ್ಕರಿಸಿದರೆ ಹೇಗಾಗುತ್ತದೆ.
4ಅರ್ಜಿ ಅವಧಿ ಮುಗಿದ ಬಳಿಕ ಸಭಾಪತಿಯವರಿಗೆ ಆ ಸ್ಥಾನದಲ್ಲಿ ಕೂರಿವ ಅವಕಾಶ ಸಿಗುವುದಿಲ್ಲ. ಈ ಕಾರಣಕ್ಕೆ ಉಪ ಸಭಾಪತಿಯವರನ್ನು ಸದನ ನಡೆಸಲು ಕೋರಿದೆವು.
5ಉಪ ಸಭಾಪತಿ ಆ ಸ್ಥಾನದಲ್ಲಿ ಕುಳಿತಾಗ ಕಾಂಗ್ರೆಸ್​ನವರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದು ಸದನಕ್ಕೆ ಕಪ್ಪು ಚುಕ್ಕೆಯಾಗಿದೆ.
6ಬಿಜೆಪಿ ಪ್ರಸ್ತಾವಕ್ಕೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ ಬಳಿಕ ಒಂದು ಕ್ಷಣವೂ ತಡಮಾಡದೆ ಸಭಾಪತಿಯಿಂದ ರಾಜೀನಾಮೆ ಕೊಡಿಸಬೇಕಿತ್ತು. ಇದು, ಕಾಂಗ್ರೆಸ್ ಕರ್ತವ್ಯವಾಗಿತ್ತು.
ಕಾಂಗ್ರೆಸ್ ವಾದವೇನು?
1ಸಭಾಪತಿಗಳು ಸೂಚಿಸಿದ ನಂತರ ಉಪ ಸಭಾಪತಿ ಪೀಠದಲ್ಲಿ ಕೂರಬೇಕು. ಯಾರೋ ಹೇಳಿದರು ಎಂದ ಮಾತ್ರಕ್ಕೆ ಸಭಾಪತಿ ಸ್ಥಾನದಲ್ಲಿ ಕೂರುವುದು ಕಾನೂನಿನ ಪ್ರಕಾರ ತಪ್ಪು.
2ಅವಿಶ್ವಾಸ ನಿರ್ಣಯ ವಿಚಾರ ಅಜೆಂಡಾದಲ್ಲಿ ಇಲ್ಲ, ಅದನ್ನು ಸಭಾಪತಿ ತಿರಸ್ಕರಿಸಿದ್ದಾರೆ. ಹೀಗಿರುವಾಗ ಅದರ ಬಗ್ಗೆ ಚರ್ಚೆ ಸಲ್ಲ.
3ಕಲಾಪ ಆರಂಭವಾಗುವ ಮೊದಲು ಬಿಜೆಪಿ ಸದಸ್ಯರು ಸದನದ ಬಾಗಿಲು ಹಾಕಿದ್ದು ಕಾನೂನು ಬಾಹಿರ. ಇಂತಹ ಅಗೌರವ ಸೂಚಿಸಿದ ಘಟನೆ. ಹಿಂದೆ ಯಾವತ್ತೂ ನಡೆದಿರಲಿಲ್ಲ.4ಎಲ್ಲಿಯ ತನಕ ಸಭಾಪತಿ ಇರುತ್ತಾರೋ ಅಲ್ಲಿಯವರೆಗೆ ಅವರೇ ಸುಪ್ರೀಂ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು.
5ಸರ್ಕಾರ ಸಂಪುಟ ಸಭೆ ನಿರ್ಧಾರ ಕೈಗೊಂಡು ಸದನ ಕರೆಯಬೇಕು. ಅವಿಶ್ವಾಸ ನಿರ್ಣಯ ಚರ್ಚೆ ಆಗದೆ ಅವಿಶ್ವಾಸ ಇದೆ ಎನ್ನುವುದು ತಪ್ಪು.
6ಬಿಜೆಪಿಗೆ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಅದನ್ನು ಚರ್ಚೆ ಮಾಡಬೇಕಿತ್ತು. ಅದರ ಬದಲಾಗಿ ಅವಿಶ್ವಾಸ ಚರ್ಚೆಯನ್ನೇ ಮೊದಲು ಮಾಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ವಿಧಾನ ಪರಿಷತ್ ಹೈಡ್ರಾಮಾ ಹೇಗಾಯಿತು- ಯಾಕಾಯಿತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 16 =
Remember me
