ಉಡುಪಿ:ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ಚಿತ್ರೀಕರಣ ವಿವಾದಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಹಿಂದೂ ಜಾಗರಣ ವೇದಿಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಮೇಲೆ ಹೊಸ ಆರೋಪ ಮಾಡಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ, ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿತ್ತು. ಅದರೊಂದಿಗೆ ಉಡುಪಿಗೆ ರಾಷ್ಟ್ರೀಯ ಮಹಿಳಾ ಆಯೋಗವೂ ಎಂಟ್ರಿ ಕೊಟ್ಟಿದ್ದು, ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಂಡಿದೆ.
ಇದನ್ನೂ ಓದಿ:ಉಡುಪಿಯ ಟಾಯ್ಲೆಟ್​ ಪ್ರಕರಣದ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ ಹೇಳಿದ್ದೇನು? ಎತ್ತ ಸಾಗುತ್ತಿದೆ ವಿವಾದ?
ನಿನ್ನೆ (ಜು.27) ಖುಷ್ಬೂ ಸುಂದರ್ ಹೇಳಿಕೆ ನೀಡಿದ್ದು ಆ ಸಂದರ್ಭದಲ್ಲಿ “ನಮ್ಮ ತನಿಖೆ ಜಾರಿಯಲ್ಲಿದೆ. ಇನ್ನು ಕೂಡ ತನಿಖೆ ಪೂರ್ಣಗೊಂಡಿಲ್ಲ. ಕಾಲೇಜಿಗೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕು. ವಿದ್ಯಾರ್ಥಿನಿಯರ ಜತೆಗೂ ನಾನು ಮಾತನಾಡಬೇಕು. ಇನ್ನೂ ಸಾಕಷ್ಟು ಮಾಹಿತಿ ಸಂಗ್ರಹ ಆಗುವುದು ಬಾಕಿ ಇದೆ. ಪೊಲೀಸರ ಒಂದು ಭೇಟಿಯಿಂದ ಎಲ್ಲಾ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರು ತಕ್ಷಣವೇ ಇದರ ಫಲಿತಾಂಶ ಸಿಗಬೇಕು ಎಂದು ಬಯಸುತ್ತಾರೆ.
ಇದನ್ನೂ ಓದಿ:ಉಡುಪಿ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಲು ಆಗ್ರಹ; ಎಬಿವಿಪಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ
ಸರಕಾರ ಮತ್ತು ಕಾನೂನಿಗೆ ಅನುಗುಣವಾಗಿ ನಾವು ಕೆಲಸ ಮಾಡಬೇಕಿದೆ. ಕಾನೂನು ಮತ್ತು ಸುವ್ಯವಸ್ಥೆ ನಮಗೆ ಮುಖ್ಯ. ಅದಕ್ಕೆ ಸರಿಯಾಗಿ ನಮ್ಮ ತನಿಖೆ ಇರುತ್ತೆ. ಹುಡುಗಿಯ ಸೇಫ್ಟಿಯೂ ನಮಗೆ ಮುಖ್ಯ. ಈ ತರದ ಪ್ರಕರಣಗಳು ಹುಡುಗಿಯರನ್ನು ಖಿನ್ನಗೊಳಿಸುತ್ತದೆ. ಹುಡುಗಿ ನಾರ್ಮಲ್ ಆಗಿರಬೇಕು. ಅವರು ಮಾನಸಿಕ ಒತ್ತಡಕ್ಕೆ ಬರಬಾರದು.
ಪ್ರಕರಣದ ಕುರಿತಾಗಿ ಎಲ್ಲಿಯಾದರೂ ಸಾಕ್ಷಿ ಇದೆಯಾ? ಸಾಕ್ಷಿ ಇಲ್ಲದೆ ಪ್ರಕರಣ ದಾಖಲೆ ಮಾಡುವುದು ಹೇಗೆ.? ವಿಡಿಯೋ ಯಾರಾದ್ರೂ ನೋಡಿದರಾ. ಸಂತ್ರಸ್ತ ಯುವತಿ ಕಾಲೇಜಿಗೆ ಲಿಖಿತವಾಗಿ “ಇಲ್ಲೇ ಈ ವಿಚಾರವನ್ನು ಮುಗಿಸಿ ಬಿಡಿ” ಎಂದು ಕೊಟ್ಟಿದ್ದಾಳೆ. ನನಗೆ ದೂರು ಕೊಡುವುದೇ ಇಷ್ಟವಿಲ್ಲ ಎಂದು ಹುಡುಗಿ ಹೇಳಿರುವುದರಿಂದ ಈ ಪ್ರಕರಣ ಇಲ್ಲಿಗೆ ಮುಗಿಸಬೇಕು ಎಂಬುದು ಆಕೆಯ ಬಯಕೆ.
