ಬೆಂಗಳೂರು:ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನ.14 ರಿಂದ ಜನವರಿ 24, 2024 ರವರೆಗೆ ಮಕ್ಕಳಿಗೆ ಸ್ಪಂದಿಸುವ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲಾಗುತ್ತದೆ. ಮಕ್ಕಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಭಿಯಾನ ನಡೆಯಲಿದೆ. ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯಿತಿ ಹಿನ್ನೆಲೆಯಲ್ಲಿ ಒಂದು ದಿನ ಮಕ್ಕಳ ಗ್ರಾಮಸಭೆ ಆಯೋಜಿಸಲಾಗುತ್ತದೆ.
ಮಕ್ಕಳಿಗೆ ಸ್ಪಂದಿಸುವ ಗ್ರಾಮ ಪಂಚಾಯತಿ ಅಭಿಯಾನಕ್ಕೆ 10 ವಾರದ ಕಾರ್ಯಕ್ರಮ ರೂಪಿಸಿದ್ದು, ಈ 10 ವಾರದಲ್ಲಿ ಮಕ್ಕಳ ಜನನ ನೊಂದಣಿ ಮತ್ತು ಜನನ ಪ್ರಮಾಣ ಪತ್ರಗಳ ವಿತರಣೆ, ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ, ಜಾಗೃತಿ, ಮಕ್ಕಳಿಗೆ ಚುಚ್ಚು ಮದ್ದು ಪ್ರಾಮುಖ್ಯತೆ, ಮಾನಸಿಕ ಆರೋಗ್ಯ ಸಂಬಂಧಿತ ಕಾರ್ಯಕ್ರಮ ಯೋಜಿಸಲಾಗುತ್ತದೆ.
ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯಡಿ ಕನ್ಯಾ ಶಿಕ್ಷಾ ಪ್ರವೇಶ್ ಉತ್ಸವ್ ಅಂಗವಾಗಿ ಶಾಲೆಯಿಂದ ಹೊರಗುಳಿದ 11-14 ವರ್ಷ ವಯಸ್ಸಿನ ಪ್ರಾಯಪೂರ್ವ ಬಾಲಕಿಯರ ಪಟ್ಟಿ ಸಿದ್ಧಪಡಿಸಿ ಮರಳಿ ಶಾಲೆಗೆ ದಾಖಲಿಸಲು ಕ್ರಮಕೈಗೊಳ್ಳುವುದು, ಶಾಲೆಯಿಂದ ಹೊರಗುಳಿದ 11-14 ವರ್ಷ ವಯಸ್ಸಿನ ಪ್ರಾಯದ ಬಾಲಕಿಯರ ಪಟ್ಟಿ ಮಾಡಿ ವಯಸ್ಸಿಗನುಗುಣವಾಗಿ ವಿಶೇಷ ತರಬೇತಿ ಮತ್ತು ಕಲಿಕೆಗೆ ಕ್ರಮವಹಿಸಬೇಕು. ಶಾಲೆಯಿಂದ ಹೊರಗುಳಿದ 14-18 ವರ್ಷ ವಯಸ್ಸಿನ ಪ್ರಾಯಪೂರ್ವ ಬಾಲಕಿಯರನ್ನು ಕೌಶಲಾಭಿವೃದ್ಧಿ, ತರಬೇತಿ ಅಥವಾ ತೆರೆದ ಶಾಲೆಗಳಿಗೆ ದಾಖಲಿಸಲು ಕ್ರಮವಹಿಸಲಾಗುತ್ತದೆ.
