ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದ್ದು, ಸರ್ಕಾರ ರೋಗ ಲಕ್ಷಣ ರಹಿತ (ಎ-ಸಿಮ್ಟಮ್ಯಾಟಿಕ್) ರೋಗಿಗಳಿಗೆ ಮನೆ ಆರೈಕೆ ಕ್ರಮ ಜಾರಿಗೊಳಿಸಿದೆ.
ಈವರೆಗೂ ಸೋಂಕಿಗೊಳಗಾಗಿರುವ ಶೇ.90ಕ್ಕೂ ಅಧಿಕ ಮಂದಿಯಲ್ಲಿ ರೋಗ ಲಕ್ಷಣಗಳೇ ಕಂಡುಬಂದಿಲ್ಲ. ಇನ್ನೂ ಕೆಲವರು ಅತೀ ಕಡಿಮೆ ಲಕ್ಷಣಗಳನ್ನು ಹೊಂದಿದ್ದಾರೆ. ಇಂತಹವರಿಗೆ ಮನೆಯಲ್ಲಿಯೇ ಆರೈಕೆ ಮಾಡುವ ಹೋಂ ಐಸೋಲೇಷನ್ ಅಥವಾ ಮನೆ ಆರೈಕೆ ಕ್ರಮಕ್ಕೆ ನಿಮಯ ರೂಪಿಸಲಾಗಿದೆ. ಎ-ಸಿಮ್ಟಮ್ಯಾಟಿಕ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಮನೆಯಲ್ಲಿಯೇ ಆರೈಕೆ ಮಾಡಲು ಐಸಿಎಂಆರ್ ಕೆಲ ವಾರಗಳ ಹಿಂದೆಯೇ ಅನುಮತಿ ನೀಡಿದೆ. ಇದನ್ನು ಅನುಸಿರಿಸಿ ಈಗಾಗಲೇ ನವದೆಹಲಿಯಲ್ಲಿ ಲಕ್ಷಣ ರಹಿತ ರೋಗಿಗಳಿಗೆ ಮನೆ ಅರೈಕೆ ಕ್ರಮ ಜಾರಿಗೊಳಿಸಲಾಗಿದೆ. ಇದೀಗ ತಜ್ಞರ ಸಲಹೆ ಮೇರೆಗೆ ನವದೆಹಲಿ ಮಾದರಿ ಅನುಸರಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಮನೆ ಆರೈಕೆ ಹೇಗೆ?:ರೋಗ ಲಕ್ಷಣ ರಹಿತರನ್ನು ಈವರೆಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಇರಿಸಿ ಜ್ವರ ನಿವಾರಣೆ ಮಾತ್ರೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಬೇರಾವುದೇ ಚಿಕಿತ್ಸೆ ನೀಡುತ್ತಿರಲಿಲ್ಲ. ಇದೇ ರೀತಿ ಮನೆಯಲ್ಲಿ ಐಸೋಲೇಷನ್ ಆದವರು ಆರೋಗ್ಯ ಸಿಬ್ಬಂದಿ ನೀಡುವ ಔಷಧಿ ಸೇವಿಸಬೇಕು ಹಾಗೂ ಅವರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು.
ನಿಯಮಗಳ ಪಾಲನೆ?:ಮನೆ ಆರೈಕೆಯಲ್ಲಿ ಇರುವವರು ಮನೆಯಲ್ಲಿ ವಾಸವಿರುವ ಯಾರೊಬ್ಬರ ಸಂಪರ್ಕಕ್ಕೂ ಬಾರದೆ ಪ್ರತ್ಯೇಕವಾಗಿ ಇರಬೇಕು. ಪ್ರತ್ಯೇಕ ಸ್ನಾನ ಗೃಹ ಹಾಗೂ ಶೌಚಗೃಹ ಬಳಸಬೇಕು. ಸೋಂಕಿತರು ಬಳಸುವ ಯಾವುದೇ ವಸ್ತುಗಳನ್ನು ಇತರರು ಮುಟ್ಟದಂತೆ ಎಚ್ಚರವಹಿಸಬೇಕು ಎಂದು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ನಾಗರಾಜ್ ತಿಳಿಸಿದ್ದಾರೆ.
ಮನೆ ಮದ್ದು ಹೇಗೆ?
ಸೋಂಕಿತರು ರೋಗದ ವಿರುದ್ಧ ಹೋರಾಡಲು ಆರೋಗ್ಯಕರ ಪೌಷ್ಟಿಕ ಆಹಾರ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಆಯುಷ್ ಇಲಾಖೆ ಕೆಲ ಸಲಹೆಗಳನ್ನು ನೀಡಿದೆ. ಬಿಸಿ ನೀರು ಇಲ್ಲವೆ ಕಾಯಿಸಿ ಆರಿಸಿದ ನೀರು ಸೇವನೆ ಉತ್ತಮ. ನಿತ್ಯ ಬೆಳಗ್ಗೆ 10 ಗ್ರಾಂ ಚ್ಯವನ್​ಪ್ರಾಶ್ ತಿನ್ನಬೇಕು. ತುಳಸಿ, ಚಕ್ಕೆ, ಕರಿಮೆಣಸು, ಒಣಶುಂಠಿ ಸೇರಿಸಿ ಕಷಾಯ ತಯಾರಿಸಿ ದಿನಕ್ಕೆ ಎರಡು (15-20 ಮಿ.ಲೀ.) ಬಾರಿ ಕುಡಿಯಬೇಕು. ಬೇಕೆನಿಸಿದರೆ ಕಷಾಯಕ್ಕೆ ಬೆಲ್ಲ ಹಾಗೂ ನಿಂಬೆ ರಸ ಬೆರೆಸಿ ಸೇವಿಸಬಹುದು. ನಿತ್ಯ ಎರಡು ಬಾರಿ ಒಂದು ಲೋಟ ಹಾಲಿಗೆ ಆರ್ಧ ಚಮಚ ಅರಿಶಿನ ಬೆರೆಸಿ ಕುಡಿಯಬೇಕು. ಮನೆ ಆರೈಕೆಯಲ್ಲಿ ರೋಗ ತೀವ್ರತೆ ಹೆಚ್ಚಿದ ಸಂದರ್ಭದಲ್ಲಿ ನಿರ್ಲಕ್ಷಿಸದೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಸೋಂಕು ಪ್ರಕರಣಗಳ ಏರಿಕೆ, ಸೌಲಭ್ಯಗಳ ಕೊರತೆ ಸೇರಿ ನಾನಾ ಕಾರಣಗಳಿಂದ ರಾಜ್ಯ ಸರ್ಕಾರ ಮನೆ ಆರೈಕೆ ಕ್ರಮ ಜಾರಿಗೆ ಸಜ್ಜಾಗಿದೆ.
ಬಿಹಾರ್​ ಸಿಎಂಗೆ ಕರೊನಾ ಭೀತಿ; ಮುಖ್ಯಮಂತ್ರಿಯ ನಾಲ್ವರು ಕಾರ್ಯದರ್ಶಿಗಳಲ್ಲಿ ಸೋಂಕು ದೃಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
