ಬೆಳಗಾವಿ:ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮತ್ತು ಶಾಸಕಾಂಗ ಪಕ್ಷದ ನಾಯಕನಾಗಿ ಆರ್.ಅಶೋಕ್ ಕಾರ್ಯಭಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಶಾಸಕಾಂಗ ಪಕ್ಷದ ಸಭೆ ಮಂಗಳವಾರ (ಡಿ.12) ಸಂಜೆ ಬೆಳಗಾವಿಯಲ್ಲಿ ನಡೆಯಲಿದು ಸ್ಥಾನಗಳ ಭರ್ತಿಗೆ ಸಂಭಾವ್ಯ ಪಟ್ಟಿಯೊಂದಿಗೆ ದೆಹಲಿಗೆ ತೆರಳಿರುವ ಬಿ.ವೈ ವಿಜಯೇಂದ್ರ ಮೂರು ದಿನ ಅಲ್ಲಿಯೇ ಬಿಡಾರಹೂಡಿ ವರಿಷ್ಠರ ಸೂಚನೆಯೊಂದಿಗೆ ವಾಪಸಾಗುವ ಕಾರಣ ಈ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ನಡುವೆ ಅಧಿವೇಶನದ ವೇಳೆ ಅಪಸ್ಯವಗಳು, ಅಪಸ್ವರ, ಅಪನಂಬಿಕೆ, ಸಮನ್ವಯದ ಕೊರತೆ ಎದ್ದು ಕಾಣಿಸಿದ್ದು, ಪಕ್ಷಕ್ಕೆ ಮುಜುಗರ ಉಂಟಾಗಿದೆ. ಅಲ್ಲದೇ ನಗುವವರ ಮುಂದೆ ಎಡವಿಬಿದ್ದಂತ ಅನುಭವ ಅನೇಕ ಶಾಸಕರಿಗಾಗಿದೆ. ಹೊಸ ನಾಯಕತ್ವ ಕಾರ್ಯಕರ್ತರ ಮಟ್ಟದಲ್ಲಿ ಹುರುಪು ತುಂಬಿರುವ ಹೊತ್ತಿನಲ್ಲೇ ನಡೆದಿರುವ ಈ ಬೆಳವಣಿಗೆಗಳನ್ನು ಮೊಟಕುಗೊಳಿಸುವ ವಿಚಾರದಲ್ಲಿ ಶಾಸಕಾಂಗ ಪಕ್ಷದ ಸಭೆ ಕೈಗೊಳ್ಳಲಿರುವ ನಿರ್ಣಯ ಕುತೂಹಲ ಕೆರಳಿಸಿದೆ. ಸದನದಲ್ಲಿ ಗುರುವಾರ ಘಟಿಸಿದ ಪ್ರಸಂಗದ ಬಗ್ಗೆ ಎಲ್ಲ ಶಾಸಕರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ವಾತಾವರಣ ತಿಳಿಗೊಳಿಸುವುದಕ್ಕೆ ಈ ಸಭೆ ವೇದಿಕೆಯೂ ಆಗಲಿದೆ.
ಪ್ರತಿಪಕ್ಷದ ನಾಯಕನ ಆಯ್ಕೆಯಾದರೂ ಸಹ ಪ್ರತಿಪಕ್ಷದ ಮುಖ್ಯ ಸಚೇತಕನ ಆಯ್ಕೆ ಆಗಿಲ್ಲ. ಇದರಿಂದ ಸದನದಲ್ಲಿ ಶಾಸಕರ ನಡುವೆ ಸಂವಹನ ಹಾಗೂ ಸಮನ್ವಯ ತಾಳಮೇಳ ತಪ್ಪಿ ಆಡಳಿತ ಪಕ್ಷದ ಮುಂದೆ ಪೇಚಿಗೆ ಸಿಲುಕಿದ್ದು, ಗುರುವಾರದ ಘಟನೆಯೇ ನಿದರ್ಶನವಾಗಿದೆ, ಹೀಗಾಗಿ ಮಂಗಳವಾರದ ಸಭೆಯಲ್ಲಿ ಮುಖ್ಯಸಚೇತಕನ ಘೋಷಣೆಯೂ ಆಗಲಿದೆ. ಇದರೊಂದಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಮತ್ತು ಉಪ ನಾಯಕ, ಪರಿಷತ್​ನ ಪ್ರತಿಪಕ್ಷದ ಮುಖ್ಯ ಸಚೇತಕ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಹುದ್ದೆಗಳಿಗೆ ನೇಮಕ ಘೋಷಣೆ ಆಗುವ ಸಾಧ್ಯತೆಗಳಿವೆ. ಜತೆಗೆ ಪಕ್ಷದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಶಾಸಕರಿಗೆ ಬುಧವಾರ ಔತಣ ಕೂಟ ಏರ್ಪಡಿಸಿದ್ದಾರೆ.
