ಬೆಂಗಳೂರು:ಹಿಂದೆ ದೇಶ ಮತ್ತು ಆಡಳಿತಗಳ ವಿರುದ್ಧ ನಕ್ಸಲರು ಬಂಡಾಯವೆದ್ದು ಹೋರಾಟ ನಡೆಸುತ್ತಿದ್ದರು. ಆಗ ನಕ್ಸಲರನ್ನು ಹಿಡಿದು ಅವರನ್ನು ಬಂಧಿಸುವುದು ಸರಕಾರಕ್ಕೆ ಸವಾಲಾಗಿತ್ತು. ಆದರೆ ಈಗ ಅಂತಹ ಶಸ್ತ್ರಾಸ್ತ್ರಧಾರಿ ನಕ್ಸಲರಿಗಿಂತ ನಗರ ನಕ್ಸಲರ ಹಾವಳಿ ಹೆಚ್ಚಾಗಿದೆ. ಒಂದು ಸಮುದಾಯ, ವ್ಯವಸ್ಥೆಯನ್ನು ಗುರಿಯಾಗಿಸಿ ವೈಚಾರಿಕ ಸ್ತರದಲ್ಲಿ ನಿರಂತರ ಟೀಕೆ ಟಿಪ್ಪಣಿಗಳನ್ನು ಮಾಡಿ ಆ ಸಮುದಾಯದ ಬಗ್ಗೆ ಸಮಾಜದಲ್ಲಿ ವಿಷಬೀಜ ಬಿತ್ತುವುದೇ ಈ ನಗರ ನಕ್ಸಲರ ಷಡ್ಯಂತ್ರ ಎಂದು ಹಿಂದು ಜನಜಾಗೃತಿ ಸಮಿತಿ (ಹಿಂಜಸ) ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದ ಏಳ್ಗೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇಂತಹ ನಗರ ನಕ್ಸಲರ ಬೆಳವಣಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ನಗರ ನಕ್ಸಲರಿಂದಾಗಿಯೇ ದೇಶದಲ್ಲಿ ಅರಾಜಕತೆ, ಗಲಭೆಯಂತಹ ಅದೆಷ್ಟೋ ಘಟನೆಗಳು ನಡೆಯುತ್ತಿವೆ. ಈ ನಕ್ಸಲ್ ವಾದವನ್ನು ಅಪಾಯ ಮತ್ತು ಇದಕ್ಕೆ ಸೂಕ್ತ ಉಪಾಯವೇನೆಂಬುದರ ಕುರಿತು ಹಿಂಜಸ ವಿಚಾರ ಮಂಥನ ಏರ್ಪಡಿಸಿದೆ ಎಂದು ಹಿಂಜಸ ರಾಜ್ಯ ವಕ್ತಾರ ಮೋಹನ್‌ಗೌಡ ತಿಳಿಸಿದ್ದಾರೆ.
ಬುಧವಾರ ಸಂಜೆ 6ಕ್ಕೆ ವಿವಿಪುರಂನ ವಾಸವಿ ದೇವಸ್ಥಾನ ರಸ್ತೆಯಲ್ಲಿರುವ ಮಾನಂದಿ ನಂಜುಂಡಶೆಟ್ಟಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚಿಂತಕರಾದ ಎಸ್. ಆರ್.ಲೀಲಾ ಮತ್ತು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
