ಬೆಂಗಳೂರು: ದೆಹಲಿ ಭೇಟಿ ವಿಚಾರದಲ್ಲಿ ಏನು ಅಜೆಂಡಾ ಇದೆ ಗೊತ್ತಿಲ್ಲ. ಈ ಹಿಂದೆಯೂ ನಾಯಕರುಗಳು ಇಲ್ಲಿಗೇ ಬರುತ್ತಿದ್ದರು. ಕೆಲವೊಮ್ಮೆ ನಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಗುಲಾಂ ನಬಿ ಆಜಾದ್ ಪ್ರಧಾನ ಕಾರ್ಯದರ್ಶಿಯಾದಾಗ ಅವರೇ ಸಚಿವರ ಜತೆಗೆ ಒನ್ ಟು ಒನ್ ಮಾಹಿತಿ ಪಡೆಯುತ್ತಿದ್ದರು ಎಂದು ಗೃಹ ಸಚಿವ ಜಿ.ಪರಮೇಶ್ವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಪಕ್ಷದ ದೆಹಲಿ ಸಭೆಯಲ್ಲಿ ಲೋಕಸಭೆ ಚುನಾವಣೆ ಸಿದ್ಧತೆಗಳ ಬಗ್ಗೆಯೂ ಚರ್ಚೆ ಆಗಬಹುದು ಎಂದ ಅವರು ಸಚಿವರ ಕಾರ್ಯ ಪರಿಶೀಲನೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಮನ್ವಯ ಸಮಿತಿ ರಚನೆ ವಿಚಾರದಲ್ಲಿ ಏನು ಅಭಿಪ್ರಾಯ ಇದೆಯೋ ಗೊತ್ತಿಲ್ಲವೆಂದರು.ನೈತಿಕ ಪೊಲೀಸ್ ಗಿರಿ ನಿಯಂತ್ರಣಕ್ಕೆ ಕಠಿಣ ಕ್ರಮ‌ ತೆಗೆದುಕೊಂಡಿದ್ದೇವೆ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನೈತಿಕ ಪೊಲೀಸ್ ನಿಯಂತ್ರಣ ಮಾಡಲು ಪ್ರತ್ಯೇಕ ವಿಂಗ್ ಸ್ಥಾಪನೆ ಮಾಡಿದ್ದೇವೆ. ಅ ವಿಂಗ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಅದು ಮಾಡಿದ ಕೂಡಲೇ ತಕ್ಷಣ ನಿಲ್ಲುತ್ತದೆ ಅಂತ ಅಲ್ಲ. ನಾವು ಕಠಿಣವಾಗಿ ಇಂತಹ ಪ್ರಕರಣ ಆಗಬಾರದು ಅಂತ ಸೂಚನೆ ನೀಡಿದ್ದೇವೆ. ಯಾವುದೇ ಧರ್ಮದವರು ಇದ್ದರು ಅವರ ಕ್ರಮ ಆಗಬೇಕು. ಕಾನೂನು ಕೈಗೆ ಎತ್ತಿಕೊಳ್ಳುವ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದ್ದೇವೆ. ಯಾರೇ ಇದರಲ್ಲಿ ಭಾಗಿಯಾಗಿದ್ದರು ಕಾನೂನಿನ ಪ್ರಕಾರ ಕ್ರಮ ಆಗಲಿದೆ ಎಂದು ಹೇಳಿದರು.ಸಿಎಂ ಜತೆ ರಹಸ್ಯ ಮಾತುಕತೆ ವಿಚಾರವಾಗಿ ಪ್ರತಿಕ್ರಿಯೆ,ಹೌದು ಸಿಎಂ ಜತೆಗೆ ‌ಕುಳಿತು ರಹಸ್ಯವಾಗಿಯೇ ಮಾತುಕತೆ ಮಾಡಿದ್ದೇವೆ. ವರ್ಗಾವಣೆ ವಿಚಾರವಾಗಿ ರಹಸ್ಯವಾಗಿಯೇ ಮಾತನಾಡಿದ್ದೇನೆ. ವರ್ಗಾವಣೆ ವಿಚಾರವನ್ನು ಬೀದಿಯಲ್ಲಿ ಕುಳಿತು ಮಾತನಾಡುವುದಕ್ಕೆ ಸಾಧ್ಯವೇ? ಹಿಂದೆಯೂ ಮಾತನಾಡಿದ್ದೇವೆ ಮುಂದೆಯೂ ರಹಸ್ಯವಾಗಿಯೇ ಮಾತನಾಡುತ್ತೇನೆ ಎಂದರು.ಉಡುಪಿ ಪ್ರಕರಣದ ವಿಷಯದಲ್ಲಿ ಬಿಜೆಪಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ಒತ್ತಾಯ ಮಾಡಲೇಬೇಕು.ಅವರು ಹೇಳಿದರು ಎಂದು ನಾವು ಅದನ್ನ ಕೇಳಬೇಕು ಅಂತ ಏನು ಇಲ್ಲ. ಅವರು ಬೇಕಾದ್ರೆ ರಚನಾತ್ಮಕವಾಗಿ ಸಲಹೆ ಕೊಟ್ಟರೆ ಪರವಾಗಿಲ್ಲ. ಅದು ಬಿಟ್ಟು ಪ್ರತಿಭಟನೆ ಮಾಡಿದರೆ ಅವರು ಪ್ರತಿಭಟನೆ ಮಾಡಲಿ. ಅವರ ಪಕ್ಷದ ಖುಷ್ಬು ಅವರೇ ಹೇಳಿದ ಮೇಲೂ ಅವರು ನಂಬಲಿಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು.ಸೌಜನ್ಯ ಹತ್ಯೆ ಪ್ರಕರಣ ಮರು ತನಿಖೆ ವಿಚಾರವಾಗಿ ಮಾತನಾಡಿ, ಮತ್ತೆ ಸೌಜನ್ಯ ಕೊಲೆ ಪ್ರಕರಣದ ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸದ್ಯಕ್ಕೆ ಅಂತಹ ಯೋಚನೆ ನಮ್ಮ ಮುಂದೆ ಇಲ್ಲ. ಮುಖ್ಯಮಂತ್ರಿಗಳಿಂದಲೂ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 3 =
Remember me