ಯತ್ನಾಳ್ ನಡೆ ನಿಗೂಢ: ಪಕ್ಷದ ಎರಡು ಪ್ರಮುಖ ಸ್ಥಾನಗಳಿಗೆ ನಡೆದ ನೇಮಕದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಇದನ್ನು ಸರಿಪಡಿಸುವವರೆಗೆ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಾರೆ ಎಂದು ಗುಡುಗಿರುವ ಬಸನಗೌಡ ಪಾಟೀಲ್ ಯತ್ನಾಳ್ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರದ ಸಭೆಯಿಂದ ದೂರ ಉಳಿಯುವರೋ ಅಥವಾ ಅಷ್ಟರಲ್ಲಿ ವರಿಷ್ಠರು ಕೈಗೊಳ್ಳುವ ತೀರ್ವನದ ಬಗ್ಗೆ ಸಮಾಧಾನಗೊಂಡು ಸಭೆಯಲ್ಲಿ ಉಪಸ್ಥಿತಿ ಇರುವರೋ ಎಂಬ ಚರ್ಚೆ ಪಕ್ಷದಲ್ಲಿದೆ. ಕಳೆದ ಮೂರು ದಿನಗಳಿಂದಲೂ ಅವರ ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಬಹಿರಂಗ ಹೇಳಿಕೆ, ಅಭಿಪ್ರಾಯ ನೀಡಿರುವುದು ಸೋಜಿಗ ಎನಿಸಿದೆ.
ನಗರ ಶಾಸಕರ ಸಭೆ: ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತಗೊಂಡಿರುವುದು, ಅನುದಾನ ಕೊರತೆ ಚರ್ಚೆ ನಡೆಸಲು ಬಿಬಿಎಂಪಿ ವ್ಯಾಪ್ತಿ ಶಾಸಕರ ಸಭೆ ಬುಧವಾರ ಕರೆಯಲಾಗಿದೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ 16 ಶಾಸಕರು ಚರ್ಚೆ ನಡೆಸಿ, ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದಾರೆ.
ಅಧಿವೇಶನದಲ್ಲಿ ಮುಂದಿನ ನಡೆ
2. ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ತನಿಖೆ ವಾಪಸ್ ಪಡೆದ ನಿರ್ಧಾರದ ವಿರುದ್ಧ ಗಟ್ಟಿಯಾದ ಹೋರಾಟ.
3. ಸಚಿವ ಜಮೀರ್ ಅಹ್ಮದ್ ಸ್ಪೀಕರ್ ಪೀಠದ ಬಗ್ಗೆ ಆಡಿದ ಮಾತನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು.
4. ಗ್ಯಾರಂಟಿ ಯೋಜನೆಯಲ್ಲಿನ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿ ಹಾಕುವುದು.
5. ಪಂಚಮಸಾಲಿ ಸಮುದಾಯದ ಮೀಸಲು ಬೇಡಿಕೆ ಮುಂದಿಟ್ಟ ಹೋರಾಟಕ್ಕೆ ಸದನದ ಒಳಗೆ ಬೆಂಬಲ ವ್ಯಕ್ತಪಡಿಸುವುದು.
