ಬೆಂಗಳೂರು:ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಡೆಡ್ಲಿ ಹಿಟ್​ ಅಂಡ್​ ರನ್​ ಪ್ರಕರಣ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಜಾಲಿ ರೈಡ್​ ಹೊರಟ ಯುವಕ-ಯುವತಿಯರು ಅಮಾಯಕನ ಪ್ರಾಣವನ್ನು ತೆಗೆದೇ ಬಿಟ್ಟಿದ್ದಾರೆ. ಅತಿ ವೇಗದ ಮೋಜಿನ ಉಚ್ಚಾಟಕ್ಕೆ ಕುಟುಂಬದ ಆಧಾರವಾಗಿದ್ದ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದ್ದಾರೆ.
ಅಪಘಾತಕ್ಕೀಡಾದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಆತನನ್ನು ಆಸ್ಪತ್ರೆಗೆ ದಾಖಲಿಸದೇ ಅಲ್ಲಿಯೇ ಬಿಟ್ಟು ಪರಾರಿಯಾಗುವ ಮೂಲಕ ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸಿದ್ದಾರೆ. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಿನಂತೆ ಮಾನವೀಯತೆ ಮರೆತು ಪರಾರಿ ಆಗುತ್ತಿದ್ದ ಲಜ್ಜಗೆಟ್ಟವರನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ:ಮೃನಾಲ್​ ಠಾಕೂರ್​ ಹಳೇ ಫೋಟೋ ವೈರಲ್​! ಇವರೇನಾ ಸೀತಾಮಹಾಲಕ್ಷ್ಮೀ ಎನ್ನುತ್ತಿರುವ ನೆಟ್ಟಿಗರು
ಹಿಟ್ ಅಂಡ್ ರನ್​ಗೆ ಬಲಿಯಾದ ವ್ಯಕ್ತಿಯನ್ನು ಜೊಮ್ಯಾಟೋ ಡೆಲಿವರಿ ಬಾಯ್ ಪವನ್ ಕುಮಾರ್​ ಎಂದು ಗುರುತಿಸಲಾಗಿದೆ. ಈತ ಎಚ್.ಡಿ.ಕೋಟೆ ಮೂಲದವನು. ಪವನ್​ ಸವಾರಿ ಮಾಡುತ್ತಿದ್ದ ಬೈಕ್​ಗೆ ಕಾರು ಗುದ್ದಿ ಸುಮಾರು 100 ಮೀಟರ್ ಎಳೆದೊಯ್ದಿದೆ. ರಕ್ತದ ಮಡುವಿನಲ್ಲೇ ಒದ್ದಾಡಿ ಪವನ್​ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ಬೆನ್ನಲ್ಲೇ ಕಾರು ಚಾಲಕ ಬಿಟ್ಟು ಕಾರಲ್ಲಿದ್ದ ನಾಲ್ವರು ಅಲ್ಲಿಂದ ಎಸ್ಕೇಪ್ ಆಗಿದ್ದು, ಕಾರು ಚಾಲಕ ವಿನಾಯಕ್​ನನ್ನು ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಈ ಭಯಾನಕ ಘಟನೆ ಆರ್.ಆರ್.ನಗರ ಮೆಟ್ರೊ ನಿಲ್ದಾಣ ಸಮೀಪದ ವಿಶ್ವಪ್ರಿಯ ಅಪಾರ್ಟ್​ಮೆಂಟ್ ಬಳಿ ಭಾನುವಾರ ಮಧ್ಯರಾತ್ರಿ 1.45ರ ಸುಮಾರಿಗೆ ನಡೆದಿದೆ. ಆರೋಪಿಗಳು ಅಪಘಾತ ಬಳಿಕ ಎಸ್ಕೇಪ್ ಆಗಲು ಯತ್ನಿಸಿ, ಒಂದು ಕಿ.ಮೀ. ದೂರದವರೆಗೆ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಆದರೆ, ಸ್ಥಳೀಯರು ಕಾರನ್ನು ಅಡ್ಡಗಟ್ಟಿ ಹಿಡಿದು ಥಳಿಸಿದ್ದಾರೆ.