ಶಾಲೆಯಿಂದ ಹೊರಗುಳಿದ ಪ್ರಾಯಪೂರ್ವ ಬಾಲಕಿಯರನ್ನು ಮರಳಿ ಶಾಲೆಗೆ ಸೇರಿಸಲು ಸಮುದಾಯ/ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಚಾಲ್ತಿಯಲ್ಲಿರುವ ಯೋಜನೆಗಳಡಿ ಕ್ರಮವಹಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯಿಂದ ಹೊರಗುಳಿದ ಬಾಲಕಿಯರು ಕಾಡ್ಡಾಯವಾಗಿ ಶಾಲೆಗೆ ದಾಖಲಾಗಿರುವುದನ್ನು ಖಚಿತವಡಿಸಿಕೊಳ್ಳಬೇಕು. ಕ್ಷೇತ್ರ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆ ಮುಂತಾದವುಗಳು ಸಮನ್ವಯದಿಂದ ಕೆಲಸ ನಿರ್ವಹಿಸಿ 11-14 ವರ್ಷದ ಬಾಲಕಿಯರನ್ನು ಪುನಃ ಶಾಲೆಗೆ ಸೇರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಮಕ್ಕಳಿಗೆ ಅಭಿಯಾನದ ಅಂಗವಾಗಿ ಶಿಬಿರ ಆಯೋಜಿಸಿ,ಮಕ್ಕಳ ಕ್ರೀಡಾಕೂಟ, ಮಕ್ಕಳ ಸಾಂಸ್ಕೃತಿಕ ಚಟುವಟಿಕೆ, ಮಕ್ಕಳಿಗೆ ಕಥೆ ಹೇಳುವ ಕಾರ್ಯ ಕ್ರಮ, ಸ್ಥಳೀಯ ಸಾಂಪ್ರದಾಯಿಕ ಆಟೋಟಗಳು/ಚಟುವಟಿಕೆಗಳು, ಜಾನಪದ ಗೀತೆಗಳು ಮತ್ತು ರಂಗಭೂಮಿ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮ, ಚಿತ್ರಕಲೆ ಏರ್ಪಡಿಸಲಾಗುತ್ತದೆ.
ಗ್ರಾ.ಪಂ. ಶಿಕ್ಷಣ ಕಾರ್ಯಪಡೆಯಿಂದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಕ್ಕಳಿಗೆ ಮತ್ತು ಸಮುದಾಯಕ್ಕೆ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳು ಮತ್ತು ಕಿಶೋರಾವಸ್ಥೆಯ ಕಾರ್ಮಿಕತೆ ಕುರಿತು ಉಪನ್ಯಾಸಗಳನ್ನು ನಡೆಸುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಲು ವಿಜ್ಞಾನ ಕುರಿತು ಹಾಗೂ ಪವಾಡ ಬಯಲು ಮುಂತಾದ ಕಾರ್ಯಕ್ರಮಗ ಹಾಗೂ ಉಪನ್ಯಾಸ ಮತ್ತು ವಿಜ್ಞಾನ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ವಿವಿಧ ಸ್ಥಳಗಳಲ್ಲಿ ಕೈಗೊಳ್ಳಲಾಗುತ್ತದೆ.
