ತುಮಕೂರು:ಅನ್ನಭಾಗ್ಯ ಯೋಜನೆಗೆ ಭೇಕಾಗಿರುವ 1.50 ಲಕ್ಷ ಟನ್​ ಅಕ್ಕಿಯನ್ನು ಸರಬರಾಜು ಮಾಡಲು ಛತ್ತೀಸ್​ಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.
ಸೋಮವಾರ ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಸಚಿವ ಪರಮೇಶ್ವರ್ ಅಕ್ಕಿ ಕೊಡಲು ಛತ್ತೀಸ್​ಗಢ ಸರ್ಕಾರ ಒಪ್ಪಿದ್ದು, ಅಲ್ಲಿಂದ ರಾಜ್ಯಕ್ಕೆ ಸಾಗಾಣೆ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ:VIDEO| ಎರಡು ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿ; 4 ಮಂದಿ ಸಾವು, 70ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅಗತ್ಯದಷ್ಟು ಅಕ್ಕಿ ಒಂದು ರಾಜ್ಯದಲ್ಲಿ ಸಿಗುವುದಿಲ್ಲ. ಈ ಸಂಬಂಧ ಹಲವು ರಾಜ್ಯಗಳನ್ನು ಸಂಪರ್ಕಿಸಲಾಗಿದ್ದು, ಎಲ್ಲಿ ಸಿಕ್ಕರು ಖರೀದಿಸಲಾಗುವುದು. ಅಕ್ಕಿ ಜೊತೆಗೆ ರಾಗಿ ಜೋಳವನ್ನು ಸಹ ಕೊಡಲಾಗುವುದು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ಧಾರೆ.
ಭಾರತ ಆಹಾರ ನಿಗಮದವರು ಮೊದಲಿಗೆ ಅಕ್ಕಿ ಸ್ಟಾಕ್​ ಇದೆ ಕೊಡುವುದಾಗಿ ಹೇಳಿ ಆ ನಂತರ ಉಲ್ಟಾ ಹೊಡೆದರು. FCIಗೆ ಈ ರೀತಿ ಮಾಡಲು ನಿರ್ದೇಶಿಸಿದವರು ಯಾರು. ಬದವರಿಗಾಗಿ ಮೀಸಲಿರುವ ಯೋಜನೆಯಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಗೃಹ ಸಚಿವ ಪರಮೇಶ್ವರ ಕಿಡಿಕಾರಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
