ಬೆಂಗಳೂರು:ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತಿಯಿಂದ ಜೀವನಾಂಶ ಪಡೆಯುತ್ತಿರುವ ಪತ್ನಿ ಹಿಂದು ವಿವಾಹ ಕಾಯ್ದೆಯಡಿಯೂ ಜೀವನಾಂಶ ಪಡೆಯಬಹುದು ಎಂದು ಆದೇಶಿಸಿರುವ ಹೈಕೋರ್ಟ್, ಪ್ರತ್ಯೇಕ ಕಾಯ್ದೆಗಳ ಅಡಿ ನೀಡಲಾಗುವ ಮೊತ್ತ ಒಂದನ್ನೊಂದು ಅತಿಕ್ರಮಿಸುವಂತಿಬಾರದು. ಜೀವನಾಂಶದ ಪ್ರಮಾಣವನ್ನು ನ್ಯಾಯಾಲಯಗಳು ಹೊಂದಾಣಿಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
ಪತ್ನಿಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಮಾಸಿಕ 20 ಸಾವಿರ ರೂ. ಜೀವನಾಂಶ ಪಾವತಿಸುತ್ತಿದ್ದರೂ, ಹಿಂದು ವಿವಾಹ ಕಾಯ್ದೆಯಡಿಯಲ್ಲೂ ಜೀವನಾಂಶ ನೀಡಲು ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ನಿರ್ಬಂಧವಿಲ್ಲ:ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೀವನಾಂಶ ಪಡೆದರೂ ಅದಕ್ಕೆ ಹೆಚ್ಚುವರಿಯಾಗಿ ಹಿಂದು ವಿವಾಹ ಕಾಯ್ದೆ ಅಥವಾ ಹಿಂದು ದತ್ತು ಸ್ವಿಕಾರ ಕಾಯ್ದೆ ಅಥವಾ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 125ರ (ಜೀವನ ನಿರ್ವಹಿಸಿಕೊಳ್ಳಲು ಅಸಹಾಯಕರಾದ ಪತ್ನಿ, ಮಕ್ಕಳು ಮತ್ತು ಪಾಲಕರಿಗೆ ಪರಿಹಾರ) ಅಡಿಯಲ್ಲೂ ಹೆಚ್ಚುವರಿಯಾಗಿ ಜೀವನಾಂಶ ಪಡೆಯಬಹುದಾಗಿದ್ದು, ಇದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ‘ರಜನೇಶ್ ಮತ್ತು ನೇಹಾ’ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಬೇರೆ ಬೇರೆ ಕಾಯ್ದೆಯಡಿ ನೀಡಲಾಗುವ ಜೀವನಾಂಶದ ಮೊತ್ತ ಒಂದನ್ನೊಂದು ಅತಿಕ್ರಮಿಸಬಾರದು. ಆದ್ದರಿಂದ, ಜೀವನಾಂಶ ಕೋರಿದ ಅರ್ಜಿಗಳನ್ನು ನಿರ್ಧರಿಸುವಾಗ ಸಿವಿಲ್ ಕೋರ್ಟ್‌ಗಳು ಅಥವಾ ಕೌಟುಂಬಿಕ ನ್ಯಾಯಾಲಯಗಳು ಈ ಮೊದಲೇ ನೀಡಿರುವ ಮೊತ್ತವನ್ನು ಗಣನೆಗೆ ತೆಗೆದುಕೊಂಡು, ಜೀವನಾಂಶದ ಪ್ರಮಾಣವನ್ನು ಹೊಂದಾಣಿಕೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ ಎಂದು ತಿಳಿಸಿ, ಪತಿಯ ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು?:2018ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದ ಅರ್ಜಿದಾರ ಮತ್ತವರ ಪತ್ನಿಯ ನಡುವೆ ಎರಡೇ ವರ್ಷಕ್ಕೆ ಬಿರುಕು ಮೂಡಿತ್ತು. ಇದರಿಂದ, 2020ರ ಡಿಸೆಂಬರ್‌ನಲ್ಲಿ ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಮೂಡಬಿದಿರೆ ಸಿವಿಲ್ ಮತ್ತು ಜೆಎಂಎಫ್​ಸಿಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಪತ್ನಿ, ಜೀವನಾಂಶ ನೀಡಲು ಪತಿಗೆ ನಿರ್ದೇಶಿಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಪತ್ನಿಗೆ ಮಾಸಿಕ 20 ಸಾವಿರ ರೂ. ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ದಕ್ಷಿಣ ಕನ್ನಡದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಈ ಮಧ್ಯೆ, ಪತಿಯ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು.
ಪ್ರಕರಣ ಬಾಕಿಯಿರುವಾಗಲೇ ಮದುವೆ ಅನೂರ್ಜಿತಗೊಳಿಸುವಂತೆ ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಹಾಜರಾಗಿದ್ದ ಪತ್ನಿ, ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಪತಿಯಿಂದ ಶಾಶ್ವತ ಜೀವನಾಂಶ ಕೊಡಿಸಲು ಕೋರಿದ್ದರು. ಆ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕೊಡುತ್ತಿರುವ ಮಾಸಿಕ 20 ಸಾವಿರ ರೂ. ಸೇರಿದಂತೆ ಒಟ್ಟು 30 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ನಟ ಅನಿರುದ್ಧ್​ಗೆ ಮತ್ತೊಮ್ಮೆ ಶಾಕ್​! ಎಸ್​.ನಾರಾಯಣ್​ರ ಮುಂದಿನ ನಡೆ ಏನು? ಇಂದು ಮಧ್ಯಾಹ್ನವೇ ನಿರ್ಧಾರ ಆಗುತ್ತಾ ಭವಿಷ್ಯ?

ಪಿಯು ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆ: ಎಸ್​ಎಸ್​ಸಿಯಿಂದ 4,500 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