ಬಂಧಿತ ಕಾರು ಚಾಲಕ ವಿನಾಯಕ್, ವಿಜಯನಗರ ನಿವಾಸಿ. ರಾಜಾಜಿನಗರ ಮಹೀಂದ್ರ ಶೋ ರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ನಿನ್ನೆ ವಿನಾಯಕ್​ಗೆ ಇನ್ಸೆಂಟಿವ್ ಬಂದಿತ್ತು. ಅದೇ ದುಡ್ಡಲ್ಲಿ ಗೆಳೆಯರೆಲ್ಲ ಸೇರಿ ಪಾರ್ಟಿ ಮಾಡಿದ್ದಾರೆ. ಅದರಲ್ಲಿ ಯುವತಿಯರು ಕೂಡ ಸೇರಿದ್ದರು. ಮದ್ಯಪಾನ ಮಾಡಿಕೊಂಡು ಕಾರು ಚಾಲನೆ ಮಾಡಿಕೊಂಡು ಬಂದ ವಿನಾಯಕ್, ನಾಯಂಡಹಳ್ಳಿ ಕಡೆಯಿಂದ ಆರ್.ಆರ್.ನಗರಕ್ಕೆ ತೆರಳುತ್ತಿದ್ದ. ಗೆಳೆಯ ಸಾಗರ್​ನನ್ನು ಡ್ರಾಪ್ ಮಾಡಲು ವಿನಾಯಕ್ ಮತ್ತು ಸ್ನೇಹಿತರು ತೆರಳುತ್ತಿದ್ದರು. ಈ ವೇಳೆ ಮುಂದೆ ಬೈಕ್​ನಲ್ಲಿ ತೆರಳುತ್ತಿದ್ದ ಪವನ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಪವನ್ ದೇಹವನ್ನು 100 ಮೀಟರ್ ಎಳೆದೊಯ್ದಿದ್ದಾರೆ.
ಇದನ್ನೂ ಓದಿ:ನಟಿ ಖುಷ್ಬೂ ಆಕ್ರೋಶಕ್ಕೆ ಮಣಿದ ಸ್ಟಾಲಿನ್​ ಸರ್ಕಾರ: ನಾಲಿಗೆ ಹರಿಬಿಟ್ಟ ಡಿಎಂಕೆ ನಾಯಕನಿಗೆ ಆಘಾತ
ಅಪಘಾತ ಬಳಿಕ ಎಸ್ಕೇಪ್ ಆಗಲು ಕಾರು ಚಲಾಯಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಆರ್.ಆರ್.ನಗರ ಮೆಟ್ರೊ ನಿಲ್ದಾಣ ಬಳಿ ಸ್ಥಳೀಯರು ‌ಅಡ್ಡಗಟ್ಟಿದ್ದಾರೆ. ಸುಮಾರು ಒಂದು ಕಿ.ಮೀ. ಚೇಸ್ ಮಾಡಿ ಹಿಡಿದಿದ್ದಾರೆ. ಬಳಿಕ ಕಾರಲ್ಲಿದ್ದವರನ್ನು ಥಳಿಸಿ, ಕಾರನ್ನು ಪುಡಿ ಪುಡಿ ಮಾಡಿದ್ದಾರೆ. ನಂತರ ಕಾರು ಚಾಲಕನನ್ನು ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಾರಲ್ಲಿದ್ದ ಮೂವರು ಯುವತಿಯರು ಹಾಗೂ ಓರ್ವ ಯುವಕ ಕಾರಿಂದ ಇಳಿದು ಎಸ್ಕೇಪ್ ಆಗಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಮದ್ಯಪಾನ‌ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ವಿದ್ಯುತ್ ಬಿಲ್ ಭಾಗಶಃ ಪಾವತಿ ಅವಕಾಶ: ಎಇಇಗೆ ಲಿಖಿತ ಮನವಿ ಸಲ್ಲಿಸಿದರೆ ಸೌಲಭ್ಯ; ಎಲ್ಲ ಬಗೆಯ ಗ್ರಾಹಕರಿಗೆ ನಿಯಮ ಅನ್ವಯ

ಕಹಿಯಾದ ಜೇನು ಕೃಷಿ: ಬದಲಾದ ಕೃಷಿ ಪದ್ಧತಿ ಕಾರಣ, ಹೊರ ರಾಜ್ಯದಿಂದ ಆಮದು

ಜಿಡಿಪಿ ದರ, ಭಾರತ ಕುಬೇರ: ಏಳಿಗೆಗೆ ಕಾರಣವಾದ ಸಂಗತಿಗಳ ಅವಲೋಕನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
