ಚಿತ್ರದುರ್ಗ:ಲವ್ ಜಿಹಾದ್ ತಡೆಗೆ ಪೊಲೀಸರ ವಿಶೇಷ ಕಾರ್ಯಪಡೆಯ ಅಗತ್ಯವಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಲವ್ ಜಿಹಾದ್ ತಡೆಗೆ ಪೊಲೀಸರ ವಿಶೇಷ ಕಾರ್ಯಪಡೆ ರಚಿಸಿ ಎಂದು ಹಿಂದೂ ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ‌. ಲವ್ ಜಿಹಾದ್ ಮತಾಂತರ ನಿಷೇಧ ಕಾಯ್ದೆಯಡಿಯಲ್ಲೇ ಬಂದಿದೆ ಎಂದು ಅವರಿಗೆ ಹೇಳಿದ್ದೇನೆ. ನಮ್ಮ ಪೊಲೀಸರು ಈ ಕುರಿತು ಕೇಸ್​ಗಳನ್ನ ದಾಖಲಿಸಬೇಕು. ಬೆಂಗಳೂರಿನ ಒಂದು ಠಾಣೆಯಲ್ಲಿ ಕೇಸ್ ಮಾಡಿದ್ದಾರೆ. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಹೋಗಲು ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಮತಾಂತರ ಮಾಡುವ ಮೊದಲು ಡಿಸಿ ಅವರಿಗೆ ಒಂದು‌ ತಿಂಗಳ ಮೊದಲು ತಿಳಿಸಬೇಕು. ಮತಾಂತರ ಮಾಡುವವರು, ಮತಾಂತರ ಆಗುವವರು ಇಂಥ ಧರ್ಮಕ್ಕೆ ಹೋಗುತ್ತೇವೆ ಎಂದು ತಿಳಿಸಬೇಕು. ಡಿಸಿ ಅವರು ಪರಿಶೀಲನೆ ಮಾಡಿದ ಬಳಿಕ ಅನುಮತಿ ನೀಡುತ್ತಾರೆ. ಈ ಕುರಿತು ಮತಾಂತರ ಕಾಯ್ದೆಯಲ್ಲಿ ಎಲ್ಲವೂ ಇದೆ ಎಂದು ವಿವರಿಸಿದರು.
ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಹೊಸ ಕಾಯ್ದೆಯ ಅಗತ್ಯವಿಲ್ಲ. ಮತಾಂತರ ನಿಷೇಧ ಮಾಡಿದ್ದೇ ಈ ಉದ್ದೇಶದಿಂದ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತಾಂತರ ಆಗುತ್ತಿದೆ. ಅನೇಕ ಸ್ವಾಮೀಜಿಗಳು ಕೂಡ ಈ ಕುರಿತು ಚರ್ಚೆ ಮಾಡಿದ್ದರು. ಯಾರೇ ಮತಾಂತರ ಮಾಡುವುದು ಕಂಡು ಬಂದರೆ ದೂರು ನೀಡಬೇಕು. ಸ್ಪೆಷಲ್ ಟಾಸ್ಕ್ ಫೋರ್ಸ್ ಅಗತ್ಯ ಇಲ್ಲ, ಆ ಸಂದರ್ಭದಲ್ಲಿ ನೋಡೋಣ ಎಂದರು.
ತಂದೆಯನ್ನ ಕೊಂದು ಶವ ತುಂಡರಿಸಿ ಕೊಳವೆಬಾವಿಗೆ ತುರುಕಿದ ಮಗ! ಬಾಗಲಕೋಟೆಯಲ್ಲಿ ಭಯಾನಕ ಕೃತ್ಯ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 11 =
Remember me
