ಧಾರವಾಡ:ಹಿಜಾಬ್ ವಿಷಯ ಈಗ ಅಪ್ರಸ್ತುತ ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ್ದು ಆಗಿದೆ. ಕೋರ್ಟ್​ ತೀರ್ಪು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಇದರಲ್ಲಿ ಸರ್ಕಾರ, ಪೊಲೀಸರು, ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋರ್ಟ್ ತೀರ್ಮಾನ ಆಗಿದೆ. ಬೇಕಿದ್ದರೆ ಸುಪ್ರಿಂಕೋರ್ಟ್‌ನಲ್ಲಿ ಹೋರಾಡಬಹುದು ಎಂದು ಹೇಳಿದರು.
ಈಗಾಗಲೇ ಹೈಕೋರ್ಟ್​ ಆದೇಶ ನೀಡಿದೆ. ಅದನ್ನು ಪಾಲನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿರುವ ಅವರು, ದೇಶದ ಸಂವಿಧಾನಕ್ಕೆ ಬದ್ಧತೆ ಇಲ್ಲವಾ ಎಂದಿದ್ದಾರೆ.
ಈ ರೀತಿಯಲ್ಲಿ ಕಾನೂನು, ಕೋರ್ಟ್, ಸಂವಿಧಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ಹೀಗೆ ನಡೆದುಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದೆಲ್ಲ ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದರು.
ಇದೇ ವೇಳೆ ಡಿಕೆ ಶಿವಕುಮಾರ್​ ವಿರುದ್ ಇಡಿ ಚಾರ್ಜ್​ಶೀಟ್​ ಕುರಿತು ಪ್ರತಿಕ್ರಿಯಿಸಿದ ಅವರು, ತನಿಖೆಗೆ ನೊಟೀಸ್​ ಕೊಟ್ಟಿರಬಹುದು. ಇದರಲ್ಲಿ ಅಂತಹ ವಿಶೇಷತೆ ಇದೆ ಅನಿಸುವುದಿಲ್ಲ. ಎಫ್ಐಆರ್ ಆದ ಮೇಲೆ ತನಿಖೆ ನಡೆಯುತ್ತಿತ್ತು, ಹೀಗಾಗಿ ನೊಟೀಸ್​ ನೀಡಿರಬಹುದು ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ರಾಮಾಯಣದ ಸ್ಥಳಗಳಿಗೆ ನೀವೊಮ್ಮೆ ಸುತ್ತಿಬನ್ನಿ, 18 ದಿನಗಳಲ್ಲಿ ಎಂಟು ಸಾವಿರ ಕಿ.ಮೀ ಸಂಚರಿಸಲಿದೆ ಈ ರೈಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + thirteen =
Remember me
