ಬೆಂಗಳೂರು:ಜನರ ಒಳಿತಿಗಾಗಿ ಕೋವಿಡ್​-19 ಸೋಂಕು ತಡೆಗಟ್ಟಲು ಲಾಕ್​ಡೌನ್ ಹೇರಿದ್ದರೂ, ಬೇಕಾಬಿಟ್ಟಿ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಗೃಹ ಸಚಿವರು ಹಾಗೂ ಪೊಲೀಸ್​ ಆಯುಕ್ತರು ಶಾಕ್ ಕೊಟ್ಟಿದ್ದಾರೆ.​ಇಂದು ಮಟ-ಮಟ ಮಧ್ಯಾಹ್ನ ರಸ್ತೆಗಿಳಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ​ ಭಾಸ್ಕರ್ ರಾವ್ ಚೆಕ್​ಪೋಸ್ಟ್​ಗಳ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕೆಜಿ ಹಳ್ಳಿಯ ಮುಖ್ಯರಸ್ತೆಯಲ್ಲಿ ಖಾಸಗಿ‌ ವಾಹನಗಳಲ್ಲಿ ಸಾರ್ವಜನಿಕರಂತೆ ಓಡಾಡಿ ಗಮನ ಸೆಳೆದರು.
ತಪಾಸಣೆ ವೇಳೆ ನಕಲಿ ಕರೊನಾ ಪೊಲೀಸ್ ಪಾಸ್ ಕೂಡ ಪತ್ತೆಯಾಗಿದೆ. ಗೃಹಸಚಿವರ ಪರಿಶೀಲನೆ​ ವೇಳೆ ನಕಲಿ ಪಾಸ್ ಹೊಂದಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಗೂಡ್ಸ್ ಆಟೋ ಹಾಗೂ ಒಂದು ಕಾರ್​ನಲ್ಲಿ ನಕಲಿ ಪಾಸ್ ಪತ್ತೆಯಾಗಿದೆ. ಮೂಲ ಪಾಸ್ ಅನ್ನು ಕಲರ್ ಝೆರಾಕ್ಸ್ ಮಾಡಿ ಪೊಲೀಸರಿಗೆ ಚಮಕ್ ನೀಡಿದ್ದಾರೆ.
ನಕಲಿ ಪಾಸ್​ ಹೊಂದಿದ್ದ ಚಾಲಕರ ಮೈ ಚಳಿ ಬಿಡಿಸಿದ ಬಸವರಾಜ್ ಬೊಮ್ಮಾಯಿ, ಗೂಡ್ಸ್ ಆಟೋ ಹಾಗೂ ಕಾರ್ ಸೀಜ್ ಮಾಡುವಂತೆ ಆದೇಶಿಸಿದರು. ಪಾಸ್ ಇಲ್ಲದೇ ಓಡಾಡುತ್ತಿದ್ದವರಿಗೆ ಇದೇ ಕೊನೆಯ ಎಚ್ಚರಿಕೆ ಎಂದರು.
ದುಬೈನಿಂದ ಮರಳಿದ್ದ ಪತಿಗೆ ನೆಗೆಟಿವ್ ಇದ್ದರೂ ಗರ್ಭಿಣಿ ಪತ್ನಿಗೆ ಕರೊನಾ ಪಾಸಿಟಿವ್​!

ಲಾಕ್​ಡೌನ್​ ಅವಧಿಯಲ್ಲಿ ಜನ ಮನೇಲಿ ಏನು ಮಾಡುತ್ತಿದ್ದಾರೆ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
