ಆನೇಕಲ್:ಆನೇಕಲ್​ನ ಈ ಭೂಪ ಗಾಂಜಾ ನಶೆಯಲ್ಲಿ ಪೊಲೀಸ್​ ಸಿಬ್ಬಂದಿ ಮೇಲೆ ಮಾರಣಾಂತಿಕ ದಾಳಿ ನಡೆಸಿ ಎಸ್ಕೇಪ್​ ಆಗಿದ್ದ. ಈಗ ಪೊಲೀಸರು ಇವನ್ನು ಹುಡುಕಿ ಗುಂಡೇಟು ನೀಡಿದ್ದಾರೆ.
ರಂಗನಾಥ್ ಎನ್ನುವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ವರುಣ್ ಅಲಿಯಾಸ್ ಕೆಂಚ ಎನ್ನುವ ಆರೋಪಿಗೆ ಗುಂಡೇಟು ಬಿದ್ದಿದೆ. ಈತ ಎರಡು ದಿನದ ಹಿಂದೆ ಆನೇಕಲ್ ಪಟ್ಟಣದಲ್ಲಿ ಪೊಲೀಸ್​ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿ ಆಗಿದ್ದ. ಅದಾದ ಮೇಲೆ ಈತ ಮನೆಯೊಂದರಲ್ಲಿ ಅಡಗಿದ್ದ ಮಾಹಿತಿ ಸಿಕ್ಕಿತ್ತು. ಪೊಲೀಸರು ಈತನನ್ನು ಹುಡುಕಿ ಹಿಡಿಯಲು ಹೋಗಿದ್ದಾರೆ. ಆದರೆ ಅಲ್ಲಿಯೂ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿ ಆಗುವ ಲಕ್ಷಣ ಕಾಣಿಸಿದಾಗ ಆತನಿಗೆ ಗುಂಡಿನೇಟು ನೀಡಿದ್ದಾರೆ.
ರಂಗನಾಥ್ ಎನ್ನುವ ಪೊಲೀಸ್​ ಸಿಬ್ಬಂದಿ ಮೇಲೆ ಆನೇಕಲ್ ಪಟ್ಟಣದ ದಿನ್ನೂರಿನ ನೀಲಗಿರಿ ತೋಪಿನಲ್ಲಿ ದಾಲಿ ನಡೆದಿತ್ತು. ಆ ಸಂದರ್ಭ ಗಾಂಜಾ ಮತ್ತಿನಲ್ಲಿದ್ದ ವರುಣ್ ಅಲಿಯಾಸ್ ಕೆಂಚ ಹಾಗೂ ಆತನ ಗ್ಯಾಂಗ್​ ಈ ಕೃತ್ಯ ಮಾಡಿತ್ತು. ಇದಾದ ಮೇಲೆ ವರುಣ್ ಅಲಿಯಾಸ್ ಕೆಂಚ ಎಸ್ಕೇಪ್​ ಆಗಿದ್ದ.
ನಂತರ ವರುಣ್​ಗಾಗಿ ಆನೇಕಲ್ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಇಂದು ಜಿಗಣಿ ಸಮೀಪದ ಕಲ್ಲು ಬಾಳು ಮನೆಯೆಂದರಲ್ಲಿ ಅಡಗಿರುವ ಮಾಹಿತಿ ಬಂದಿತ್ತು. ಪೊಲೀಸರು ಮನೆಯನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿದ್ದರು. ಈ ಸಂದರ್ಭದಲ್ಲೂ ಆನೇಕಲ್ ಇನ್ಸ್ಪೆಕ್ಟರ್, ಚಂದ್ರಪ್ಪ ಮೇಲೆ ಹಲ್ಲೆ ಮಾಡಲು ವರುಣ್ ಮುಂದಾಗಿದ್ದ! ಅಲ್ಲೇ ಇದ್ದ ಪೋಲಿಸ್ ಪೇದೆ ಶಂಕರ್ ಎಂಬುವವರ ಮೇಲೆ ಕೂಡ ಆರೋಪಿ ಹಲ್ಲೆಗೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ವರುಣ್ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.
ವರುಣ್ ಪೊಲೀಸ್​ ಮೇಲೆ ದಾಳಿ ಮಾಡಿದ್ದು ಯಾಕೆ?ಅಂದ ಹಾಗೆ ಈ ವರುಣ್​, ರಂಗನಾಥ್​ ಮೇಲೆ ಯಾಕೆ ದಾಳಿ ಮಾಡಿದ್ದು ಎಂದು ತಿಳಿದರೆ ನಿಜಕ್ಕೂ ಅಚ್ಚರಿ ಆಗುತ್ತೆ. ‘ನಿಮ್ಮ ಬೈಕ್​ಅನ್ನು ಸೈಡಿಗೆ ಹಾಕಿ’ ಎಂದು ಪೋಲೀಸ್ ಸಿಬ್ಬಂದಿ ರಂಗನಾಥ್ ಬುದ್ದಿವಾದ ಹೇಳಿದ್ದರು. ಇಷ್ಟಕ್ಕೇ ಸಿಟ್ಟುಗೊಂಡ ವರುಣ್ ಅಲಿಯಾಸ್​ ಕೆಂಚ, ಪೊಲೀಸ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
