ಬೆಂಗಳೂರು:ಬಡವ ರಾಸ್ಕಲ್​ ಹಾಗೂ ಡೇರ್​ ಡೆವಿಲ್​ ಮುಸ್ತಫಾ ಸಿನಿಮಾದಲ್ಲಿ ಹಾಸ್ಯದ ಹೊನಲು ಹರಿಸಿರುವ ಹಾಸ್ಯನಟ ನಾಗಭೂಷಣ್ ಅವರ ವಿರುದ್ಧ ಹಿಟ್​ ಅಂಡ್​ ರನ್​ ಆರೋಪ ಕೇಳಿಬಂದಿದ್ದು,​ ಪ್ರಕರಣ ದಾಖಲಾಗಿದೆ.
ಕುಮಾರಸ್ವಾಮಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪಾರ್ಥ ಎಂಬುವವರು ದೂರು ದಾಖಲಿಸಿದ್ದು, ತಮ್ಮ ತಂದೆ-ತಾಯಿಗೆ ನಾಗಭೂಷಣ್ ಅವರ ಕಾರು ಡಿಕ್ಕಿಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ಅಪಘಾತ ನಡೆದಿದೆ.
ಇದನ್ನೂ ಓದಿ:ಗ್ರಾಹಕರಿಗೆ LPG ಬೆಲೆ ಏರಿಕೆ ಶಾಕ್​: ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 209 ರೂ. ಏರಿಕೆ
ದಂಪತಿ ರಸ್ತೆಯ ಫುಟ್ ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದ್ದು, ಪಾರ್ಥ ಅವರ ತಾಯಿ ಪ್ರೇಮ (48) ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ತಂದೆ ಕೃಷ್ಣ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಈ ವೇಳೆ ನಾಗಭೂಷಣ್​ ಅವರು ವಾಹದಲ್ಲಿದ್ದರು ಎಂದು ತಿಳಿದುಬಂದಿದೆ. ನಾಗಭೂಷಣ್​ ಅವರು ಆರ್. ಆರ್. ನಗರದಿಂದ ಉತ್ತರಹಳ್ಳಿ ಮುಖಾಂತರ ಮನೆಗೆ ಹೋಗುತ್ತಿದ್ದರು. ಇದೇ ವೇಳೆ ಫುಟ್​ಪಾತ್ ಮೇಲೆ ದಂಪತಿ ಹೋಗುತ್ತಿದ್ದರು. ಫುಟ್​ಪಾತ್ ಮೇಲೆ ಕಾರು ಹತ್ತಿಸಿ ಅಪಘಾತ ಮಾಡಿರುವ ಆರೋಪ ಕೇಳಿಬಂದಿದೆ.
ಸದ್ಯಕ್ಕೆ ಪೊಲೀಸರು ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ನಾಗಭೂಷಣ್​ ಅವರು ಅಧಿಕಾರಿಗಳ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ಹಾಸ್ಯನಟನಾಗಿ ನಾಗಭೂಷಣ್​ ಅವರು ಇತ್ತೀಚೆಗೆ ಚಿತ್ರೆಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. ಟಗರುಪಲ್ಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದರು. ಈ ಚಿತ್ರವನ್ನು ಡಾಲಿ ಧನಂಜಯ್​ ಅವರು ತಮ್ಮ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನೆನಪಿರಲಿ ಪ್ರೇಮ್​ ಅವರ ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿತ್ತು. ಅಷ್ಟರಲ್ಲಿ ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ನಾಗಭೂಷಣ್​ ಅವರು ಇತ್ತೀಚೆಗೆ ಹೊಯ್ಸಳ, ಇಕ್ಕಟ್ಟು ಹಾಗೂ ಕೌಸಲ್ಯಸುಪ್ರಜಾರಾಮ ಸಿನಿಮಾದಲ್ಲಿ ನಟಿಸಿದ್ದರು.
ಅಧಿಕಾರ ದುರ್ಬಳಕೆ ಆರೋಪ: ಕೊಪ್ಪಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೇವೆಯಿಂದಲೇ ವಜಾ

ಡಬ್ಲ್ಯುಡಬ್ಲ್ಯುಇ ರೀತಿ ಬದಲಾದ ಸೆಲೆಬ್ರಿಟಿ ಕ್ರಿಕೆಟ್​ ಲೀಗ್:​​ ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ ಕಲಾವಿದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
