ಬೆಂಗಳೂರು:ರಾಜಧಾನಿಯಲ್ಲಿ ಬಿಸಿಲು ಧಗೆ ಏರಿಕೆಯಾಗಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಬೆಳಗ್ಗೆ 8 ಗಂಟೆಯಿಂದಲೇ ನೆತ್ತಿ ಸುಡುತ್ತಿದೆ. ಜತೆಗೆ, ರಾತ್ರಿ ವೇಳೆ ಸೆಖೆಯಿಂದ ನಿದ್ದೆ ಬಾರದೆ ಜನರು ಗೋಳಾಡುವಂತಾಗಿದೆ. ಉಷ್ಣಾಂಶ ಹೆಚ್ಚಳ, ಗಾಳಿಯಲ್ಲಿ ತೇವಾಂಶ ಕುಂಠಿತ ಹಿನ್ನೆಲೆಯಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ.
1996ರ ಮಾ.29ರಂದು 37.3 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿತ್ತು. ನಗರದಲ್ಲಿ ಇದುವರೆಗೆ ದಾಖಲಾದ ಅತಿ ಉಷ್ಣಾಂಶ ಇದಾಗಿದೆ. 2017ರ ಮಾ.26ರಂದು 37.2, 2018ರ ಮಾ.8ರಂದು 37 ಡಿ.ಸೆ.ವರದಿಯಾಗಿತ್ತು. ನಾಲ್ಕು ವರ್ಷದ ಬಳಿಕ ನಗರದಲ್ಲಿ 2024ರ ಮಾ.31ರಂದು 36.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಮಾರ್ಚ್​ ಮೊದಲ ವಾರ 36ರ ಅಸುಪಾಸಿನಲ್ಲಿ ದಾಖಲಾಗಿತ್ತು. ಅಲ್ಲದೆ, ಒಂದು ದಶಕದಲ್ಲಿ ಐದನೇ ಬಾರಿ 36 ಡಿ.ಸೆ.ತಾಪಮಾನ ಕಂಡುಬಂದಿತು. ಮಾರ್ಚ್​ನಲ್ಲಿ ವಾಡಿಕೆಯಂತೆ 33 ಡಿ.ಸೆ.ದಾಖಲಾಗಬೇಕಿತ್ತು. ಆದರೆ, ವಾಡಿಕೆಗಿಂತ 3.5 ಡಿ.ಸೆ. ಹೆಚ್ಚು ತಾಪಮಾನ ದಾಖಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಅದೇರೀತಿ, ಕನಿಷ್ಠ ತಾಪಮಾನದಲ್ಲಿಯೂ ಅಧಿಕ ಉಷ್ಣಾಂಶ ಕಂಡುಬರುತ್ತಿದೆ.
ಲೊಕಸಭೆಯಲ್ಲಿ ಎನ್‌ಡಿಎಗೆ 500 ಕ್ಷೇತ್ರದಲ್ಲಿ ಗೆಲುವುಮಳೆ ಮೂನ್ಸೂಚನೆ ಇಲ್ಲ:ನಗರದಲ್ಲಿ ಏ.6ರವರೆಗೆ ಮಳೆ ಮೂನ್ಸೂಚನೆ ಇಲ್ಲವೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ಎರಡು ತಿಂಗಳಿಂದ ಹನಿಯೂ ಮಳೆ ಸುರಿದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 4 =
Remember me
