ಬೆಂಗಳೂರು:ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್(HK Patil)ಅವರು ಶುಕ್ರವಾರ ಜಿಎಸ್​ಟಿ(GST)ಕಾನೂನು ವಿಚಾರವಾಗಿ ಸಭೆ ನಡೆಸಿದ್ದು, ಬಿಜೆಪಿ ನಾಯಕರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:29 ವರ್ಷದ ಗೆಳತಿಯ ಮಗುವಿಗೆ ತಂದೆಯಾದ 83ರ ಹಾಲಿವುಡ್​​ ನಟ
“ಜಿಎಸ್​ಟಿ ವಿಚಾರವಾಗಿ ನಮ್ಮ ಇಲಾಖೆ ಆತಂಕ ವ್ಯಕ್ತಪಡಿಸಿದೆ. ತಪ್ಪು ಮಾಡಿದವರಿಗೆ ಕಾನೂನು ಸಡಿಲಿಕೆ ಸಲ್ಲದು. ಈಗಾಗಲೇ ನಾವು ಮೂರು ಸಲಹೆಗಳನ್ನು ಕೊಟ್ಟಿದ್ದೇವೆ. ಜಿಎಸ್​ಟಿ ಕಾನೂನು ಪುನರ್ ಪರಿಶೀಲನೆಗೆ ಸೂಚಿಸಿದ್ದೇವೆ” ಎಂದು ಹೇಳಿದರು. ಈ ಮಧ್ಯೆ ಮತಾಂತರ ನಿಷೇಧ ಕಾಯ್ದೆ ರದ್ದು ಸೇರಿದಂತೆ ಬಿಜೆಪಿ ಮಾಡಿರುವ ಸರಣಿ ಆರೋಪಗಳನ್ನು ಎಚ್.ಕೆ. ಪಾಟೀಲ್ ಅವರು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ:ಆಡಳಿತಕ್ಕೆ ಮೇಜರ್​ ಸರ್ಜರಿ: 10 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
“ಬಡವರ ಕಲ್ಯಾಣ ಮಾಡಿದ್ರೆ ಸರ್ಕಾರ ದಿವಾಳಿಯಾಗುತ್ತದೆ. ನಮ್ಮಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುತ್ತಿಲ್ಲ ಎಂಬುದು ಅಪಪ್ರಚಾರ! ಬಿಜೆಪಿ ಜನರ ಸಮಯವನ್ನು ಹಾಳು ಮಾಡುತ್ತಿದೆ. ಅಜೆಂಡಾ ಹಾಗೂ ಹಿಡನ್ ಅಜೆಂಡಾ ಎರಡೂ ಬಿಜೆಪಿಯವರಲ್ಲಿ ಇದೆ. ನಮ್ಮದು ಅವರಂತಲ್ಲ, ಬರೀ ಅಜೆಂಡಾ ಮಾತ್ರವೇ ಇರಲಿದೆ. ನಾವು ಜನರಿಗೆ ಗ್ಯಾರಂಟಿ ಘೋಷಿಸಿದ್ದೆವು, ಅದನ್ನು ಜಾರಿಗೆ ತರುತ್ತಿದ್ದೇವೆ ಅಷ್ಟೇ!” ಎಂದು ಹೇಳುವ ಮುಖೇನ ಬಿಜೆಪಿ(BJP)ನಾಯಕರ ಹೇಳಿಕೆಗಳಿಗೆ ಎಚ್.ಕೆ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಆಡಳಿತಕ್ಕೆ ಮೇಜರ್​ ಸರ್ಜರಿ: 10 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 17 =
Remember me
