ಬೆಂಗಳೂರು:ಜೊಮ್ಯಾಟೋ ಫುಡ್​ ಡೆಲಿವರಿ ಆ್ಯಪ್​ನ ಡೆಲಿವರಿ ಬಾಯ್​ ವಿರುದ್ಧ ದೂರು ನೀಡಿ ಸಕತ್​ ಸುದ್ದಿಯಲ್ಲಿದ್ದ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಹಿತೇಶಾ ಚಂದ್ರಾಣಿ ಇದೀಗ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾಳೆ. ಆಕೆಯ ವಿರುದ್ಧ ಎಫ್​ಐಆರ್​ ದಾಖಲಾಗುತ್ತಿದ್ದಂತೆಯೇ ಮನೆಯ ಬಾಗಿಲಿಗೆ ಬೀಗ ಬಿದ್ದಿರುವುದಾಗಿ ಹೇಳಲಾಗಿದೆ.
ಡೆಲಿವರಿ ಬಾಯ್​ ಕಾಮರಾಜ್​ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಹಿತೇಶಾ ದೂರು ನೀಡಿದ್ದಳು. ಅದಾದ ನಂತರ ಪ್ರಕರಣ ತಿರುವು ಪಡೆದುಕೊಂಡಿದ್ದು, ಜನರು ಹಿತೇಶಾದ್ದೇ ತಪ್ಪಿದೆ ಎಂದು ಹೇಳಲಾರಂಭಿಸಿದ್ದರು. ಕಾಮರಾಜ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಕೆಯ ತನ್ನ ಮೇಲೆ ಹಲ್ಲೆ ಮಾಡಿದ್ದಾಳಿ ಹೇಳಿದ್ದ. ಮಾರ್ಚ್​ 15ರಂದು ಆಕೆಯ ವಿರುದ್ಧ ದೂರು ದಾಖಲಿಸಿದ್ದು, ಎಫ್ಐಆರ್​ ದಾಖಲಾಗಿತ್ತು.
ಎಫ್​ಐಆರ್​ ದಾಖಲಾದ ನಂತರ ಹಿತೇಶಾ ವಿಚಾರಣೆಗೆಂದು ಪೊಲೀಸರು ಅವಳ ಮನೆಗೆ ತೆರಳಿದ್ದಾರೆ. ಆದರೆ ಆ ಸಮಯದಲ್ಲಿ ಮನೆಗೆ ಬೀಗ ಹಾಕಿರುವುದು ಗೊತ್ತಾಗಿದೆ. ಆಕೆ ಬೆಂಗಳೂರು ತೊರೆದಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ.
ಆಕೆ ನಮ್ಮೊಂದಿಗೆ ಮಾತನಾಡಿದ್ದಾಳೆ. ಆಕೆಯ ವಿಳಾಸ ನೆಟ್ಟಿಗರಿಗೆ ಸಿಕ್ಕಿದ್ದು, ಅದರಿಂದ ತನಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ಆಕೆ ಈ ರೀತಿ ಮಾಡಿರಬಹುದು. ಇಂದು ಸ್ಟೇಟ್​ಮೆಂಟ್​ ಕೊಡುವುದಾಗಿ ಆಕೆ ತಿಳಿಸಿದ್ದಾಳೆ ಎಂದು ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

VIDEO| ಮಹಿಳೆಯರ ಒಳಉಡುಪು ಕದ್ದ ಖತರ್ನಾಕ್​ಗಳು! ಪ್ಯಾಂಟಿ ಚೋರ್​ ಅಬ್ದುಲ್​ ವಿಡಿಯೋ ವೈರಲ್​

ಅಪ್ಪ ಅಮ್ಮನಿಗೆ ಕನ್ನಡದಲ್ಲೇ ವಿಷ್​ ಮಾಡಿದ ಅನುಷ್ಕಾ ಶೆಟ್ಟಿ! ನಿಜವಾದ ಕನ್ನಡ ಪ್ರೇಮವೆಂದರೆ ಇದೇ ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
