ಬೆಂಗಳೂರು:ಸ್ಯಾಂಡಲ್​ವುಡ್​ ನಟ ಉಪೇಂದ್ರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್​​ಐಆರ್​ ಅನ್ನು ರದ್ದುಗೊಳಿಸುವಂತೆ ಕೋರಿ ಸೋಮವಾರ ಹೈಕೋರ್ಟ್​ ಮೆಟ್ಟಿಲೇರಿದ್ದರು. ಉಪೇಂದ್ರ ಪರ ವಕೀಲರು ಇಂದೇ ಈ ಕೇಸ್​​ನ ವಿಚಾರಣೆ ನಡೆಸುವಂತೆ ಮಾಡಿದ ಮನವಿಯನ್ನು ಇದೀಗ ನ್ಯಾಯಾಲಯ ನಿರಾಕರಿಸಿದೆ.
ಇದನ್ನೂ ಓದಿ:ವಾರಕ್ಕೆ 2 ಬಾರಿ ಮನೆಗೆ ಬರ್ತಿದ್ದ ಗಂಡನಿಗೆ ಪತ್ನಿಯ ಮೇಲೆ ಶುರುವಾದ ಸಂಶಯ ಭೀಕರ ಹತ್ಯೆಯಲ್ಲಿ ಅಂತ್ಯ
ನ್ಯಾಯಾಲಯಕ್ಕೆ ಇಂದೇ (ಆಗಸ್ಟ್​ 16) ವಿಚಾರಣೆ ನಡೆಸುವಂತೆ ಉಪೇಂದ್ರ ಪರ ವಕೀಲರು ಮನವಿ ಮಾಡಿದರು. ಆದ್ರೆ, ಈ ಮನವಿಯನ್ನು ಆಲಿಸಿದ ಕೋರ್ಟ್,​ ವಿಚಾರಣೆ ನಡೆಸಲು ನಿರಾಕರಿಸಿದೆ. ಇದರ ಬದಲಿಗೆ ಆಗಸ್ಟ್​ 17 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ನ್ಯಾ. ಹೇಮಂತ್, ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಇದೀಗ ಈ ವಿಚಾರಣೆಯನ್ನು ಮುಂದೂಡಿದೆ.
ಉಪೇಂದ್ರ ವಿರುದ್ಧ ಎಫ್​ಐಆರ್​ ದಾಖಲಾಗಲು ಕಾರಣವೇನು?:ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಿ.ಕೆ. ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ಎಫ್ಐಆರ್​ ದಾಖಲಿಸಲಾಗಿತ್ತು. ತದನಂತರ ಹಲಸೂರು ಪೊಲೀಸ್​ ಸ್ಟೇಷನ್​ನಲ್ಲಿ ಕೂಡ ಮತ್ತೊಂದು ದೂರು ದಾಖಲಾಗಿತ್ತು.
ಇದನ್ನೂ ಓದಿ:ಖಾತೆಯಲ್ಲಿ ಬ್ಯಾಲೆನ್ಸ್​ ಇಲ್ಲದಿದ್ದರೂ ಹಣ ವಿತ್​ಡ್ರಾ! ಎಟಿಎಂ ಮುಂದೆ ಜಮಾಯಿಸಿದ ಗ್ರಾಹಕರು
ಉಪೇಂದ್ರ ವಿರುದ್ಧ ಎಫ್​ಐಆರ್​ ದಾಖಲಿಸುವುದರ ಜತೆಗೆ ವ್ಯಾಪಕ ವಿರೋಧ ಕೂಡ ವ್ಯಕಪಡಿಸಲಾಗಿತ್ತು. ಈ ಬೆನ್ನಲ್ಲೇ ನ್ಯಾಯಾಲಯದ ಮೊರೆ ಹೋದ ನಟ, ಎಫ್​ಐಆರ್​​ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಉಪೇಂದ್ರ ಪರ ವಕೀಲರು ಇಂದು ಕೇಸ್​ನ ವಿಚಾರಣೆ ನಡೆಸುವಂತೆ ಮಾಡಿದ ಮನವಿಗೆ, ಇದೀಗ ನ್ಯಾಯಾಲಯ ನಿರಾಕರಿಸುವ ಮುಖೇನ ವಿಚಾರಣೆಯನ್ನು ಮುಂದೂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fifteen =
Remember me
