ಕೊಳ್ಳೇಗಾಲ:ಶಾಸಕರೊಬ್ಬರ ಹೆಸರಿನಲ್ಲಿ ಶಾಸಕಿಯೊಬ್ಬರಿಗೆ ಐವತ್ತು ಸಾವಿರ ರೂಪಾಯಿ ಮೋಸ ಮಾಡಿದ್ದ ಯುವಕನೊಬ್ಬ ಕೊನೆಗೂ ಸಿಕ್ಕಿಬಿದ್ದಿದ್ದು, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ. ಕನಕಪುರದ ದೊಡ್ಡಮಳಲವಾಡಿಯ ಸಚಿನ್​ ಗೌಡ ಬಂಧಿತ ಆರೋಪಿ.
ಈತ ಕೊಳ್ಳೇಗಾಲ ಶಾಸಕ ಮಹೇಶ್​ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಂಕೋಲ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ವಂಚಿಸಿ, ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ತಾನು ಕೊಳ್ಳೇಗಾಲ ಶಾಸಕ ಮಹೇಶ್ ಅವರ ಆಪ್ತ ಸಹಾಯಕ ಎಂದು ಶಾಸಕಿ ರೂಪಾಲಿ ನಾಯ್ಕ್​ಗೆ ಕರೆ ಮಾಡಿದ್ದ ಸಚಿನ್, ಶಾಸಕರಿಗೇ ತುರ್ತಾಗಿ 50 ಸಾವಿರ ರೂಪಾಯಿ ಬೇಕೆಂದು ಕೇಳಿದ್ದ.
ಈತನ ಮಾತನ್ನು ನಂಬಿದ ಶಾಸಕಿ 50 ಸಾವಿರ ರೂ. ಸಚಿನ್ ಖಾತೆಗೆ ಟ್ರಾನ್ಸ್​ಫರ್​ ಮಾಡಿದ್ದರು. ನಂತರ ಸಚಿವ ಪ್ರಭು ಚೌಹಾನ್​ಗೆ ಕರೆ ಮಾಡಿ ಮಹೇಶ ಅಣ್ಣನಿಗೆ ತುರ್ತಾಗಿ ಒಂದು ಲಕ್ಷ ರೂಪಾಯಿ ಬೇಕಿದೆ ಎಂದು ಬೇಡಿಕೆ ಇಟ್ಟಿದ್ದ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೂ ಕರೆ ಮಾಡಿ ದುಡ್ಡು ಕೇಳಿದ್ದ. ಅವರು ಸಂಶಯ ಬಂದು ಎನ್. ಮಹೇಶ್​​ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಾತ್ರವಲ್ಲ, ವಾರದ ಹಿಂದೆ ಎನ್.ಮಹೇಶ್-ರೂಪಾಲಿ ನಾಯ್ಕ್​ ಬೆಂಗಳೂರಿನಲ್ಲಿ ಭೇಟಿ ಆಗಿದ್ದಾಗ 50 ಸಾವಿರ ರೂ. ವಂಚನೆ ವಿಷಯ ಗೊತ್ತಾಗಿತ್ತು. ನಂತರ ಶಾಸಕರು ತಮ್ಮ ಆಪ್ತ ಸಹಾಯಕನಿಂದ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆಗಿಳಿದ ಪೊಲೀಸರು ಸಚಿನ್​ನನ್ನು ಬಂಧಿಸಿದ್ದಾರೆ.
ಎಸ್​ಎಸ್​ಎಲ್​ಸಿಯಲ್ಲಿ ಅಂಕ ಕಡಿಮೆ ಬರಬಹುದೇನೋ ಎಂಬ ಭಯದಿಂದ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಎಸ್ಎಸ್​​ಎಲ್​ಸಿ ಪರೀಕ್ಷೆ: ಮೊದಲ ದಿನ ರಾಜ್ಯದ ಎಲ್ಲೆಲ್ಲಿ, ಏನೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
