ಬೆಂಗಳೂರು:ಹಿಂದು ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವ ಮಹಾಜಾಲ ಕೋಲಾರ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ತಬ್ಲಿಘಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಗುಜರಾತ್​ನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದ ಇವರು ಕರೊನಾ ಲಾಕ್​ಡೌನ್​ನಿಂದಾಗಿ ಅಲ್ಲೇ ಇದ್ದರು. ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಸೂರತ್‌ನಿಂದ ಮೇ 3ರಂದು ಕೋಲಾರ ಜಿಲ್ಲೆಗೆ ಬಂದ 44 ಜನರ ತಂಡವನ್ನು ಜಿಲ್ಲಾಡಳಿತ ಆರೋಗ್ಯ ತಪಾಸಣೆ ನಡೆಸಿ ಅವರ ಪೂರ್ವಾಪರ ಪರಿಶೀಲಿಸುವಾಗ ಮತಾಂತರ ಜಾಲ ಪತ್ತೆಯಾಗಿದೆ.
ಇದನ್ನೂ ಓದಿರಿಹೆಚ್ಚುತ್ತಲೇ ಇದೆ ಕರೊನಾ ವೈರಸ್​ ಅಬ್ಬರ; 24 ಗಂಟೆಯಲ್ಲಿ ಸಾವನ್ನಪ್ಪಿದ್ದು 95 ಮಂದಿ, ಮಹಾರಾಷ್ಟ್ರದ್ದೇ ಮೇಲುಗೈ…
ಗುಜರಾತ್​ನಿಂದ ಬಂದ ತಂಡದಲ್ಲಿ ಯುವಕ ಸಾದಿಕ್​ ಎಂಬಾತನ ದಾಖಲೆ ಪರಿಶೀಲಿಸುವಾಗ ಅವನ ಹೆಸರು ನಕಲಿ ಎಂಬುದು ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ಆತ ಹಿಂದು ಯುವಕ, ಹೆಸರು ಕಾರ್ತಿಕ್​ ಮುನಿಯೇಂದ್ರ. ತಮಿಳುನಾಡು ಮೂಲದವ. ಈತನನ್ನು ಮತಾಂತರ ಮಾಡಿ ಜತೆಯಲ್ಲೇ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿರಿತಬ್ಲಿಘ್ ಸಂಪರ್ಕ ತಂದ ಕಂಟಕ: ತಹಸೀಲ್ದಾರ್, ಡಿಎಚ್‌ಒ ಸೇರಿ ಹಲವು ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್!
ಸದ್ಯ ಇವರೆಲ್ಲರನ್ನೂ ಮಾಲೂರಿನ ರಾಜೇನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಅಲ್ಲದೆ ತಬ್ಲಿಘಿ ತಂಡದೊಂದಿಗೆ ಬಂದ ಮೊಹಮದ್​ ಹಮ್ಜಾ ಮತ್ತು ಸಮೀರ್​ ಉತ್ತರ ಪ್ರದೇಶ, ಸಯ್ಯದ್​ ರಿಜ್ವಾನ್​ ಬೆಂಗಳೂರಿನ ಪಾದರಾಯನಪುರದವರು. ಇವರನ್ನು ಕರೆತಂದ ಮಾಲೂರು ಪಟ್ಟಣದ ಕುಂಬಾರಪೇಟೆಯ ಸಯ್ಯದ್​ ಉಸ್ಮಾನ್ ಎಂಬಾತ ಇವರ ವಿಳಾಸವನ್ನು ಮರೆಮಾಚಿ ಮಾಲೂರು ನಿವಾಸಿಗಳೆಂದು ಕರೆತಂದಿದ್ದಾನೆ. ಈತನೊಂದಿಗೆ ಕಾರ್ತಿಕ್ ಮುನಿಯೇಂದ್ರ ಕೂಡ ಬಂದಿದ್ದ. ಸಯ್ಯದ್​ ಉಸ್ಮಾನ್ ವಿರುದ್ಧ ಮಾಲೂರು ತಹಸೀಲ್ದಾರ್​ ಮತಾಂತರ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿರಿತಬ್ಲಿಘಿಗಳಿಗೆ ದುರ್ಗಕ್ಕೆ ಪ್ರವೇಶ ತಪ್ಪು ನಡೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − twelve =
Remember me
