ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಹಿಮವದ್​ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಕಾಡಾನೆಯೊಂದು ಬರುತ್ತಿದೆ.
ಹಿಮವದ್​ ಗೋಪಾಲಸ್ವಾಮಿ ಬೆಟ್ಟದ ದೇಗುಲದ ಬಳಿಯೇ ಸುತ್ತಾಡುತ್ತಿದ್ದ ಕಾಡಾನೆಗೆ ದೇವಸ್ಥಾನದ ಸಿಬ್ಬಂದಿ ಪ್ರಸಾದ ನೀಡುತ್ತಿದ್ದರು. ಪ್ರಸಾದದ ಆಸೆಗೆ ಮೂರು ವರ್ಷದ ಬಳಿಕ ಮತ್ತೆ ಗೋಪಾಲಸ್ವಾಮಿ ದರ್ಶನಕ್ಕೆ ಬಂದ ಗಜರಾಜನನ ಫೋಟೋಗಳು ವೈರಲ್​ ಆಗಿವೆ.ಇದನ್ನೂ ಓದಿರಿಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ
ಬೆಟ್ಟಕ್ಕೆ ಬುಧವಾರ ಭೇಟಿ ನೀಡಿದ್ದ ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರು ಆ ಸಲಗನೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಅಲ್ಲದೆ, ಆನೆಗೆ ಪ್ರಸಾದ ನೀಡಿದ ಫೋಟೋಗಳು ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಐಎಎಸ್ ಅಧಿಕಾರಿ ಬಿ.ಬಿ.ಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆಯೇ ದೇಗುಲ ಆವರಣಕ್ಕೆ ಕಾಡಾನೆ ಬಂದಿದೆ. ಇದೇ ವೇಳೆ ಆ ಕಾಡಾನೆಗೆ ದೇವಸ್ಥಾನದ ಪ್ರಸಾದ ಸಿಹಿಪೊಂಗಲ್, ಬೆಲ್ಲವನ್ನು ಕಾವೇರಿ ತಿನ್ನಿಸಿದರು.
ಕಾವೇರಿ ಅವರು ವನ್ಯಜೀವಿ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಸಾದದ ಆಮಿಷಕ್ಕೆ ಒಳಗಾಗಿ ಕಾಡಾನೆ ಮತ್ತೆ ಮತ್ತೆ ಬರಬಹುದು. ಅರಣ್ಯದಂಚಿನ ಗ್ರಾಮಗಳಿಗೆ ದಾಳಿ ಮಾಡಬಹುದು. ಮಾನವ- ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು. ಐಎಎಸ್ ಅಧಿಕಾರಿ ವಿವೇಕಯುತವಾಗಿ ವರ್ತಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರವಾದಿಗಳಿಂದ ಟೀಕೆ ವ್ಯಕ್ತವಾಗುತ್ತಿದೆ.
ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

‘ನಿಮ್ಮ ಪೊಲಿಟಿಕಲ್ ಸ್ಟ್ರೋಕ್​ಗೆ ಟ್ರೀಟ್​ಮೆಂಟ್ ಕೊಟ್ಟಿದ್ದೇ ಬಿಎಸ್​ವೈ…’ ವಿಶ್ವನಾಥ್​ಗೆ ಹಿಗ್ಗಾಮುಗ್ಗಾ ತರಾಟೆ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