ಪ್ರತಿ ಗ್ರಾಮ ಪಂಚಾಯತಿಯಿಂದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಗ್ರಾಮ ಪಂಚಾಯತ್ ಫೇಸ್ ಬುಕ್ ಪೇಜ್ ರಚಿಸಬೇಕು. ಈ ಫೇಸ್ ಬುಕ್ ಪೇಜ್‌ಗೆ ತಮ್ಮ ಗ್ರಾಮ ಪಂಚಾಯತಿ ಹೆಸರಿನೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಎಂಬ ಹೆಸರಿನ ಫೇಸ್ ಬುಕ್ ಪೇಜನ್ನು ಆಯಾ ಶಾಲಾ ಶಿಕ್ಷಕರು, ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಮೂಲಕ ಮಕ್ಕಳಿಗೆ ತಿಳಿಸಿ,ಮಕ್ಕಳ ಶಿಕ್ಷಣ/ಶಾಲೆ, ಆರೋಗ್ಯ, ಸೇವೆ, ರಕ್ಷಣೆ ವ್ಯವಸ್ಥೆ, ವಸತಿ ನಿಲಯಗಳು, ಆಹಾರ ಮತ್ತು ಪೌಷ್ಟಿಕತೆ, ವಿಪತ್ತು ನಿರ್ವಹಣೆ, ನೀರು, ನೈರ್ಮಲ್ಯ ಶುಚಿತ್ವ, ರಸ್ತೆ/ ಸಾರ್ವಜನಿಕ ಕಟ್ಟಡ ಶಾಲೆ/ ಅಂಗನವಾಡಿ, ವಸತಿ ಸೌಲಭ್ಯ, ಮಾನವ ಸಂಪನ್ಮೂಲ ಮುಂತಾದ ಕ್ಷೇತ್ರ/ವಿಷಯಗಳಿಗೆ ಸಂಬಂಧಿಸಿದ ಅವರ ಸಮಸ್ಯೆಗಳು/ಬೇಡಿಕೆಗಳು/ಪ್ರಶ್ನೆಗಳನ್ನು ಪೇಸ್ ಬುಕ್ ಪೇಜ್‌ನಲ್ಲಿ ದಾಖಲಿಸಬೇಕು ಎಂದು ತಿಳಿಸಲಾಗಿದೆ.
ನ. 14, 2023 ರಿಂದ 24 ಜನವರಿ 2024 ರ ವರೆಗೆ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ನಿಗದಿಪಡಿಸಿದ ದಿನಾಂಕ ನಡೆಯಲಿವೆ. ಮಕ್ಕಳ ಗ್ರಾಮ ಸಭೆಯ ಕುರಿತು ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ, ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಭಾಗೀದಾರರಾದ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಮಟ್ಟದ ಮಕ್ಕಳ ಸಂರಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಎಸ್.ಡಿ.ಎಂ.ಸಿ., ಆರೋಗ್ಯ, ಪೊಲೀಸ್ ಇಲಾಖೆ, ಸ್ಥಳೀಯ ಸ್ವ-ಸಹಾಯ ಸಂಘದ ಪ್ರತಿನಿಧಿಗಳು, ಯುವಕ/ಯುವತಿ ಮಂಡಳಿಗಳು, ಸ್ವಯಂ ಸೇವಾ ಸಂಸ್ಥೆಗಳಿಗೆ ಮುಂಚಿತವಾಗಿ ತಿಳಿಸಬೇಕು. ಈ ಎಲ್ಲ ಅಧಿಕಾರಿಗಳು ಮತ್ತು ಅಧಿಕಾರೇತರರು ಭಾಗವಹಿಸುವಂತೆ ನೋಡಿಕೊಳ್ಳಬೇಕು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ/ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ವಿಶೇಷ ಆಹ್ವಾನ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.ಶಾಲೆಗಳಲ್ಲಿರುವ ಮಕ್ಕಳ ಹಕ್ಕುಗಳ ಕ್ಲಬ್ ಪ್ರತಿವಿಧಿ, ಮಕ್ಕಳ ಸುರಕ್ಷತಾ ಸಮಿತಿಗಳ ಪ್ರತಿನಿಧಿ, ಶಾಲಾ ಕ್ಯಾಬಿನೆಟ್‌ನ ಮುಖ್ಯಮಂತ್ರಿ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿಯ ಪ್ರತಿನಿಧಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪ್ರತಿನಿಧಿ, ಆಸಕ್ತ ಪೋಷಕರು, ಬಾಲ ವಿಕಾಸ ಸಮಿತಿ, ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಯ ಪ್ರತಿನಿಧಿ ಇವರುಗಳಿಗೆ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ತಿಳಿಸಿ, ಮಕ್ಕಳ ಹಕ್ಕುಗಳ ಗ್ರಾಮ ಸಭೆಗೆ ಮಂಡಿಸಬೇಕು ಎಂದು ಪಂಚಾಯತ್ ರಾಜ್ ಆಯುಕ್ತಾಲಯ ಸುತ್ತೋಲೆಯಲ್ಲಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
