ಬೆಂಗಳೂರು:ನಿನ್ನೆಯಷ್ಟೇ ಎಂಟು ಸಾವಿರದ ಗಡಿಯಲ್ಲಿದ್ದ ಹೊಸ ಕರೊನಾ ಸೋಂಕಿತರ ಸಂಖ್ಯೆ ಇಂದು 9 ಸಾವಿರದ ಗಡಿಗೆ ತಲುಪಿದೆ. ಜತೆಗೆ ಸಾವಿನ ಸಂಖ್ಯೆಯೂ ಶತಕದಾಚೆಗೆ ಹೋಗಿದೆ.
ಕಳೆದ 24 ತಾಸುಗಳಲ್ಲಿ ರಾಜ್ಯದಲ್ಲಿ 8,818 ಕೇಸ್​​ಗಳು ವರದಿಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,19,926ಕ್ಕೆ ಏರಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 82,958 ಆಗಿದೆ. ಇಂದು 114 ಸಾವಿನ ಪ್ರಕರಣದಿಂದಾಗಿ ಮೃತಪಟ್ಟವರ ಒಟ್ಟಾರೆ ಸಂಖ್ಯೆ 3,821ಕ್ಕೆ ಏರಿದೆ.
ಇದನ್ನೂ ಓದಿ;ಕಾರ್ಖಾನೆಯಲ್ಲಿ ಉತ್ಪಾದನೆಯಾಯ್ತು ರಷ್ಯಾದ ಕೋವಿಡ್​ ಲಸಿಕೆ ಸ್ಪುಟ್ನಿಕ್​-ವಿ; ವೈದ್ಯರು, ಶಿಕ್ಷಕರಿಗೆ ಮೊದಲ ಚುಚ್ಚುಮದ್ದು..!
ಸಮಾಧಾನದ ಸಂಗತಿ ಎಂದರೆ ನಿನ್ನೆಗೆ ಹೋಲಿಸಿದಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ನಿನ್ನೆ 5,257 ಜನರಿಗೆ ಗುಣವಾಗಿದ್ದರೆ, ಇಂದು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 6,629. ಚೇತರಿಕೆ ಪ್ರಮಾಣ ಕೊಂಚ ಏರಿಕೆ ಕಂಡು ಶೇ.60.53 ಆಗಿದೆ. ಆದರೆ, ಇದು ರಾಷ್ಟ್ರೀಯ ಸರಾಸರಿ ಶೇ.71ಕ್ಕಿಂತ ಕಡಿಮೆ ಇದೆ.
ಬೆಂಗಳೂರಿನಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, 3,495ಕ್ಕೆ ಏರಿದೆ. ನಿನ್ನೆ ಈ ಸಂಖ್ಯೆ 2,452 ಆಗಿತ್ತು. ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 87,680ಕ್ಕೆ ತಲುಪಿದೆ. ಆದರೆ, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,034 ಜನರು ಚೇತರಿಕೆ ಕಂಡಿದ್ದಾರೆ. ನಿನ್ನೆ ಕೇವಲ 463 ಜನರಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.
ಇದನ್ನೂ ಓದಿ;ಆಧಾರ್​ ಮಾದರಿಯಲ್ಲೇ ಆರೋಗ್ಯ ಗುರುತಿನ ಸಂಖ್ಯೆ; ರಾಷ್ಟ್ರೀಯ ಡಿಜಿಟಲ್​ ಹೆಲ್ತ್​ ಮಿಷನ್​ಗೆ ಚಾಲನೆ
ರಾಜಧಾನಿಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 34,860ಕ್ಕೆ ಇಳಿದಿದೆ. ಒಟ್ಟು 35 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,395ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಶೇ.58.65 ಆಗಿದ್ದರೆ, ಸಾವಿನ ಪ್ರತಿಶತ ಶೇ.1.59 ಆಗಿದೆ.
ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eight =
Remember me