ಸಂಭಾವ್ಯರು
* ವಿಧಾನಸಭೆ ವಿಪಕ್ಷ ಉಪನಾಯಕ: ಅರವಿಂದ ಬೆಲ್ಲದ/ಸುನಿಲ್ ಕುಮಾರ್
* ವಿಪಕ್ಷ ಮುಖ್ಯ ಸಚೇತಕ: ದೊಡ್ಡನ ಗೌಡ/ ಅಭಯ್ ಪಾಟೀಲ್/ಪ್ರಭು ಚವ್ಹಾಣ್
* ವಿಧಾನ ಪರಿಷತ್ ಪ್ರತಿಪಕ್ಷ ನಾಯಕ: ರಘುನಾಥ ರಾವ್ ಮಲ್ಕಾಪುರೆ/ಕೋಟ ಶ್ರೀನಿವಾಸ ಪೂಜಾರಿ/ಎನ್.ರವಿಕುಮಾರ್
* ವಿಧಾನ ಪರಿಷತ್ ವಿರೋಧ ಪಕ್ಷದ ಉಪನಾಯಕ: ಛಲವಾದಿ ನಾರಾಯಣಸ್ವಾಮಿ/ತೇಜಸ್ವಿನಿ ಗೌಡ/
ವೈ.ಎನಾರಾಯಣಸ್ವಾಮಿ
* ಪರಿಷತ್ ವಿಪಕ್ಷ ಮುಖ್ಯ ಸಚೇತಕ: ಛಲವಾದಿ ನಾರಾಯಣ ಸ್ವಾಮಿ/ ತುಳಸಿಮುನಿರಾಜುಗೌಡ
ಬಿಜೆಪಿ ನಾಯಕರಲ್ಲಿ ಅಸಮಾಧಾನವಿಲ್ಲಬೆಳಗಾವಿ: ಸಮನ್ವಯ ಕೊರತೆಯಿಂದ ಧರಣಿ, ಸಭಾತ್ಯಾಗದ ವಿಚಾರದಲ್ಲಿ ಗುರುವಾರ ತುಸು ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒಪ್ಪಿಕೊಂಡರು. ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರವಾಗಿ ಯಾರಲ್ಲೂ ಅಸಮಾಧಾನವಿಲ್ಲ. ಎಲ್ಲ ನಾಯಕರ ಅಭಿಪ್ರಾಯ ಪಡೆದೇ ತೀರ್ಮಾನ ಮಾಡಿದ್ದೆವು. ಬೆಳಗಾವಿ ಪೊಲೀಸರ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಯತ್ನಾಳ್ ಅವರು ಚರ್ಚೆ ಮಾಡಿದ್ದರು. ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ ಎಂದಿದ್ದರು. ನಾನು, ಯತ್ನಾಳ್, ವಿಜಯೇಂದ್ರ, ಅಶ್ವತ್ಥನಾರಾಯಣ ಸೇರಿ ತೀರ್ಮಾನ ಮಾಡಿದ್ದೆವು. ಆದರೆ ಇದು ಹಿಂದಿನ ಸಾಲಿನಲ್ಲಿ ಇದ್ದವರಿಗೆ ತಲುಪಿಲ್ಲ. ಯಾರೋ ಏನೋ ಹೇಳಿದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಕರೆಸಿ ಮಾತನಾಡುತ್ತೇನೆ ಎಂದು ಅಶೋಕ್ ಹೇಳಿದರು.
ವಿವಿಧ ವಿಷಯ ಚರ್ಚೆ
ಈಗಾಗಲೆ ಬರದ ಬಗ್ಗೆ ಚರ್ಚೆ ಮಾಡಿದ್ದೇವೆ. ಭ್ರೂಣ ಹತ್ಯೆ, ಡಿಕೆಶಿ ಸಿಬಿಐ ತನಿಖೆ ವಾಪಸ್ ಪ್ರಕರಣ, ಜಮೀರ್ ಅಹ್ಮದ್ ಹೇಳಿಕೆ, ಉತ್ತರ ಕರ್ನಾಟಕದ ಬಗ್ಗೆ ಸೋಮವಾರ ರ್ಚಚಿಸುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.
ವಿಪಕ್ಷ ನಾಯಕರು ಹೇಳಿದಂತೆ ಶಾಸಕರು ಕೇಳಬೇಕಾಗುತ್ತದೆ. ಸಭಾತ್ಯಾಗ, ಧರಣಿ ವಿಚಾರದಲ್ಲಿ ಅವರೇ ತೀರ್ಮಾನ ಮಾಡುತ್ತಾರೆ. ಗುರುವಾರ ಸಭಾತ್ಯಾಗ ಮಾಡುವಂತೆ ಹೇಳಿದ್ದರಿಂದ ಅದರಂತೆ ನಡೆದುಕೊಂಡಿದ್ದೇವೆ. ಹೊಂದಾಣಿಕೆ ರಾಜಕೀಯದ ಬಗ್ಗೆ ಹಿಂದೆಯೇ ಹೇಳಿದ್ದೇನೆ, ಪುನರುಚ್ಛಾರ ಅಗತ್ಯವಿಲ್ಲ.
| ಬಸನಗೌಡ ಪಾಟೀಲ ಯತ್ನಾಳ್ ಶಾಸಕ
ABVP ಕೇವಲ ಸಂಘಟನೆಯಲ್ಲ, ಅದೊಂದು ಆಂದೋಲನ: ರಾಷ್ಟ್ರೀಯ ಸಮ್ಮೇಳನದಲ್ಲಿ ಅಮಿತ್ ಷಾ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
