ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಅಂತಿಮ ಸಂಸ್ಕಾರಕ್ಕೆ ಇಂದು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೌಂದರ್ಯ ಪತಿ ಡಾ.ನೀರಜ್ ಅವರಿಗೆ ಸೇರಿರುವ ಅಬ್ಬಿಗೆರೆಯ ಫಾರ್ಮ್​ಹೌಸ್​ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರಿ ಡಾ.ಸೌಂದರ್ಯ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಕ್ರೆಸೆಂಟ್ ರಸ್ತೆಯ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದರು. ಇಂದು ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಚಿಕ್ಕಮಗುವೊಂದನ್ನು ಬೇರೆ ರೂಮ್​ನಲ್ಲಿ ಬಿಟ್ಟು ವೇಲ್ ಮೂಲಕ ನೇಣು ಹಾಕಿಕೊಂಡು ಅವರು ಸಾವಿಗೆ ಶರಣಾಗಿದ್ದರು. ಹೈಗ್ರೌಂಡ್ಸ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.
ಘಟನೆ ಬಳಿಕ ಡಾ.ಸೌಂದರ್ಯ ಅವರನ್ನು ನೇಣು ಬಿಗಿದುಕೊಂಡಿದ್ದ ವೇಲ್ ಸಮೇತ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಸೌಂದರ್ಯರ ಸಾವನ್ನು ದೃಢಪಡಿಸಿದ್ದರ ಹಿನ್ನೆಲೆಯಲ್ಲಿ ಪತಿ ಹೈಗ್ರೌಂಡ್ಸ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಅಲ್ಲಿಗೆ ಆಗಮಿಸಿದ ಪೊಲೀಸರು ವೇಲ್​ ತಮ್ಮ ವಶಕ್ಕೆ ಪಡೆದಿದ್ದು, ನಾಳೆ ಸ್ಥಳ ಮಹಜರು ನಡೆಸಲಿದ್ದಾರೆ.
ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ, ಎಷ್ಟು ಹೊತ್ತು ನಡೆಯಲಿದೆ?

ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಸೇರಿ ಹಲವರಿಂದ ಸಾಂತ್ವನ

ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
