
ಬೆಂಗಳೂರು:ಗೃಹ ಸಚಿವರ ರಾಜೀನಾಮೆಯಿಂದ ಪ್ರಯೋಜನವಿಲ್ಲ. ಅವರನ್ನು ಮುಖ್ಯಮಂತ್ರಿಗಳೇ ಸಂಪುಟದಿಂದ ವಜಾ ಮಾಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರಕ್ಕೆ ಜೀವ ಇದೆಯೇ? ಮಹಿಳೆಯರು, ದಲಿತರು, ಹಿಂದುಳಿದವರನ್ನು ರಕ್ಷಿಸುವಲ್ಲಿ, ಅಮಾಯಕರನ್ನು ರಕ್ಷಿಸುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯವು ಕೊಲೆಗಡುಕರ ನೆಲೆವೀಡಾಗಿದೆ. ಒಂದು ವರ್ಷದಲ್ಲಿ ಆದ ಸರಣಿ ಹತ್ಯೆಗಳ ಕುರಿತು, ಸರಣಿ ಅತ್ಯಾಚಾರ, ಸರಣಿ ದೌರ್ಜನ್ಯಗಳ ಬಗ್ಗೆ ಮುಖ್ಯಮಂತ್ರಿ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.ದಿನಕ್ಕೆ 2-3 ಕೊಲೆಗಳಾಗುತ್ತಿವೆ. ಅಮಾಯಕರ ಮೇಲೆ ಸುಳ್ಳು ಕೇಸು ಹಾಕಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಅಂಜಲಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಂಜಲಿ ಹತ್ಯೆಗೂ ಮೊದಲು ಕೊಲೆಗಾರ ನಿನ್ನನ್ನೂ ನೇಹಾ ಮಾದರಿಯಲ್ಲಿ ಹತ್ಯೆ ಮಾಡುವುದಾಗಿ ತಿಳಿಸಿದ್ದ. ಹತ್ಯೆಗೀಡಾದ ಯುವತಿ ಮತ್ತು ಅವರ ಅಜ್ಜಿ ಖುದ್ದಾಗಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರೂ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದರು.ಅತಿ ಹೆಚ್ಚು ಅಪರಾಧ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಪೊಲೀಸರಿಗೆ ಪೊಲೀಸರ ಕರ್ತವ್ಯ ಮಾಡಲು ಸರ್ಕಾರ ಅವಕಾಶ ಮಾಡಿ ಕೊಡದೆ ಇರುವುದೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು.ಪ್ರೀತಿ ಮಾಡದೆ ಇದ್ದರೆ ಹೆಣ್ಣುಮಕ್ಕಳ ಹತ್ಯೆ, ಮಾತು ಕೇಳದಿದ್ದರೂ ಹತ್ಯೆ, ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸುವುದು, ಸಾಮೂಹಿಕ ಅತ್ಯಾಚಾರ, ರೊಟ್ಟಿ ಕೇಳಲು ಹೋದ ವ್ಯಕ್ತಿಯ ಕೊಲೆ, ಕಾರಿನ ವ್ಯವಹಾರದಲ್ಲಿ ವ್ಯಕ್ತಿಯನ್ನು ನಗ್ನಗೊಳಿಸಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಡುವುದು ನಡೆದಿದೆ. ನಾವು ಕರ್ನಾಟಕದಲ್ಲಿ ಇದ್ದೇವಾ? ಎಲ್ಲಿದ್ದೇವೆ? ಎಂದು ಅವರು ಪ್ರಶ್ನಿಸಿದರು.
*ಪ್ರಜ್ವಲ್ ಹೊರ ದೇಶಕ್ಕೆ ಹೋಗಲು ಬಿಟ್ಟವರು ಯಾರು? ರಾಜ್ಯದಲ್ಲಿಯೇ ಇದ್ದಾಗ ಬಂಧಿಸಬಹುದಿತ್ತಲ್ಲವೇ? ಇವರೇ ಹೊರ ದೇಶಕ್ಕೆ ಕಳುಹಿಸಿಕೊಟ್ಟು, ರಾಜಕೀಯ ಮಾಡಿದರೆ ಹೇಗೆ? ಬ್ಲೂ ಕಾರ್ನರ್ ನೋಟೀಸ್ ಕೊಟ್ಟು ಸುಮ್ಮನೆ ಕುಳಿತರೆ ಆಗುತ್ತದೆಯೇ? ಆರೋಪಿ ಇರುವುದನ್ನು ಟ್ರ್ಯಾಕ್ ಮಾಡಿಕೊಂಡು ವಿದೇಶಕ್ಕೆ ಹೋಗಿ ಯಾಕೆ ಬಂದಿಸುತ್ತಿಲ್ಲ?-ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
