ಹಾಸನ:ಮಾನಾ ಮರ್ಯಾದೆ ಇಲ್ಲದೆ ನಾವು ಮಾಡಿದ ಕೆಲಸಕ್ಕೆ ಅಡಿಗಲ್ಲು ಹಾಕೋಕೆ ಹೊರಟಿದ್ದಾರೆ. ಜಿಲ್ಲೆಗೆ 160 ಬಾರ್ ಕೊಟ್ಟಿರುವುದು ಇವರ ಸಾಧನೆಯಾಗಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಎಚ್‌ಡಿ ರೇವಣ್ಣ ವಾಗ್ದಾಳಿ ಮಾಡಿದ್ದಾರೆ.
ಬೇಲೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಸಮಾವೇಶದಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಪರ್ಸೆಂಟೇಜ್ ಪಾರ್ಟಿಗಳಾಗಿವೆ. ಒಬ್ಬರು 40 % ಇನ್ನೊಬ್ಬರು 20 % ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ದ ಕಟು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:ಈಜುಕೊಳದಲ್ಲಿ ಮಹಿಳೆಯರಿಗೆ ಟಾಪ್‌ಲೆಸ್ ಆಗಿ ಈಜಾಡಲು ಅನುಮತಿ ನೀಡಿದ ಬರ್ಲಿನ್!
ಹೆಣ್ಣು ಮಕ್ಕಳು ಹೇಳಿದ್ದಕ್ಕೆ ಕುಮಾರಸ್ವಾಮಿ ಅವರು ಸರಾಯಿ ಹಾಗೂ ಲಾಟರಿ ನಿಷೇಧ ಮಾಡಿದ್ದಾರೆ. ಬಹುಮತ ಬರದೇ ಹೋದರು ಸಿಕ್ಕಿರುವ ಅವಕಾಶದಲ್ಲಿ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿದ್ದಾರೆ. ಹೀಗೆ ಸ್ತ್ರಿ ಶಕ್ತಿ ಸಂಘದ ಸಾಲ ಮನ್ನಾ ಮಾಡಬೇಕು ಎನ್ನುವ ಯೋಜನೆ ಇದೆ. ಯಾವ ಮಹಿಳೆಯರು ಸಾಲದ ಹಣ ಕಟ್ಟಬೇಡಿ. ಇನ್ನು ಎರಡು ತಿಂಗಳು ಸುಮ್ಮನಿರಿ ಎಂದು ಮನವಿ ‌ಮಾಡಿದ್ದಾರೆ.
ಇದನ್ನೂ ಓದಿ:ಬಿಸಿಬಿಸಿ ಟೀಗಾಗಿ ಅತ್ತೆ-ಸೊಸೆ ನಡುವೆ ಜಗಳ; ಪ್ರಾಣ ಕಳೆದುಕೊಂಡ ವೃದ್ಧೆ
ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿದ್ದು ದೇವೇಗೌಡರ ಸರ್ಕಾರವಾಗಿದೆ. ಅರಸೀಕೆರೆಗೆ ಏನೇನು ಮಾಡಿದ್ದೇವೆ ಎಂದು ಅಲ್ಲಿನ ರಣರಂಗಕ್ಕೆ ಹೋದಾಗ ಹೇಳುತ್ತೇನೆ. ಒಂದು ಬಾರಿ ಕುಮಾರಣ್ಣಗೆ 123 ಸ್ಥಾನ ನೀಡಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆಂದು ಹೇಳಿದ್ದಾರೆ.
ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದು ಖಾಲಿ ಬಜೆಟ್ ಮಂಡನೆಯಾಗಿದೆ. ಅದರಲ್ಲಿ ಮೂರು ಕಾಸಿನದ್ದು ಏನು ಇಲ್ಲಾ. 2023ಕ್ಕೆ ಕುಮಾರಸ್ವಾಮಿ ಇನ್ನೊಂದು ಬಜೆಟ್ ಮಾಡಲಿದ್ದಾರೆ ಎಂದು ಹೇಳುವ ಮೂಲಕವಾಗಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುವುದು ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮಗಳನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದ ತಂದೆ!; ಮುಂದೆ ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eighteen =
Remember me