ಇದನ್ನೂ ಓದಿ:ಉಡುಪಿಯಲ್ಲಿ ಹಿಂದೂ ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿ ನಗ್ನ ವಿಡಿಯೋ ಚಿತ್ರಿಕರಣ, ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷದ್ ಆಗ್ರಹ
ನನ್ನ ಬಳಿ ಎಲ್ಲ ವಿವರ ಇದೆ ನಾನು ಯಾವುದೇ ವರದಿಯನ್ನು ನಿರಾಕರಿಸಲು ಬಂದಿಲ್ಲ. ಅದಕ್ಕಾಗಿ ಎರಡು ಗಂಟೆ ಪೊಲೀಸರ ಜತೆ ಸಮಾಲೋಚನೆ ನಡೆಸಿದ್ದೇನೆ. ದಯವಿಟ್ಟು ಕಾನೂನನ್ನು ಅರ್ಥ ಮಾಡಿಕೊಳ್ಳಿ, ಜನರ ಪರ ಮಾತನಾಡಿದರೆ ಸಾಲೋದಿಲ್ಲ. ಸಂವಿಧಾನಾತ್ಮಕ ಕಾನೂನುಗಳಿವೆ ಅದಕ್ಕೆ ಅನುಗುಣವಾಗಿ ನಾವು ಕೆಲಸ ಮಾಡಬೇಕು. ಪೊಲೀಸರು ಅವರ ಕರ್ತವ್ಯ ಮಾಡುತ್ತಿದ್ದಾರೆ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಅನಗತ್ಯವಾದ ಫೇಕ್ ಸುದ್ದಿಗಳು, ಫೇಕ್ ವಾಟ್ಸಪ್​ಗಳು, ಫೇಕ್ ವಿಡಿಯೋಗಳು ಇವೆ” ಎಂದು ಹೇಳಿದ್ದರು.
ಇದೀಗ ಹಿಂದೂ ಜಾಗರಣ ವೇದಿಕೆ ಖುಷ್ಬೂ ಸುಂದರ್ ನೇತೃತ್ವದಲ್ಲಿ ಸರಿಯಾದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಆರೋಪಿಸಿದೆ. ಈ ಕುರಿತಾಗಿ ಹಿಂದೂ ಜಾಗರಣಾ ವೇದಿಕೆ ಸದಸ್ಯ ಪ್ರವೀಣ್ ಯಕ್ಷೀಮಠ “ಖುಸ್ಬೂ ನೇತೃತ್ವದಲ್ಲಿ ಸರಿಯಾದ ತನಿಖೆ ನಡೆಯಲು ಸಾಧ್ಯವಿಲ್ಲ. ಅವರು ಚಿತ್ರ ನಟಿ. ಬರೆದುಕೊಟ್ಟ ಸ್ಕ್ರಿಪ್ಟ್ ಓದುತ್ತಾರೆ ಅಷ್ಟೇ. ಇಲ್ಲಿ ಅವರಿಗೆ ಸ್ಕ್ರಿಪ್ಟ್ ಬರೆದುಕೊಟ್ಟವರು ಯಾರು? ಎಸ್ಪಿಯವರು ಬರೆದುಕೊಟ್ಟಿದ್ದಾರಾ? ಈ ರೀತಿಯ ಘಟನೆ ನಡೆದಿಲ್ಲ ಅಂತ ಮಾಧ್ಯಮಗಳಿಗೆ ಹೇಳಿಕೆ ಕೊಡಲು ಅಧಿಕಾರ ಇಲ್ಲ. ಖುಷ್ಬೂ ನೇತೃತ್ವದಲ್ಲಿ ನಡೆಯುವ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ:ಉಡುಪಿ ಪ್ರಕರಣ: ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದ ತೇಜಸ್ವಿನಿ ಗೌಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
