ಬಾಗಲಕೋಟೆ:ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ, ಶಾಸಕರಿಗೆ ಪಗಾರ ಕೊಡಲು ಹಣವಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಮಾಡಿದ ಟೀಕಾಪ್ರಹಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೇ ಇದ್ದಾರೆ? ಹೇಳಿ ನೋಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಈ ವರ್ಷ ನೊಂದಣಿ ಮಾಡಿದ ಕಾರಿಗೆ 2020ರಲ್ಲೇ ಬಂದಿತ್ತು ಟ್ರಾಫಿಕ್ ಚಲನ್! ಇದು ಹೇಗೆ ಸಾಧ್ಯ? ದಂಗಾದ ನೆಟ್ಟಿಗರು
ಬಾಗಲಕೋಟೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೆ ಇದ್ದಾರೆ ಹೇಳಿ? ನಾನು ಮಂತ್ರಿ ಇದ್ದೇನೆ, ಇಲ್ಲೇ ಶಾಸಕರು ಸಹ ಇದ್ದಾರೆ. ನಮ್ಮ ಮಾಜಿ ಶಾಸಕರು ಪಿಂಚಣಿ ಪಡೆಯುತ್ತಿದ್ದಾರೆ. ಕೇಳ್ರಿ ಇವರ ಸಂಬಳ ಸ್ಟಾಪ್ ಆಗಿದೆಯಾ ಅಂತ. ಎರಡು ಸಾವಿರ ರೂ. ಏನು ನಮ್ಮ ಜನರಿಗೆ ಒಂದನೇ ತಾರೀಖಿಗೆ ಹಣ ತಲುಪುತ್ತಿದೆ ಅಲ್ವಾ, ಅದನ್ನು ಸಹಿಸೋದಕ್ಕೆ ಆಗ್ತಿಲ್ಲ ಇವರಿಗೆ ಅಷ್ಟೇ ಎಂದರು.
ಸಿದ್ದರಾಮಯ್ಯ ಅವರಿಗೆ ಸಿದ್ದರಾಮುಲ್ಲಾಖಾನ್ ಎಂದು ವ್ಯಂಗ್ಯವಾಡಿದ ಅನಂತಕುಮಾರ ಹೆಗಡೆ ವಿಚಾರಕ್ಕೆ ಸ್ಪಂದಿಸಿದ ಸಚಿವರುಮ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅತ್ಯಂತ ದುರ್ದೈವ, ಸಾರ್ವಜನಿಕ ಬದುಕಿನಲ್ಲಿ ಇರುವವರು ಇಂತಹ ಭಾಷೆ ಬಳಸಬಾರದು. ಸಮಾಜವನ್ನು ಸುಧಾರಣೆ ಕಡೆ ಒಯ್ಯಬೇಕೇ ಹೊರತು, ಅಲ್ಲಿ ಸಮಾಧಾನವನ್ನು ಕೆದಕಿ ಅಗೌರವದ ವಾತಾವರಣ ಸೃಷ್ಟಿ ಮಾಡಿದರೆ ಅದು ನಿಮ್ಮ ಮೈಮೇಲೆ ಬರುತ್ತದೆ ಎಂಬ ಎಚ್ಚರಿಕೆ ಇರಲಿ ಎಂದು ತಿರುಗೇಟು ನೀಡಿದರು.
“2028ಕ್ಕೆ ವಿರಾಟ್ ಕೊಹ್ಲಿ ನಿವೃತ್ತಿ”: ವೈರಲ್ ಆಗ್ತಿದೆ 2016ರಲ್ಲಿ ಈ ಜ್ಯೋತಿಷಿ ನುಡಿದ ಭವಿಷ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
