ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದರೂ ಜನ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪ್ರತಿದಿನ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಾಸಗಿ ವಾಹನದಲ್ಲಿ ಬುಧವಾರ ನಗರದಲ್ಲಿರುವ ಚೆಕ್​ಪೋಸ್ಟ್​ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಖಾಸಗಿ ವಾಹನದಲ್ಲಿ ಸಾರ್ವಜನಿಕರಂತೆ ಓಡಾಡಿ ಚೆಕ್​ಪೋಸ್ಟ್​ಗಳ ವಾಸ್ತವ ಸ್ಥಿತಿ ಪರಿಶೀಲಿಸಿದಾಗ ನಕಲಿ ಪಾಸ್ ಹೊಂದಿದ್ದ ಕೆಲವರು ಸಿಕ್ಕಿಬಿದ್ದಿದ್ದಾರೆ. ಕೆ.ಜಿ. ಹಳ್ಳಿ ಮುಖ್ಯರಸ್ತೆಯಲ್ಲಿ ಖುದ್ದು ಗೃಹ ಸಚಿವರು ವಾಹನ ಪರಿಶೀಲನೆ ನಡೆಸಿದಾಗ ಗೂಡ್ಸ್ ಆಟೋ ಹಾಗೂ ಒಂದು ಕಾರಿನಲ್ಲಿ ನೈಜ ಕರೊನಾ ಪಾಸ್ ಅನ್ನು ಕಲರ್ ಜೆರಾಕ್ಸ್ ಮಾಡಿ ವಾಹನಕ್ಕೆ ಅಂಟಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿರುವುದು ಬೆಳಕಿಗೆ ಬಂದಿತು. ಕೂಡಲೇ ಕಾರು ಹಾಗೂ ಗೂಡ್ಸ್ ವಾಹನ ಜಪ್ತಿ ಮಾಡಲು ಪೊಲೀಸರಿಗೆ ಸೂಚಿಸಿದರು. ನಂತರ ನಕಲಿ ಪಾಸ್ ಹೊಂದಿದ ಚಾಲಕರನ್ನು ತರಾಟೆಗೆ ತೆಗೆದುಕೊಂಡರು.
ಪಾಸ್ ಇಲ್ಲದೆ ಓಡಾಡುವವರಿಗೆ ಕೊನೆಯ ಎಚ್ಚರಿಕೆ ಕೊಟ್ಟ ಬಸವರಾಜ ಬೊಮ್ಮಾಯಿ, ಮುಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮೊದಲಿಗೆ ನಗರದಲ್ಲಿ ವಾಹನ ಸಂಚಾರ ಇದೆಯೇ ಎಂದು ತಿಳಿದುಕೊಳ್ಳಲು ಗೃಹ ಸಚಿವರು ಸಿಟಿ ರೌಂಡ್ಸ್ ನಡೆಸಿದರು. ಇದಾದ ಬಳಿಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜತೆ ಖಾಸಗಿ ವಾಹನದಲ್ಲಿ ನಗರದ ಪೂರ್ವ ವಿಭಾಗ, ಉತ್ತರ ವಿಭಾಗ, ಪಶ್ಚಿಮ ವಿಭಾಗದ ಚೆಕ್ ಪೋಸ್ಟ್​ಗಳಿಗೆ ಹೋಗಿ ಜನರು ಲಾಕ್​ಡೌನ್ ಪಾಲಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸಿದರು.
ಪ್ರತಿದಿನ ವಾಹನ ಪರಿಶೀಲನೆ ಬಗ್ಗೆ ಮಾಹಿತಿ:ಪೂರ್ವ, ಉತ್ತರ ಮತ್ತು ಪಶ್ಚಿಮ ವಿಭಾಗದಲ್ಲಿ ಶಿವಾಜಿನಗರ, ಹೆಬ್ಬಾಳ, ಪೀಣ್ಯ, ಮೆಜೆಸ್ಟಿಕ್, ಟ್ರಿನಿಟಿ ರಸ್ತೆ ಮುಂತಾದ ಕಡೆ ಪೊಲೀಸ್ ಅಧಿಕಾರಿಗಳ ಜತೆ ತೆರಳಿ ರಸ್ತೆಗಳಲ್ಲಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದ ಗೃಹ ಸಚಿವರು ಸಂಚಾರ ಪಾಸ್ ಪಡೆಯದ ವಾಹನಗಳನ್ನು ಜಪ್ತಿ ಮಾಡಿಸಿದರು. ಚೆಕ್ ಪೋಸ್ಟ್​ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಕುಶಲೋಪರಿ ವಿಚಾರಿಸಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಪ್ರತಿದಿನ ನಡೆಸುತ್ತಿರುವ ವಾಹನ ಪರಿಶೀಲನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಕರೊನಾ ಸೋಂಕು ತಡೆಗೆ ಪರಿಕರ ಪೂರೈಕೆ ಸಿದ್ಧತೆಗಳೇನು?- ಸರ್ಕಾರದಿಂದ ಸ್ಪಷ್ಟ ಮಾಹಿತಿ ಕೇಳಿದ ಹೈಕೋರ್ಟ್

ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
